ಗೋವಾದಲ್ಲಿ ಮಾತ್ರ ಎಲ್ಲೆಂದರಲ್ಲಿ ಸುತ್ತಾಡಲು ಸಾಧ್ಯ ಎಂದು ನಟ, ನಿರ್ದೇಶಕ ಅಕ್ಷಯ್ ಕುಮಾರ್ ಗೋವಾ ಮೇಲಿರುವ ತಮ್ಮ ಪ್ರೀತಿಯನ್ನು ಹೊರಹಾಕಿದ್ದಾರೆ. ‘ವೃತ್ತಿಯಿಂದಾಗಿ ದೇಶ ವಿದೇಶದ ಅನೇಕ ಜಾಗಗಳನ್ನು ಸುತ್ತುವ ಅವಕಾಶ ಒದಗಿಬಂದಿದ್ದರೂ ವಿರಾಮದ ದಿನಗಳನ್ನು ಕಳೆಯಲು ಮಾತ್ರ ಗೋವಾ ನಗರವನ್ನೇ ಆಯ್ಕೆ ಮಾಡುತ್ತೇನೆ’ ಎಂದಿದ್ದಾರೆ.

ಅಕ್ಷಯ್ ಅಭಿನಯದ ‘ಹಾಲಿಡೇ: ಎ ಸೋಲ್ಜರ್ ಈಸ್ ನೆವರ್ ಆಫ್ ಡ್ಯೂಟಿ’ ಚಿತ್ರ ತೆರೆಕಾಣಲು ಸಿದ್ಧವಾಗಿದೆ. ಮುಂದಿನ ‘ಗಬ್ಬರ್’, ‘ಬೇಬಿ’ ಚಿತ್ರಗಳ ಕುರಿತೂ ಅವರಿಗೆ ನಿರೀಕ್ಷೆಗಳಿವೆ.

‘ನಾನು ಪ್ರತಿ ಮೂರು ತಿಂಗಳಿಗೊಮ್ಮೆ ಏಳು ದಿನಗಳ ಬ್ರೇಕ್ ಪಡೆಯುತ್ತೇನೆ. ಆ ಸಮಯದಲ್ಲಿ ಗೋವಾಕ್ಕೆ ತೆರಳುತ್ತೇನೆ. ಗೋವಾವನ್ನು ನಾನು ಇನ್ನಿಲ್ಲದಂತೆ ಪ್ರೀತಿಸುತ್ತೇನೆ. ಅಲ್ಲಿ ನಾನು ಎಲ್ಲರಿಗೂ ಗೊತ್ತು. ಅವರೆಲ್ಲ ಹಾಯ್ ಎನ್ನುತ್ತಾರೆ ಅಷ್ಟೇ. ಇಡೀ ದೇಶದಲ್ಲಿ ಗೋವಾದಲ್ಲಿ ಮಾತ್ರ ನಾನು ಎಲ್ಲೆಂದರಲ್ಲಿ ಸುತ್ತಾಡಿ ಮಜಾ ಮಾಡುತ್ತೇನೆ’ ಎಂದಿದ್ದಾರೆ.

‘ಗೋವಾ ಭಾರತೀಯರಿಗೆ ಮಾತ್ರ ನೆಚ್ಚಿನ ತಾಣವಲ್ಲ. ವಿದೇಶಿಯರಿಗೂ ನೆಚ್ಚಿನ ತಾಣವಾಗಿದೆ. ಅಲ್ಲಿನ ಪ್ರವಾಸೋದ್ಯಮ 2013ರಲ್ಲಿ 3.12 ಮಿಲಿಯನ್ ಪ್ರವಾಸಿಗರನ್ನು ಸೆಳೆದಿದ್ದು ದಾಖಲೆ ನಿರ್ಮಿಸಿದೆ’ ಎಂದೂ ಅಕ್ಕಿ ಹೇಳಿದ್ದಾರೆ.

ಇಬ್ಬರು ಮಕ್ಕಳ ತಂದೆ ಅಕ್ಷಯ್ ರಜಾಕಾಲದಲ್ಲಿ ಪತ್ನಿ ಟ್ವಿಂಕಲ್ ಜೊತೆ ಬೀಚ್ಗಳಲ್ಲಿ ಸುತ್ತಾಡುತ್ತಾರೆ. ‘ನಾನು ಗೋವಾದಲ್ಲಿ ಪೋರ್ಚುಗೀಸರ ಮನೆಯೊಂದನ್ನು ಖರೀದಿಸಿದ್ದೇನೆ. ಅಲ್ಲಿ ನನ್ನ ಕುಟುಂಬದ ಜೊತೆ ಕಾಲ ಕಳೆಯುತ್ತೇನೆ. ನನಗೆ ಇಷ್ಟಬಂದ ಖಾದ್ಯಗಳನ್ನು ಸವಿಯುತ್ತೇನೆ. ಅಲ್ಲಿ ವಿಶ್ವದ ಎಲ್ಲ ಭಾಗಗಳ ಬಾಣಸಿಗರು ಸಿಗುತ್ತಾರೆ. ಅವರನ್ನು ಮನೆಗೆ ಕರೆಸಿ ಅಡುಗೆ ಮಾಡಿಸಬಹುದು.

ಅಲ್ಲಿ ಚಿಕ್ಕ ಚಿಕ್ಕ ರೆಸ್ಟೋರೆಂಟ್ಗಳೂ ಇವೆ. ಅವು ಜರ್ಮನಿ, ರಷ್ಯಾ, ಟೊರಾಂಟೋ ಮತ್ತಿತರ ದೇಶದ ಜನರ ಒಡೆತನದಲ್ಲಿದೆ’ ಎಂಬುದು ಅಕ್ಷಯ್ ನೀಡುವ ಗೋವಾದ ಬಗೆಗಿನ ವಿವರಣೆ. ತಮ್ಮನ್ನು ತಾವು ತಿಂಡಿಪೋತ ಎಂದು ಹೇಳಿಕೊಳ್ಳುವ ಅಕ್ಷಯ್, ಸಹ ನಟಿ ಸೋನಾಕ್ಷಿ ಸಿನ್ಹಾ ಅವರಿಗೂ ಒಮ್ಮೆ ಗೋವಾದಲ್ಲಿ ರಜಾದ ಮಜಾ ಅನುಭವಿಸುವಂತೆ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.