ಮಂಗಳವಾರ, ಮೇ 18, 2021
22 °C

ಗಾಲ್ಫ್: ಅದಿತಿಗೆ ಎರಡನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಥಳೀಯ ಗಾಲ್ಫರ್ ಅದಿತಿ ಅಶೋಕ್ ಇಲ್ಲಿ ನಡೆದ `ಕರ್ನಾಟಕ ಲೇಡಿಸ್ ಗಾಲ್ಫ್' ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಗುರ್ಬಾನಿ ಸಿಂಗ್ ಚಾಂಪಿಯನ್ ಆದರು.



ಬೆಂಗಳೂರು ಗಾಲ್ಫ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಮೂರನೇ ಸುತ್ತಿನಲ್ಲಿ ಗುರ್ಬಾನಿ 67 ಅವಕಾಶ ಬಳಸಿಕೊಂಡು ಉತ್ತಮ ಪ್ರದರ್ಶನ ತೋರಿದರು. ಈ ಮೂಲಕ ಅವರು ಒಟ್ಟು 208 (71, 68 ಹಾಗೂ 67) ಸ್ಟ್ರೋಕ್‌ಗಳ ಮೂಲಕ ಅಗ್ರಸ್ಥಾನ ಗಳಿಸಿದರು. ಅದಿತಿ (ಒಟ್ಟು 208) ಕೊನೆಯ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.



ಗುರ್ಬಾನಿ `ಎ' ವಿಭಾಗದಲ್ಲೂ ಮೊದಲ ಸ್ಥಾನ ಪಡೆದರು. `ಬಿ' ವಿಭಾಗದಲ್ಲಿ ಅಮೃತಾ ಆನಂದ್ ಹಾಗೂ `ಸಿ' ವಿಭಾಗದಲ್ಲಿ ಅನನ್ಯಾ ಕ್ರಮವಾಗಿ ಅಗ್ರಸ್ಥಾನ ಗಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.