ಶನಿವಾರ, ಜುಲೈ 24, 2021
23 °C

ಗಾಳಿ, ಮಳೆ: ಬೆಳೆಗಳಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಳಿ, ಮಳೆ: ಬೆಳೆಗಳಿಗೆ ಹಾನಿ

ಚಿಕ್ಕಬಳ್ಳಾಪುರ: ತಾಲ್ಲೂಕಿನಲ್ಲಿ ಸೋಮವಾರ ಸಂಜೆ ಬೀಸಿದ ಭಾರಿ ಗಾಳಿ ಮತ್ತು ಸುರಿದ ಆಲಿಕಲ್ಲು ಮಳೆಯಿಂದ ದ್ರಾಕ್ಷಿ ತೋಟ, ಟೊಮೆಟೊ, ಹಿರೇಕಾಯಿ, ಬೀನ್ಸ್ ಬೆಳೆಗಳಿಗೆ ಹಾನಿಯಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಭಾರಿ ಗಾಳಿಗೆ ಮನೆಗಳ ಮೇಲಿನ ತಗಡಿನ ಛಾವಣಿಗಳು ಸಹ ಹಾರಿ ಹೋಗಿವೆ.ತಾಲ್ಲೂಕಿನ ತಾಳಹಳ್ಳಿ, ನಕ್ಕನಹಳ್ಳಿ, ತೌಡನಹಳ್ಳಿ, ಕೊಳವನಹಳ್ಳಿ, ಕಣಿತಹಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಹಾನಿಯಾಗಿದ್ದು, ಮಂಗಳವಾರ ಬೆಳಿಗ್ಗೆ ಆಯಾ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿದ್ದರು. ಗ್ರಾಮಸ್ಥರನ್ನು ಭೇಟಿ ಮಾಡಿದ ಅಧಿಕಾರಿಗಳು ಬೆಳೆದ ಬೆಳೆಗಳು ಮತ್ತು ಆದ ಹಾನಿ ಬಗ್ಗೆ ಮಾಹಿತಿ ಪಡೆದರು.‘ಬೆಳಿಗ್ಗೆಯಿಂದ ಮಳೆ- ಗಾಳಿ ಇರಲಿಲ್ಲ. ಬಿಸಿಲು ಹೆಚ್ಚಿತ್ತು. ಆದರೆ ಸಂಜೆಯಾದೊಡನೆ ಭಾರಿ ಸುಂಟರಗಾಳಿ ಬೀಸಿತು. ನೋಡನೋಡುತ್ತಿದ್ದಂತೆ ಆಲಿಕಲ್ಲು ಮಳೆ ಸುರಿಯಿತು. ಶಿಥಿಲ ಸ್ಥಿತಿಯಲ್ಲಿರುವ ನಮ್ಮ ಮನೆಗಳನ್ನು ರಕ್ಷಿಸಿಕೊಳ್ಳಬೇಕೋ ಅಥವಾ ಬೆಳೆಗಳನ್ನು ಉಳಿಸಿಕೊಳ್ಳಬೇಕೋ? ದಿಕ್ಕೇ ತೋಚಲಿಲ್ಲ’ ಎಂದು ರೈತರು ಸಂಕಷ್ಟ ತೋಡಿಕೊಂಡರು. ರೈತರಾದ ಲಕ್ಷ್ಮಣ್, ಮುನಿಶಾಮಪ್ಪ, ವೀರೇಶ್, ಮುನಿರಾಜು, ನಾಗರಾಜು, ನಾರಾಯಣಸ್ವಾಮಿ, ಕೃಷ್ಣಪ್ಪ ಆಗಿರುವ ಹಾನಿ ಬಗ್ಗೆ ವಿವರಣೆ ನೀಡಿದರು.‘ಗಾಳಿ-ಮಳೆಯಿಂದ ಎಂಟಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ನೂರಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳಿಗೂ ಹಾನಿಯಾಗಿದೆ. ಗ್ರಾಮಗಳಲ್ಲಿ ಆಗಿರುವ ಹಾನಿ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಲಾಗುವುದು. ರೈತರಿಗೆ ಆರ್ಥಿಕ ನೆರವು ನೀಡಲು ಪ್ರಯತ್ನಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.