ಬೆಂಗಳೂರು: `ಅಶ್ವೆಲ್ ಪ್ರಿನ್ಸ್ ಹಾಗೂ ಜಾನ್ ಬೋಥಾ ತಮ್ಮ ಬ್ಯಾಟಿಂಗ್ ಮೂಲಕ ಚಾಂಪಿಯನ್ಸ್ ಲೀಗ್ನ ಮೊದಲ ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಈ ಗೆಲುವಿನ ಶ್ರೇಯ ಈ ಇಬ್ಬರೂ ಆಟಗಾರರಿಗೆ ಸಲ್ಲಬೇಕು~

-ಹೀಗೆ ಹೇಳಿದ್ದು ದಕ್ಷಿಣ ಆಫ್ರಿಕಾದ ವಾರಿಯರ್ಸ್ ತಂಡದ ನಾಯಕ ಜಾನ್ ಬೋಥಾ. ಶುಕ್ರವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮೊದಲ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಮೂರು ವಿಕೆಟ್ ಗೆಲುವು ಪಡೆದ ನಂತರ ಅವರು ಮಾತನಾಡಿದರು.

ಗೆಲುವು ಯಾರಿಗೆ ದಕ್ಕುತ್ತದೆ ಎನ್ನುವ ಕುತೂಹಲ ಎರಡೂ ತಂಡಗಳಿಗಿತ್ತು. ಆದರೆ ಮೊದಲ ಆರು ಓವರ್ಗಳಲ್ಲಿ ಉತ್ತಮ ಮೊತ್ತ ಪೇರಿಸಿದವು. ಇದರಿಂದ ಉತ್ತಮ ಆರಂಭ ಪಡೆಯಲು ಸಾಧ್ಯವಾಯಿತು. ಬ್ಯಾಟಿಂಗ್ ಶಕ್ತಿ ಎನಿಸಿದ್ದ ಕ್ರಿಸ್ ಗೇಲ್ ವಿಕೆಟ್ ಪಡೆದ ವೇಯ್ನ ಪಾರ್ನೆಲ್ ಸಹ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ವಾರಿಯರ್ಸ್ ನಾಯಕ ಹೇಳಿದರು.

ಪ್ರಿನ್ಸ್ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ 55 ಎಸೆತದಲ್ಲಿ 74 ರನ್ ಗಳಿಸಿ ಅಭಿಮನ್ಯು ಮಿಥುನ್ ಓವರ್ನಲ್ಲಿ ಔಟಾದರು. ಈ ವೇಳೆ ಪಂದ್ಯ ಕೈ ತಪ್ಪಲಿದೆ ಎನ್ನುವ ಆತಂಕ ಉಂಟಾಗಿತ್ತು. ಆದರೆ ಕೊನೆಯ ಎಸೆತದಲ್ಲಿ ಅಗತ್ಯವಿದ್ದ ಎರಡು ರನ್ ಗಳಿಸುವಲ್ಲಿ ಪಾರ್ನೆಲ್ ಯಶಸ್ಸು ಕಂಡರು. ಆ ಕ್ಷಣದಲ್ಲಿ ಉಂಟಾದ ಸಂಭ್ರಮಕ್ಕೆ ಒಂದು ಕ್ಷಣ ಮೌನವಹಿಸಿದೆ ಎಂದು ತಿಳಿಸಿದರು.

ಫೀಲ್ಡಿಂಗ್ ಹಾಗೂ ಬೌಲಿಂಗ್ನತ್ತ ಹೆಚ್ಚು ಗಮನ ಅಗತ್ಯ: ಆರಂಭದಲ್ಲಿ ಉತ್ತಮ ಬೌಲಿಂಗ್ ಮಾಡಿದೆವು. ಆದರೆ ಗೇಲ್ ಸಾಕಷ್ಟು ರನ್ಗಳನ್ನು ನೀಡಿದರು. ಮಿಥುನ್ ಕೊನೆಯಲ್ಲಿ ಉತ್ತಮ ಬೌಲಿಂಗ್ ಮಾಡಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರೂ ಗೆಲುವು ದಕ್ಕಲಿಲ್ಲ. ಕ್ಷೇತ್ರರಕ್ಷಣೆಯಲ್ಲಿಯೂ ಸಾಕಷ್ಟು ತಪ್ಪುಗಳಾದವು ಎಂದು ಆರ್ಸಿಬಿ ತಂಡದ ನಾಯಕ ಡೇನಿಯಲ್ ವೆಟೋರಿ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಬೆಂಗಳೂರಿನ ಜನತೆ ನಮ್ಮ ತಂಡದ ಮೇಲೆ ಸಾಕಷ್ಟು ಭರವಸೆ ಇಟ್ಟಿದ್ದರು. ಇದರಿಂದ ಕೊಂಚ ಒತ್ತಡಕ್ಕೆ ಒಳಗಾದೆವು. ಕೊನೆಯ ಐದು ಓವರ್ಗಳಲ್ಲಿ ಬಿಗುವಿನ ಬೌಲಿಂಗ್ ಮಾಡಿದೆವು. ಆದರೂ, ಗೆಲುವು ಸಾಧ್ಯವಾಗಲಿಲ್ಲ. ಮುಂದಿನ ಪಂದ್ಯದಲ್ಲಿ ಈ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ವೆಟೋರಿ ತಿಳಿಸಿದರು.

ಈ ಪಂದ್ಯದಲ್ಲಿ ಜಾನ್ ಬೋಥಾ ನೇತೃತ್ವದ ವಾರಿಯರ್ಸ್ ತಂಡ ಆರ್ಸಿಬಿ ಎದುರು 3 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಆರ್ಸಿಬಿ ತಂಡದ ಗೇಲ್ 4 ಓವರ್ಗಳಲ್ಲಿ 43 ರನ್ ನೀಡಿ ದುಬಾರಿಯೆನಿಸಿದರು.
ಬೆಂಗಳೂರಿನ ತಂಡ ಅ. 29ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಆಡಲಿದೆ.

ಸ್ಕೋರ್ ವಿವರ
ರಾಯಲ್ ಚಾಲೆಂಜರ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 172
ವಾರಿಯರ್ಸ್ 20 ಓವರ್ಗಳಲ್ಲಿ 7 ವಿಕೆಟ್ 173
ಜಾನ್ ಸ್ಮಟ್ಸ್ ಸಿ ವಿರಾಟ್ ಕೊಹ್ಲಿ ಬಿ ಎಸ್.ಅರವಿಂದ್ 12
ಅಶ್ವೆಲ್ ಪ್ರಿನ್ಸ್ ಸಿ ಡಿರ್ಕ್ ನಾನೆಸ್ ಬಿ ಅಭಿಮನ್ಯು ಮಿಥುನ್ 74
ಕಾಲಿನ್ ಇಂಗ್ರಾಮ್ ಸಿ ಮಿಥುನ್ ಬಿ ಡೇನಿಯಲ್ ವೆಟೋರಿ 15
ಮಾರ್ಕ್ ಬೌಷರ್ ಎಲ್ಬಿಡಬ್ಲ್ಯು ಸಯ್ಯದ್ ಮೊಹಮ್ಮದ್ 01
ಜಸ್ಟಿನ್ ಕ್ರೂಶ್ ಸಿ. ಎಸ್. ಅರವಿಂದ್ ಬಿ ಡೇನಿಯಲ್ ವೆಟೋರಿ 06
ಜಾನ್ ಬೋಥಾ ಸಿ ವಿರಾಟ್ ಕೊಹ್ಲಿ ಬಿ ಎಸ್. ಅರವಿಂದ್ 42
ಕ್ರೆಗ್ ತಯ್ಸೆನ್ ಸಿ. ಡಿವಿಲಿಯರ್ಸ್ ಬಿ. ಅಭಿಮನ್ಯು ಮಿಥುನ್ 04
ನಿಕಿ ಬೊಯೆ ಔಟಾಗದೇ 07
ವೇಯ್ನೆ ಪಾರ್ನೆಲ್ ಔಟಾಗದೇ 06
ಇತರೆ: (ಲೆಗ್ ಬೈ-1, ವೈಡ್5) 06
ವಿಕೆಟ್ ಪತನ: 1-38 (ಸ್ಮಟ್ಸ್ 5.1), 2-57 (ಇಂಗ್ರಾಮ್ 7.3), 3-59 (ಬೌಷರ್; 8.4), 4-82 (ಕ್ರೂಶ್ 11.5), 5-155 (ಪ್ರಿನ್ಸ್ 18.2), 6-160 (ತಯ್ಸೆನ್ 18.5), 7-166 (ಬೋಥಾ 19.3)
ಬೌಲಿಂಗ್: ಕ್ರಿಸ್ ಗೇಲ್ 4-0-43-0, ಎಸ್.ಅರವಿಂದ್ 4-0-32-2, ಡಿರ್ಕ್ ನಾನೆಸ್ 4-0-31-0, ಡೇನಿಯಲ್ ವೆಟೋರಿ 4-0-26-2, ಜಮಾಲ್ದ್ದುದೀನ್ ಸಯ್ಯದ್ ಮೊಹಮ್ಮದ್ 2-0-15-1, ಅಭಿಮನ್ಯು ಮಿಥುನ್ 2-0-25-2.
ಫಲಿತಾಂಶ: ವಾರಿಯರ್ಸ್ಗೆ 3 ವಿಕೆಟ್ ಜಯ; ಪಂದ್ಯ ಶ್ರೇಷ್ಠ: ಪ್ರಿನ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.