ಬುಧವಾರ, ಮೇ 12, 2021
20 °C

ಗಾಳಿ-ಮಳೆಗೆ ಬೀಜೋತ್ಪಾದನೆ ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ತಾಲ್ಲೂಕಿನ ಶ್ರೀರಾಮನ ಕೊಪ್ಪ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಆಲಿಕಲ್ಲು ಮಳೆ ಹಾಗೂ ಗಾಳಿಗೆ ಹತ್ತಾರು ಎಕರೆ ವಾಣಿಜ್ಯ ಬೆಳೆಗಳು ನಾಶವಾಗಿದ್ದು, ಅಪಾರ ಪ್ರಮಾಣದಲ್ಲಿ ಬೆಳೆಹಾನಿ ಸಂಭವಿಸಿದೆ.ದೊಡ್ಡ ಗಾತ್ರದ ಆಲಿಕಲ್ಲು ಗಳೊಂದಿಗೆ ಸತತ ಸುರಿದ ಭಾರಿ ಮಳೆ ಹಾಗೂ ಅಪಾರ ಗಾಳಿಗೆ ಪ್ರಮುಖ ವಾಣಿಜ್ಯ ಬೆಳೆಗಳಾದ ಬೀಜೋತ್ಪಾದ ನೆಯ ಟೊಮೆಟೊ ಹಾಗೂ ಹಾಗಲ ಗಿಡಗಳು ಸಂಪೂರ್ಣ ನೆಲಕ್ಕುರುಳಿ ರೈತರಿಗೆ ತೀವ್ರ ಹಾನಿ ಉಂಟು ಮಾಡಿದೆ. ಬೀಜೋತ್ಪಾದನೆಗೆ ಹಾಕಲಾಗಿದ್ದ ಮೆಸ್ ಬೆಳೆಗಳ ಮೇಲೆ ಬಿದ್ದಿರುವುದರಿಂದ ಕೂಡ ಹಾನಿಯಾಗಿದೆ.ಉತ್ತಮ ಆದಾಯ ಗಳಿಸುವ ಉದ್ದೇಶದಿಂದ ಸಾಂಪ್ರಾದಾಯಿಕ ಬೆಳೆ ಗಳನ್ನು ಕೈಬಿಟ್ಟು ವಾಣಿಜ್ಯ ಬೆಳೆಗಳ ಮೊರೆ ಹೋಗಿದ್ದ ರೈತರು ಹೆಚ್ಚಾಗಿ ಬೀಜೋತ್ಪಾದನೆಯಲ್ಲಿ ತೊಡಗಿ, ಉತ್ತಮ ಫಸಲು ಬರುವ ನಿರೀಕ್ಷೆ ಹೊಂದಿದ್ದರು.ಅಕಾಲಿಕವಾಗಿ ಸುರಿದ ಭಾರಿ ಮಳೆಗೆ ಬೆಳೆ ನೆಲೆಕ್ಕುರುಳಿ ಹಾಳಾಗಿದ್ದು, ಲಕ್ಷಾಂತರ ರೂಪಾಯಿ ಬಂಡವಾಳವನ್ನು ತೊಡಗಿಸಿ ಲಾಭದ ನಿರೀಕ್ಷೆಯನ್ನು ಹೊಂದಿದ್ದ ರೈತರ ಭರ ವಸೆಯನ್ನು ಮಣ್ಣುಪಾಲು ಮಾಡಿವೆ.`ಸಾಲವನ್ನು ಮಾಡಿ ಬೀಜೋತ್ಪಾ ದನೆಯ ಟೊಮೆಟೊ ಹಾಗೂ ಹಾಗಲ ಬೆಳೆಗಾಗಿ ಪ್ರತಿ ಪ್ಲಾಟ್‌ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೆವು. ಉತ್ತಮ ಇಳು ವರಿ ಬರುವ ನಿರೀಕ್ಷೆ ಇತ್ತು. ಈಗ ಬೆಳೆ ಸಂಪೂರ್ಣ ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ~ ಎಂದು ಗ್ರಾಮದ ಪ್ರಗತಿಪರ ರೈತ ಬಸವಣ್ಣೆಪ್ಪ ಅಗಸಿ ಬಾಗಿಲ ನೊಂದು ನುಡಿದರು. ಬೆಳೆಗಳು ಹಾಳಾದ ಗ್ರಾಮದ ರೈತರಾದ ಸುಭಾಷ ಗುರಪ್ಪನವರ, ಮಂಜುನಾಥ ಇದಕ್ಕೆ ದನಿಗೂಡಿಸಿದರು.ಈಗಾಗಲೇ ಬರದಿಂದ ತಾಲ್ಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ. ಈಗ ಹಾನಿ ಗೊಳಗಾದ ರೈತರು ಪರಿಹಾರಕ್ಕಾಗಿ ಅಧಿಕಾರಿಗಳ ಮೊರೆ ಹೋದರೆ ತೋಟ ಗಾರಿಕಾ ಇಲಾಖೆ, ಕಂದಾಯ ಇಲಾಖೆ ಹಾಗೂ ಬೀಜ ಕಂಪನಿಯವರು ತಮ್ಮ ವ್ಯಾಪ್ತಿಗೆ ಈ ಬೆಳೆ ಬರುವುದಿಲ್ಲ ಎಂದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ರೈತರು ದೂರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.