ಭಾನುವಾರ, ಏಪ್ರಿಲ್ 11, 2021
27 °C

ಗುಳ್ಳವ್ವ.. ಗುಳ್ಳವ್ವ.. ಯಾವಾಗ ಬರ‌್ತಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಷಾಢ ಮಾಸದಲ್ಲಿ ಬರುವ ಪ್ರತಿಯೊಂದು ಮಂಗಳವಾರವನ್ನು ಉತ್ತರ ಕರ್ನಾಟಕದಲ್ಲಿ ಗುಳ್ಳವ್ವನ ಹಬ್ಬವನ್ನಾಗಿ ಆಚರಿಸುವ ಸಂಪ್ರದಾಯ ವೊಂದು ಜಾಗತೀಕರಣದ ಇಂದಿನ ದಿನಗಳಲ್ಲಿ ಉಳಿದುಕೊಂಡು ಬಂದಿರು ವುದು ವಿಶೇಷ. ನಮ್ಮ ಹಬ್ಬ ಮತ್ತು ಆಚರಣೆಗಳು ನಮ್ಮ ರೈತಾಪಿ ಜನರನ್ನು ಅವಲಂಬಿಸಿವೆ.ರೈತರಿಗೆ ಮತ್ತು ಸಾಮಾನ್ಯ ಜನರಿಗೆ ಅನ್ನ ಕೊಡುವ ದೇವತೆ ಈ ಭೂ ತಾಯಿ. ಅದಕ್ಕಾಗಿ ಅವಳಿಗೆ ಪೂಜೆ ಯನ್ನು ಸಲ್ಲಿಸುವುದಕ್ಕಾಗಿ ನಾವು ವಿವಿಧ ಹಬ್ಬಗಳನ್ನು ಆಚರಿಸುತ್ತೇವೆ. ಒಂದು ಋತುವಿನಲ್ಲಿ ಮಣ್ಣಿಗೆ ರೈತರು ಐದು ಪೂಜೆಗಳನ್ನು ಮಾಡುತ್ತಾರೆ. ಮೊದ ಲನೆಯದು ಕಾರು ಹುಣ್ಣಿಮೆ ಸಮಯ ದಲ್ಲಿ ಎತ್ತಿನ ಮೂರ್ತಿಗಳನ್ನು ತಂದು ಪೂಜೆಯನ್ನು ಸಲ್ಲಿಸಲಾಗುತ್ತದೆ. ನಂತರ ಗುಳ್ಳವ್ವ, ನಂತರ ನಾಗ ಂಚಮಿ, ಆಮೇಲೆ ಬರುವುದು ಗಣಪತಿ ಮತ್ತು ಜೋಕುಮಾರ ಕೊನೆಗೆ ಗೌರಿ ಹಬ್ಬ ಇಲ್ಲವೆ ಶೀಗವ್ವ.ಅದರಲ್ಲೂ ಈ ಗುಳ್ಳವ್ವನ ಹಬ್ಬ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿ ಆಚರಿಸಲ್ಪಡುತ್ತದೆ.ಉದ್ದೇಶ ಮಾತ್ರ ಒಂದೇ. ಮಣ್ಣು ನಮಗೆ ಇಲ್ಲಿ ಶಕ್ತಿ ಯಾಗಿ ಕಾಣುತ್ತಾಳೆ. ಯಾಕೆಂದರೆ “ಒಳ್ಳೊಳ್ಳೆಯವರು ಉಳ್ಯಾಡು ಮುಂದ ಗುಳ್ಳವ್ವ ಪಲ್ಲಕ್ಕಿ ಬೇಡಿದ ಳಂತೆ”ಎಂಬ ಮಾತು ಬರುತ್ತದೆ. ಇದು ಅವಳಲ್ಲಿರುವ ಶಕ್ತಿಯ ಬಗ್ಗೆ ತಿಳಿಯುತ್ತದೆ.ಗುಳ್ಳವ್ವನನ್ನು ಮಾಡಲು ಹುಡುಗಿ ಯರು ಹಳ್ಳ ಇಲ್ಲವೆ ನದಿಯ ತೀರಕ್ಕೆ ಹೋಗಿ ಮಣ್ಣಿನಿಂದ  ಮಾಡಿ ಕೊಂಡು ಬರುತ್ತಿದ್ದರು. ಈಗ ಅದೆಲ್ಲ ಹೋಗಿ ಕುಂಬಾರರೇ ಅವುಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಗುಳ್ಳವ್ವ ನನ್ನು ಮಾಡುವ ಆಕಾರ ವಾರದಿಂದ ವಾರಕ್ಕೆ ಕೆಲವೊಂದು ಪ್ರದೇಶದಲ್ಲಿ ಬದಲಾಗುತ್ತ ಹೋಗು ತ್ತದೆ. ಮೊದಲನೆಯ ವಾರ ಲಿಂಗಾ ಕಾರದ ಗುಳ್ಳವ್ವ, ಎರಡನೆಯ ವಾರ `ಗುಡಿ~ ಯಾಕಾರದ ಗುಳ್ಳವ್ವ, ಮೂರ ನೇ ವಾರ `ಕಟ್ಟೆ~ಯಾಕಾರದ ಗುಳ್ಳವ್ವ, ನಾಲ್ಕನೆವಾರ ನವಿಲಾಕಾರದ ಗುಳ್ಳವ್ವ ಒಂದು ವೇಳೆ ಆ ಮಾಸದಲ್ಲಿ ಐದು ಮಂಗಳವಾರಗಳು ಬಂದರೆ ಐದನೇ ದನ್ನು ಹೆಣ್ಣಿನಾಕಾರದ ಗುಳ್ಳವ್ವನನ್ನು ಮಾಡುತ್ತಾರೆ.ಮನೆಗೆ ತಂದ ಗುಳ್ಳವ್ವನಿಗೆ ಗುಲ ಗಂಜಿ ಮತ್ತು ಬಣ್ಣ ಬಣ್ಣದ ಕುಸಬಿ ಕಾಳು ಗಳಿಂದ ಶೃಂಗಾರ ಮಾಡುತ್ತಾರೆ. ಜೊತೆಗೆ ಕೋಣ ಮಾಡುತ್ತಾರೆ. ಅದರಂತೆ ಹಾವು ಚೇಳುಗಳನ್ನು ಮಾಡುತ್ತಾರೆ ಯಾಕೆಂದರೆ ಇವು ಭೂತಾಯಿಯ ಮಕ್ಕಳು ಎಂಬುದು ಕೆಲವರ ಭಾವನೆ. ಗುಳ್ಳವ್ವನನ್ನು ಪೂಜಿಸುವುದು ಹೆಣ್ಣು ಮಕ್ಕಳು. ಆದರೆ ಇಲ್ಲಿರುವ ಕೋಣವನ್ನು ಕಡಿಯುವುದು ಮಾತ್ರ ಗಂಡು ಮಕ್ಕಳ ಕೆಲಸ. ನಂತರ ಮನೆಯಲ್ಲಿರುವ ಬಾಲ ಮುತ್ತೈದೆಯರು ಮಣ್ಣಿನಿಂದ ಮಾಡಿದ ವಿಶಿಷ್ಟವಾದ ಆರತಿಗಳನ್ನು ತೆಗೆದು ಕೊಂಡು ಮನೆ ಮನೆಗಳಿಗೆ ತೆರಳಿ ಪೂಜಿ ಸಿದ ಗುಳ್ಳವ್ವನ ಸುತ್ತಲೂ ಕುಳಿತು ಹಾಡುಗಳನ್ನು ಹಾಡುತ್ತಾರೆ. ಈ ಸಂದರ್ಭದಲ್ಲಿ ಹಾಡುವ ಹಾಡು ಗಳು ಕೂಡಾ ಗಮನ ಸೆಳೆಯು ವಂತಹವು.“ಗುಳ್ಳವ್ವಾ ಗುಳ್ಳವ್ವಾ ಎಂದ ಬರತಿ ಗುಳ್ಳವ್ವಾ,ಗುಡ್ಡಕ ಹೋಗಿ ಗುಲಗಂಜಿ ತರತೀನಿ ಎಂದ ಬರತಿ...ಇಲಕಲ್‌ಕ ಹೋಗಿ ಸೀರಿ ತರತೀನಿ ಎಂದ ...ಗುಳೇದಗುಡ್ಡಕ್ ಹೋಗಿ ಖಣಾ ತರತೀನಿ ಎಂದು...ಗೋಕಾಕ ಗೋಗಿ ಕರದಂಟ ತರತೀನಿ ಎಂದ ಬರತಿ ...ಕೋಲಾರ ಹೋಗಿ ಬಂಗಾರ ತರತೀನಿ.ಅದೇ ರೀತಿಯಾಗಿ ಗುಡ್ಡಕರ ಹೋಗಲಿಲ್ಲ,

ಗುಳ್ಳವ್ವನ ಮಣ್ಣ ತರಲಿಲ್ಲ,ಸುಳ್ಳ ಬಂತವ್ವ ನಾಗರ ಪಂಚಮಿ, ಎರಿ ಹೊಲಕ್ಕ ಹೋಗಲಿಲ್ಲ ಕುಸುಬಿ ಹಚ್ಚಿ ಆಡಲಿಲ್ಲಿ ಸುಳ್ಳ ಬಂತವ್ವ ನಾಗರ ಪಂಚಮಿ, ಇಂಥ ಹತ್ತಾರು ಹಾಡು ಗಳನ್ನು ಹಾಡುವ ಬಾಲ ಮುತ್ತೈದೆಯರು ಹೋಗುವಾಗ ಗಂಡನ ಹೆಸರುಗಳನ್ನು ಹೇಳುವುದು ಒಂದು ಪದ್ದತಿ.ಆದರೆ ಇಲ್ಲಿರುವ ಒಗಟುಗಳು ಕೂಡ ವಿಶೇಷವಾಗಿವೆ. “ಹಂಡೆದಾಗ ಕುಂತ ಉಂಡಿ ತಿಂತಾನ”, “ತಲ್ಯಾಗ ತಲಿ, ಹೂವಿನ ಮಾಲಿ, ಹಸರಂಗಿ ತೊಟಗೊಂಡ ದಸರೆಗೆ ಹೋಗ್ತಾನ”, “ಹುಳ್ಳಿ ಕಾಳಷ್ಟು ಹೂರಣ, ಮಿಳ್ಳಿ ಕಾಳಿನಷ್ಟ ಕಣಕ ಹೊಳ್ಳೆ ಮಳ್ಳೆ ಹೋಳಗಿ ಬೇಡ್ತಾನ್‌”, ನಂತರ ಅವರ ಆರತಿಯಲ್ಲಿ ಅಳ್ಳು ಮತ್ತು ಚುರು ಮುರಿಯನ್ನು ಹಾಕುತ್ತಾರೆ.ಮರುದಿವಸ ವಿವಿಧ ರೀತಿಯ ಆಡುಗೆಯನ್ನು ಮಾಡಿಕೊಂಡು ಹೆಣ್ಣು ಮಕ್ಕಳು ಹೊಲ, ತೋಟಕ್ಕೆ ಇಲ್ಲವೆ ನದಿ ದಂಡೆಗಳಿಗೆ ಹೋಗಿ ಕುಳಿತು ಊಟ ಮಾಡಿಕೊಂಡು ಸಾಯಾಂ ಕಾಲದ  ಹೊತ್ತಿಗೆ ಮನೆಗೆ ಮರಳು ತ್ತಾರೆ. ಇದು ಇಂದು ಆಚರಿಸುತ್ತಿರುವ ಗುಳ್ಳವ್ವನ ಹಬ್ಬ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.