ಶುಕ್ರವಾರ, ಫೆಬ್ರವರಿ 26, 2021
22 °C

ಗುರಿಕಾರ ಗಗನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರಿಕಾರ ಗಗನ್

ಹತ್ತು ಮೀಟರ್ ರೈಫಲ್ ಶೂಟಿಂಗ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿರುವ ಗಗನ್ ನಾರಂಗ್ ಭಾರತ ಹೆಮ್ಮೆಪಡುವಂಥ ಸ್ಪರ್ಧಿ. ಬ್ಯಾಂಕಾಕ್‌ನಲ್ಲಿ ನಡೆದ 2008ರ ವಿಶ್ವಕಪ್‌ನ ಅರ್ಹತಾ ಸುತ್ತುಗಳಲ್ಲಿ 600 ಪಾಯಿಂಟ್ ಕಲೆಹಾಕಿದ ಗಗನ್, ಅಂತಿಮ ಸುತ್ತಿನಲ್ಲಿ 103.5 ಪಾಯಿಂಟ್ ಹೆಕ್ಕಿ ಒಟ್ಟು 703.5 ಪಾಯಿಂಟ್‌ಪಡೆದು ವಿಶ್ವದಾಖಲೆ ನಿರ್ಮಿಸಿದರು. 2012ರಲ್ಲಿ ಲಂಡನ್‌ನಲ್ಲಿ ನಡೆಯಲಿರುವ ಒಲಿಂಪಿಕ್‌ಗೆ ಅರ್ಹತೆ ಗಳಿಸಿರುವ ಭಾರತದ ಮೊದಲ ಅಥ್ಲೀಟ್ ಎಂಬ ಹಿರಿಮೆಯೂ ಈಗ ಅವರದ್ದು.ಹೈದರಾಬಾದ್ ಮೂಲದ ಗಗನ್ ನಾರಂಗ್ ಸಾಧನೆ, ಆತ್ಮವಿಶ್ವಾಸ ಹಾಗೂ ಸ್ಥಿರತೆಯ ಪ್ರತೀಕ. ವಿವಿಧ ಸ್ಪರ್ಧೆಗಳಲ್ಲಿ ಅವರು ಗೆದ್ದಿರುವ ಪದಕಗಳು ಸಾಧನೆಗೆ ಕನ್ನಡಿ ಹಿಡಿದರೆ, ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸನಲ್ಲಿನ ಪ್ರದರ್ಶನ ಸ್ಥಿರತೆಗೆ ಸಾಕ್ಷಿ. ಕಾಮನ್‌ವೆಲ್ತ್ ಗೇಮ್ಸನಲ್ಲಿ ಅವರು ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಉಳಿದೆಯಲ್ಲ ಭಾರತೀಯ ಅಥ್ಲೀಟ್‌ಗಳನ್ನು ಹಿಂದಿಕ್ಕಿದರು.1983ರಲ್ಲಿ ಚೆನ್ನೈನಲ್ಲಿ ಹುಟ್ಟಿದ ನಾರಂಗ್ ಕ್ರಿಕೆಟ್, ಟೆನಿಸ್ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಮೊದಲು ಅದೃಷ್ಟ ಪರೀಕ್ಷಿಸಿದರು. ಆಮೇಲೆ ಶೂಟಿಂಗ್‌ನತ್ತ ಒಲವು ಹರಿಯಿತು.ಮೊದಲು ಒಳ್ಳೆಯ ತರಬೇತುದಾರ ಹಾಗೂ ಅಗತ್ಯ ಪರಿಕರಗಳ ಕೊರತೆ ಗಗನ್‌ಗೆ ಎದುರಾಯಿತು. ಶೂಟಿಂಗ್ ಕಲಿಯುವುದು ತುಂಬಾ ದುಬಾರಿ ಎಂಬುದು ಬೇಗ ಮನವರಿಕೆಯಾಯಿತು. ಆದರೂ ಹುಡುಗ ಪಟ್ಟು ಸಡಿಲಿಸಲಿಲ್ಲ. ಮಗನಿಗೆ ರೈಫಲ್ ಕೊಡಿಸಲೆಂದೇ ಅಪ್ಪ ತಮ್ಮ ಜಮೀನನ್ನು ಮಾರಿದರು.2003ರ ಆಫ್ರೋ-ಏಷ್ಯನ್ ಗೇಮ್ಸನಲ್ಲಿ ಗಗನ್ ಚಿನ್ನದ ಪದಕಗಳ ಬೇಟೆ ಪ್ರಾರಂಭವಾಯಿತು. ಈಗ ಅವರ ಬಳಿ ಅಸಂಖ್ಯ ಪದಕಗಳಿವೆ. ಇನ್ನಷ್ಟು ಯುವಕರನ್ನು ಶೂಟಿಂಗ್‌ನಲ್ಲಿ ಪಳಗಿಸುವುದು ಅವರ ಉದ್ದೇಶ. ಪುಣೆಯ ಬಾಲೇವಾಡಿ ಸ್ಪೋರ್ಟ್ಸ್ ಕ್ಲಬ್ ಕಾಂಪ್ಲೆಕ್ಸ್‌ನಲ್ಲಿ ಸುಸಜ್ಜಿತ ಶೂಟಿಂಗ್ ಅಕಾಡೆಮಿ ಸ್ಥಾಪಿತವಾಗುತ್ತಿದ್ದು, ಅದು ಗಗನ್ ಕನಸು. `ಗನ್ ಫಾರ್ ಗ್ಲೋರಿ~ ಎಂಬುದು ಅಕಾಡೆಮಿಯ ಹೆಸರು. ಪಿಸ್ತೂಲ್, ರೈಫಲ್ ಹಾಗೂ ಶೋಟ್‌ಗನ್ ತರಬೇತಿ ನೀಡುವ ಸಕಲ ಸೌಕರ್ಯಗಳೂ ಈ ಅಕಾಡೆಮಿಯಲ್ಲಿ ಲಭ್ಯವಾಗಲಿವೆ. 2016ರ ಒಲಿಂಪಿಕ್ ಹೊತ್ತಿಗೆ ಉತ್ತಮ ಸ್ಪರ್ಧಿಗಳನ್ನು ತಯಾರು ಮಾಡುವುದು ಗಗನ್ ಮಹತ್ವಾಕಾಂಕ್ಷೆ. ಇದರ ಜೊತೆಗೆ ಮುಂದಿನ ವರ್ಷ ಲಂಡನ್ ಒಲಿಂಪಿಕ್‌ನಲ್ಲಿ ಗುರಿ ತಪ್ಪದಿರಲೆಂದು ಅವರು ಈಗಿನಿಂದಲೇ ನಿರಂತರ ಅಭ್ಯಾಸದಲ್ಲಿಯೂ ತೊಡಗಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.