ಗೋಕರ್ಣದಲ್ಲಿ ಹೆಚ್ಚು ಮಳೆ

7

ಗೋಕರ್ಣದಲ್ಲಿ ಹೆಚ್ಚು ಮಳೆ

Published:
Updated:
ಗೋಕರ್ಣದಲ್ಲಿ ಹೆಚ್ಚು ಮಳೆ

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಒಳನಾಡಿನ ಹಲವೆಡೆ ಮಳೆಯಾಗಿದ್ದು, ಗೋಕರ್ಣದಲ್ಲಿ 10 ಸೆಂ.ಮೀ. ಗರಿಷ್ಠ ಪ್ರಮಾಣದ ಮಳೆಯಾಗಿದೆ.ಉಳಿದಂತೆ ಮಂಗಳೂರು ವಿಮಾನ ನಿಲ್ದಾಣ, ಪಣಂಬೂರಿನಲ್ಲಿ 8, ಕಾರ್ಕಳದಲ್ಲಿ 6, ಮಂಗಳೂರು, ಮೂಡುಬಿದಿರೆಯಲ್ಲಿ 5, ಕುಂದಾಪುರ, ಉಡುಪಿ, ಹೊನ್ನಾವರದಲ್ಲಿ 4, ಧರ್ಮಸ್ಥಳ, ಭಟ್ಕಳ, ಕುಮಟ, ಮಡಿಕೇರಿಯಲ್ಲಿ 3, ಮುಲ್ಕಿ, ಬಂಟ್ವಾಳ, ಬೆಳ್ತಂಗಡಿ, ಕೊಲ್ಲೂರು, ಸಿದ್ಧಾಪುರ, ಕಾರವಾರ, ಕೂಡಲಸಂಗಮ, ಪೊನ್ನಂಪೇಟೆ, ಕೊಟ್ಟಿಗೆಹಾರ, ಕೊಪ್ಪ, ಬಾಗೇಪಲ್ಲಿ, ಗುಡಿಬಂಡೆಯಲ್ಲಿ 2, ಮಾಣಿ, ಪುತ್ತೂರು, ಸುಬ್ರಹ್ಮಣ್ಯ, ಕೋಟ, ಗೇರುಸೊಪ್ಪ, ಅಂಕೋಲ, ಶಿರಸಿ, ಹಾನಗಲ್ಲ, ಹಾವೇರಿ, ವಿರಾಜಪೇಟೆ, ಲಿಂಗನಮಕ್ಕಿ, ಹೊಸನಗರ, ತೀರ್ಥಹಳ್ಳಿ, ಶೃಂಗೇರಿ, ಕಮ್ಮರಡಿ, ಕೊರಟಗೆರೆಯಲ್ಲಿ 1ಸೆಂ.ಮೀ.ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry