ಗುರುವಾರ , ಮಾರ್ಚ್ 4, 2021
27 °C

ಗೊಬ್ಬರ ವಿತರಣೆಗೆ ರೈತ ಕಾರ್ಡ್ ಬಳಕೆ

ವೀರೇಶ.ಎನ್.ಮಠಪತಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೊಬ್ಬರ ವಿತರಣೆಗೆ ರೈತ ಕಾರ್ಡ್ ಬಳಕೆ

ಚಿಟಗುಪ್ಪಾ: ಪ್ರಸಕ್ತ ಮುಂಗಾರು ಹಂಗಾಮಿಗೆ ಬೀಜ ಬಿತ್ತಲು ರೈತರಿಗೆ ರಸಗೊಬ್ಬರ ಸಮರ್ಪಕವಾಗಿ ವಿತರಿಸಲು ಹುಮನಾಬಾದ್ ತಾಲ್ಲೂಕಿನ ನಿರ್ಣಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ನಿಯಮಿತವು `ರಸಗೊಬ್ಬರ ವಿತರಣಾ ರೈತ ಕಾರ್ಡ್~ ಎಂಬ ವಿನೂತನ ಯೋಜನೆ ಆರಂಭಿಸಿ, ರೈತರ ಮೆಚ್ಚುಗೆಗೆ ಪಾತ್ರವಾಗಿದೆ.ಪ್ರತಿ ರೈತನಿಗೆ ಒಂದು ಕಾರ್ಡ್ ವಿತರಿಸಲಾಗುತ್ತಿದ್ದು, ಮಂಗಳವಾರದಿಂದ ರಸಗೊಬ್ಬರ ವಿತರಣಾ ಕಾರ್ಯ ಆರಂಭಿಸುತ್ತಿದ್ದೇವೆ, ಪ್ರಥಮ ಹಂತದಲ್ಲಿ ಕಾರ್ಡ್ ಹೊಂದಿರುವ ರೈತರಿಗೆ ತಲಾ ಒಂದು ಚೀಲ ಡಿಎಪಿ ರಸಗೊಬ್ಬರ  ವಿತರಿಸಲಾಗುತ್ತದೆ, ಮುಂದೆ ದಾಸ್ತಾನು ಲಭ್ಯವಾದಂತೆ ಗೊಬ್ಬರವನ್ನು ಹೆಚ್ಚು ವಿತರಿಸಲಾಗಿತ್ತದೆ  ಎಂದು ಅಧ್ಯಕ್ಷ ಜಗನ್ನಾಥ ರೆಡ್ಡಿ ಎಖ್ಖೇಳಿ ತಿಳಿಸುತ್ತಾರೆ.ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ  ಈ ಪ್ರಯೋಗ ಮಾಡುತ್ತಿದ್ದು,  ರೈತರು ಯಾವುದೇ ಮಧ್ಯವರ್ತಿ ಹಾಗೂ  ದಲ್ಲಾಳಿಗಳ ಹಾವಳಿಯಿಂದ ಭಯ ಬೀತರಾಗುವುದರಿಂದ ತಪ್ಪಿಸಲಾಗಿದ್ದು,  ಸರ್ಕಾರ ನಿಗದಿ ಪಡಿಸಿದ ದರದಲ್ಲಿ ರೈತರು ರಸಗೊಬ್ಬರ ಪಡೆಯುತ್ತಾರೆ ಎಂದು ಕಾರ್ಯದರ್ಶಿ ಮಲ್ಲಿಕಾರ್ಜುನ ಸೋಮಾ ತಿಳಿಸಿದ್ದಾರೆ.ರೈತರಿಗೆ ಆತಂಕ ಬೇಡ: ನಿರ್ಣಾ ಪಿಕೆಪಿಎಸ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರು ರಸಗೊಬ್ಬರ ದಾಸ್ತಾನಿನ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ, ಸದ್ಯ ಡಿಎಪಿ, ಯೂರಿಯಾ, ರಸಗೊಬ್ಬರಗಳ ದಾಸ್ತಾನು ಲಭ್ಯವಿದ್ದು, ಸರ್ವರಿಗೂ ಸಮಪ್ರಮಾಣದಲ್ಲಿ ಕಾರ್ಡ್ ಮೂಲಕ ವಿತರಿಸಲಾಗುತ್ತದೆ ಎಂದು ಅಧ್ಯಕ್ಷರು ತಿಳಿಸ್ದ್ದಿದಾರೆ.ಪ್ರತಿ ರೈತನಿಗೆ ತಲಾ ಒಂದು ಚೀಲ ಡಿಎಪಿ ರಸಗೊಬ್ಬರ ವಿತರಿಸಿದರೂ ಶೇ. 40 ರಷ್ಟು ರಸಗೊಬ್ಬರದ ಕೊರತೆ ಉಂಟಾಗುತ್ತಿದೆ ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಪೂರೈಸಬೇಕಾಗುತ್ತದೆ ಎಂದು ಕಾರ್ಯದರ್ಶಿ ಹೇಳುತ್ತಾರೆ.ಒಟ್ಟಿನಲ್ಲಿ ರೈತ ಕಾರ್ಡ್ ಮೂಲಕ ರಸಗೊಬ್ಬರ ವಿತರಿಸುವುದರಿಂದ ಯಾವ ರೈತರಿಗೂ ಅನ್ಯಾಯ ಆಗುತ್ತಿಲ್ಲ ಎಂಬ ಸಂತೋಷ ಬಹುತೇಕ ರೈತರಿಗೆ ಉಂಟಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.