ಸದಾ ಮುಗುಳ್ನಗೆ ತುಂಬಿರುತ್ತಿದ್ದ ಗುಳಿಕೆನ್ನೆಯ ಆ ಮೊಗದಲ್ಲಿ ಈಗ ಗಾಂಭೀರ್ಯ ಎದ್ದು ಕಾಣುತ್ತಿದೆ. ಕೈಯಲ್ಲಿ ರಿವಾಲ್ವರ್. ನಡಿಗೆಯ ಶೈಲಿ ಲೋಕಲ್ ಬಾಂಡ್ ರೀತಿ. ನೋಟದಲ್ಲೇ ಹುಡುಗಿಯರ ಹೃದಯ ಕದಿಯುವ ಹಸನ್ಮುಖಿ ಚೋರ, ‘ಅಗ್ನಿಸಾಕ್ಷಿ’ಯ ವಿಜಯ್ ಸೂರ್ಯ ಎತ್ತಿರುವ ಹೊಸ ಅವತಾರವಿದು. ‘ಸ’ ಚಿತ್ರಕ್ಕಾಗಿ ಅವರು ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದೆ.

‘ಸ’ ವಿಜಯ್ ಅಭಿನಯದ ಮೂರನೇ ಚಿತ್ರ. ಧಾರಾವಾಹಿಯಲ್ಲಿ ನಟಿಸುವುದಕ್ಕೂ ಮುಂಚೆ ರವಿಚಂದ್ರನ್ ಅಭಿನಯದ ‘ಕ್ರೇಜಿಲೋಕ’ದಲ್ಲಿ ಮೊದಲಿಗೆ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದರು. ಬಳಿಕ ಕಿರುತೆರೆಯಲ್ಲಿ ಮೋಡಿ ಮಾಡಿದ ಅವರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಷ್ಟಕಾಮ್ಯ’ ಚಿತ್ರದ ಮೂಲಕ ಬೆಳ್ಳಿತೆರೆಯ ನಾಯಕನಾಗಿ ಬಡ್ತಿ ಪಡೆದರು. ಅಲ್ಲಿಯೂ ತಮ್ಮ ಕಿರುತೆರೆಯ ಶೇಡ್ ಕಾಯ್ದುಕೊಳ್ಳುವ ಮೃದು ಪಾತ್ರ ಅವರದಾಗಿತ್ತು.

‘ನಟನೊಬ್ಬ ಯಾವತ್ತೂ ಒಂದೇ ಬಗೆಯ ಪಾತ್ರಕ್ಕೆ ಅಂಟಿಕೊಳ್ಳಬಾರದು. ಜನರ ಮನಸ್ಸಿನಲ್ಲಿ ಒಮ್ಮೆ ಆ ಬ್ರ್ಯಾಂಡ್ ಕೂತರೆ ಅಲ್ಲಿಂದ ಹೊರಬರುವುದು ಕಷ್ಟ. ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಾಗ, ಜನರಿಗೆ ನಮ್ಮ ಮುಂದಿನ ಚಿತ್ರಗಳ ಬಗ್ಗೆ ನಿರೀಕ್ಷೆ ಜತೆಗೆ, ಕುತೂಹಲ ಇರುತ್ತದೆ’ ಎಂದು ವಿಜಯ್ ತಮ್ಮ ಹೊಸ ವರಸೆಗೆ ಕಾರಣ ನೀಡುತ್ತಾರೆ.

ಸಸ್ಪೆನ್ಸ್– ಥ್ರಿಲ್ಲರ್ ‘ಸ’
‘ಸ’ ಚಿತ್ರದ ಟ್ರೇಲರ್ ನೋಡಿದರೆ ಇದೇನು ಥ್ರಿಲ್ಲರ್ ಕಮ್ ಹಾರರ್ ಚಿತ್ರವೇ ಎನಿಸುತ್ತದೆ. ಆದರೆ, ನಮ್ಮದು ಸಸ್ಪೆನ್ಸ್– ಥ್ರಿಲ್ಲರ್ ಚಿತ್ರ. ನಾಲ್ಕು ಪ್ರಧಾನ ಪಾತ್ರಗಳ ಸುತ್ತ ಕಥೆ ಸಾಗಲಿದ್ದು, ಅದ್ಭುತ ಜರ್ನಿಯಂತೆ ಸಿನಿಮಾ ಸಾಗಲಿದೆ. ಪ್ರತಿ ಪಾತ್ರಕ್ಕೂ ಕನೆಕ್ಟಿವಿಟಿ ಇದ್ದು, ಕಡೆ ಗಳಿಗೆವರೆಗೆ ಕುತೂಹಲ ಕಾಯ್ದುಕೊಳ್ಳಲಿದೆ.

ಹಿಂದಿನ ಯಾವ ಚಿತ್ರಗಳಿಗೂ ಹೋಲಿಕೆ ಮಾಡಲಾಗದ ಕಥೆಯನ್ನು ನಿರ್ದೇಶಕ ಹೇಮಂತ್ ಹೆಗಡೆ ಹೆಣೆದಿದ್ದಾರೆ’ ಎನ್ನುತ್ತಾರೆ ವಿಜಯ್. ‘ಚಿತ್ರದಲ್ಲಿ ಅವಕಾಶ ಸಿಕ್ಕಾಗ ಈ ಪಾತ್ರ ನನ್ನಿಂದ ಸಾಧ್ಯವೇ?’ ಎಂದು ಅವರಿಗೆ ಅನ್ನಿಸಿತ್ತಂತೆ. ಕಡೆಗೆ ನಿರ್ದೇಶಕರು ‘ನಿನ್ನಿಂದ ಇದು ಖಂಡಿತಾ ಸಾಧ್ಯ’ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದರು. ಪಾತ್ರವನ್ನು ಸವಾಲಾಗಿ ತೆಗೆದುಕೊಂಡು ನಟಿಸಿದೆ ಎಂದು ಹೇಳುತ್ತಾರೆ.

‘ಹೀರೊಯಿಸಂ’ನಲ್ಲಿ ನಂಬಿಕೆಯಿಲ್ಲ
‘ನಾಯಕನೆಂದರೆ ಆರಡಿ ಎತ್ತರವಿರಬೇಕು. ಸ್ಪುರದ್ರೂಪಿಯಾಗಿರಬೇಕು. ದೃಢಕಾಯನಾಗಿರುವ ಜತೆಗೆ, ಸಿಕ್ಸ್ಪ್ಯಾಕ್ ಇರಬೇಕು ಎಂಬ ಮನೋಭಾವ ಸಾಮಾನ್ಯವಾಗಿ ಮನೆ ಮಾಡಿದೆ. ಹಾಗಾಗಿ ನಾಯಕನೊಬ್ಬನನ್ನು ಕೇಂದ್ರಿತವಾಗಿಟ್ಟುಕೊಂಡು ಕಥೆ ಬರೆಯುವವರೇ ಹೆಚ್ಚು.

ಅಂತಹ ಸಿನಿಮಾಗಳಲ್ಲಿ ವೈಭವೀಕರಣವೇ ಹೆಚ್ಚಾಗಿರುತ್ತದೆ. ಅದರ ಮೇಲೆ ನನಗೆ ನಂಬಿಕೆ ಇಲ್ಲ’ ಎನ್ನುವ ವಿಜಯ್, ‘ಕಥೆ ನಾಯಕನಾದಾಗಲೇ ಚಿತ್ರ ಗೆಲ್ಲುವುದು. ಪಾತ್ರದ ಮೂಲಕ ಜನ ಗುರುತಿಸಿದಾಗ ನಟ ನಿಜಕ್ಕೂ ಬೆಳೆದಿದ್ದಾನೆ ಎಂದರ್ಥ’ ಎನ್ನುತ್ತಾರೆ.

ತಮ್ಮ ಈ ಮಾತುಗಳಿಗೆ ಹಳೆಯ ಕನ್ನಡ ಮತ್ತು ಈಗಿನ ಮಲಯಾಳಂ ಚಿತ್ರಗಳನ್ನು ವಿಜಯ್ ನಿದರ್ಶನವಾಗಿ ನೀಡುತ್ತಾರೆ. ಅಲ್ಲಿನ ಚಿತ್ರಗಳ ಪಾತ್ರಗಳು ಸ್ವಾಭಾವಿಕವಷ್ಟೇ ಅಲ್ಲದೆ, ಬದುಕಿಗೆ ಅತ್ಯಂತ ಹತ್ತಿರವಾದವು ಕೂಡ ಆಗಿರುತ್ತವೆ ಎಂದು ಅವರು ಗಮನ ಸೆಳೆಯುತ್ತಾರೆ.

ನೈಟ್ರೈಡ್ ಇಷ್ಟ
ಶೂಟಿಂಗ್ನಲ್ಲಿ ಬ್ಯುಸಿಯಾಗಿರುವುದರಿಂದ ಹಗಲಲ್ಲಿ ಸುತ್ತಾಡಲು ಸಮಯವೇ ಸಿಗುವುದಿಲ್ಲ ಎನ್ನುವ ವಿಜಯ್ಗೆ, ನೈಟ್ರೈಡ್ ಎಂದರೆ ಇಷ್ಟವಂತೆ. ಗೆಳೆಯರೆಲ್ಲರೂ ಒಂದೆಡೆ ಸೇರಿದಾಗ ಮೈಸೂರು ರಸ್ತೆ ಮತ್ತು ನೈಸ್ ರಸ್ತೆಯಲ್ಲಿ ನೈಟ್ರೈಡ್ ಹೋಗುತ್ತಾರಂತೆ. ಇಲ್ಲದಿದ್ದರೆ, ಮನೆಬಿಟ್ಟು ಅಲುಗಾಡದೆ ಕುಟುಂಬದವರೊಡನೆ ಕಾಲ ಕಳೆಯುವುದು ಅವರಿಗಿಷ್ಟ.

‘ನಾನೊಬ್ಬ ಸಿನಿಮಾ ವಿದ್ಯಾರ್ಥಿಯೂ ಆಗಿರುವುದರಿಂದ, ಎಲ್ಲ ಭಾಷೆಗಳ ಚಿತ್ರಗಳನ್ನು ವೀಕ್ಷಿಸುವುದು ನನ್ನ ಪ್ರಮುಖ ಹವ್ಯಾಸ. ನಿರ್ದೇಶಕನಾಗುವ ಕನಸು ಕೂಡ ಇದೆ. ಅದಕ್ಕಾಗಿಯೇ ನಾನು ಮುಂಬೈಗೆ ಹೋಗಿದ್ದು. ಆದರೆ, ನಟನೆ ನನ್ನ ಕೈ ಹಿಡಿಯಿತು. ಮುಂದೊಂದು ದಿನ ಚಿತ್ರವೊಂದನ್ನು ನಿರ್ದೇಶಿಸುವ ಆಲೋಚನೆ ಇದ್ದೇ ಇದೆ’ ಎನ್ನುವ ವಿಜಯ್ಗೆ ರಾಜ್ಕುಮಾರ್, ಶಂಕರ್ನಾಗ್ ಹಾಗೂ ಅನಂತ್ನಾಗ್ ನಟನೆ ಬಲು ಇಷ್ಟವಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.