ಗೊಳಸಂಗಿ (ತಾ. ಬಸವನ ಬಾಗೇವಾಡಿ): `ಜಲ ನಿರ್ಮಲ~ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ಗೊಳಸಂಗಿ ಗ್ರಾಮದಲ್ಲಿ ಅನುಷ್ಠಾನಗೊಂಡಿದೆ. ಆದರೂ ಇಲ್ಲಿಯ ಮಾದರಿ ಬಡವಾಣೆಯ ಕೆ.ಎಚ್.ಡಿ.ಸಿ. ಕಾಲೊನಿಗೆ ಇನ್ನೂ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಇಲ್ಲಿಯ ಜನ ಮತ್ತೆ ನೀರಿಗಾಗಿ ಬೀದಿ-ಬೀದಿ ಅಲೆಯುವುದು ತಪ್ಪಿಲ್ಲ.

1997ರಲ್ಲಿ ಗೊಳಸಂಗಿಯಲ್ಲಿ ತಲೆ ಎತ್ತಿ ನಿಂತ `ಮಾದರಿ ಬಡಾವಣೆ~ ಮೂಲ ಸೌಲಭ್ಯಗಳನ್ನೆಲ್ಲ ಪಡೆದು ಮಾದರಿ ಗ್ರಾಮವಾಗಿ ಇಂದು ಇಡೀ ಜಿಲ್ಲೆಯಲ್ಲಿ ಕಂಗೊಳಿಸಬೇಕಿತ್ತು. ಆದರೆ, ಪ್ರತಿ ಸಮಸ್ಯೆಗಳಿಗೆಲ್ಲ ಹೋರಾಟದ ಮೂಲಕವೇ ಪರಿಹಾರ ಕಾಣುವಂತಾಗಿರುವುದು ವಿಪರ್ಯಾಸ ಎನ್ನುತ್ತಾರೆ ಬಡಾವಣೆಯ ನಿವಾಸಿ ಡಿ.ಬಿ. ಕುಪ್ಪಸ್ತ.

ಜಲನಿರ್ಮಲ ಯೋಜನೆಯ ನೀರು ಗೊಳಸಂಗಿ ಗ್ರಾಮದ ಅವಿಭಾಜ್ಯ ಅಂಗವಾಗಿರುವ ಈ ಮಾದರಿ ಬಡವಾಣೆಗೇಕಿಲ್ಲ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

`ನೀರ ಸರ್ಯಾಗಿ ಬರುವಲ್ದಾಗೇತಿ... ನಮ್ಮ ಬಡಾವಣೆಕ ಯಾರಾದ್ರೂ ದಿಕ್ಕ ಅದಾರೋ ಇಲ್ಲೊ ಗೊತ್ತಿಲ್ಲ... ಪಂಚೇತಿ ತನಕ ಹೋಗಿ ಚೀರಾಡಿದಾಗ ಈಟ ನೀರ ಬಂದಿತ್ತು. ಈಗ ಮತ್ತ ಅದ ರಾಗ, ಅದ ಹಾಡ...~ ಎಂದು ಈ ಬಡಾವಣೆಯ ಜನ ಗೋಳಿಡುತ್ತಿದ್ದಾರೆ.

ಸುಮಾರು ಒಂದು ತಿಂಗಳ ಹಿಂದೆ ಸಮರ್ಪಕ ನೀರು ಪೂರೈಕೆಯಾಗದೇ ಇದ್ದಾಗ ಇಲ್ಲಿಯ ಜನ ಗ್ರಾಮ ಪಂಚಾಯಿತಿ ಎದುರು ಖಾಲಿ ಕೊಡದೊಂದಿಗೆ ಪ್ರತಿಭಟನೆ ನಡೆಸಿದ್ದರು. ಆಗ ತಾತ್ಕಾಲಿಕವಾಗಿ ಕೆಲ ದಿನ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು.

`ಜಲನಿರ್ಮಲ ಯೋಜನೆಯಡಿ ಇಡೀ ಗೊಳಸಂಗಿ ಗ್ರಾಮದ ತುಂಬೆಲ್ಲಾ ನೀರಿನ ಪೈಪ್ಲೈನ್ ಜೋಡಿಸಿ ನದಿ ನೀರು ಪೂರೈಕೆಯಾಗುತ್ತಿದೆ. ಆದರೆ, ಗೊಳಸಂಗಿ ಗ್ರಾಮ ಪಂಚಾಯಿತಿಗೆ ಎಂಟು ಜನ ಸದಸ್ಯರನ್ನು ಆಯ್ಕೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿರುವ ತಮ್ಮ ಬಡಾವಣೆಗೆ ಈ ಯೋಜನೆ ತಲುಪೇ ಇಲ್ಲ~ ಎನ್ನುತ್ತಾರೆ ಅವರು.

`ಈ ಹಿಂದಿನ ಶಾಸಕ ಶಿವಪುತ್ರಪ್ಪ ದೇಸಾಯಿ ಬಡಾವಣೆ ಜನತೆಯ ಸಮಸ್ಯೆಗೆ ಸ್ಪಂದಿಸಿ ಜಿಲ್ಲಾ ಪಂಚಾಯಿತಿಯಿಂದ ಸುಮಾರು 50 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ನ್ನು ನಿರ್ಮಿಸಿ, ಕೊಳವೆಬಾವಿಯ ಮೂಲಕ ನೀರು ಪೂರೈಕೆ ಮಾಡಿದ್ದರು. ಅಲ್ಲಿಂದಲೇ ಪ್ರತಿ ಮನೆಗೂ ನೀರು ಪೈಪಲೈನ್ ಮೂಲಕ ತಲುಪುತ್ತಿತ್ತು. ಆದರೆ, ಅಂತರ್ಜಲ ಮಟ್ಟ ಕುಸಿದ ಪರಿಣಾಮ, ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಬಂದರೂ ಕೇವಲ 5 ರಿಂದ 10 ನಿಮಿಷ ಮಾತ್ರ~ ಎನ್ನುತ್ತಾರೆ ಜನ.

`ಕುಡಿಯುವ ನೀರಿನ ಕೊರತೆಯಿಂದ ಪರದಾಡುತ್ತಿರುವ ಗೊಳಸಂಗಿ ಮಾದರಿ ಬಡಾವಣೆಯ ಜನತೆಗೆ ಪರ್ಯಾಯ ವ್ಯವಸ್ಥೆ ಮಾಡಲು ಗ್ರಾಮ ಪಂಚಾಯಿತಿ ಸನ್ನದ್ಧವಾಗಿದೆ~ ಎಂಬುದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಜೆ. ಉದಯಕುಮಾರ ವಿವರಣೆ.

ಮಾದರಿ ಬಡಾವಣೆಯ ಸಮೀಪ ಸರ್ಕಾರಿ ಪದವಿ ಕಾಲೇಜು ಬಳಿ ಮತ್ತೊಂದು ಕೊಳವೆ ಬಾವಿ ಕೊರೆಸಲಾಗಿದ್ದು, ಅದರ ನೀರನ್ನು ಮಾದರಿ ಬಡಾವಣೆಗೆ ಪೂರೈಕೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜನತೆ ಸಹನೆಯೊಂದಿಗೆ ಸಹಕಾರ ನೀಡಬೇಕು ಎಂಬುದು ಅವರ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.