ಬಾಗಲಕೋಟೆ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪದ್ಧತಿ ಆಧಾರ (ಪಾಳಿ ಪ್ರಕಾರ)ದ ಮೇಲೆ ರೈತನ ಹೊಲದಲ್ಲಿನ ಕಬ್ಬು ಕಟಾವು ಮತ್ತು ಸಾಗಾಣಿಕೆ ಮಾಡದಿರುವುದರಿಂದ ರೈತರು ಆತಂತಕ್ಕೀಡಾಗಿದ್ದಾರೆ. ಇದರ ದುರ್ಲಾಭ ಪಡೆಯುತ್ತಿರುವ ಗ್ಯಾಂಗ್ನವರು ಪ್ರತಿ ಟನ್ಗೆ 200 ರೂಪಾಯಿ ಹೆಚ್ಚುವರಿ ಹಣವನ್ನು ರೈತರಿಂದ ಸುಲಿಗೆ ಮಾಡತೊಡಗಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ನಾಗೇಶ ಸೋರಗಾಂವಿ, ರೈತಸಂಘದ ಮುಖಂಡ ರಮೇಶ ಗಡದಣ್ಣವರ ಮತ್ತಿತರರು ಆರೋಪಿಸಿದ್ದಾರೆ.

ಇದರಿಂದ ರೋಸಿ ಹೋಗಿರುವ ಕಬ್ಬು ಬೆಳೆಗಾರರು ಕಾರ್ಖಾನೆಗಳ ಮಾಲೀಕರನ್ನು ಶಪಿಸುತ್ತಲೇ ‘ಲಗಾನ್’ ಕೊಟ್ಟು ಕಬ್ಬು ಸಾಗಿಸತೊಡಗಿದ್ದಾರೆ ಎಂದು ಅವರು ದೂರಿದ್ದಾರೆ.

“ಕಾರ್ಖಾನೆಯವರು ಪಾಳಿ ಪ್ರಕಾರವೇ ಕಬ್ಬು ಕಟಾವು ಹಾಗೂ ಸಾಗಾಣಿಕೆ ನಡೆಸಿದ್ದರೆ ಯಾವುದೇ ರೀತಿಯ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ರೈತರನ್ನು ಒಡೆದು ಆಳಲು ಮುಂದಾಗಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರ ಕುತಂತ್ರದಿಂದ ಇಂತಹ ಪರಿಸ್ಥಿತಿ ಸೃಷ್ಟಿಯಾಗಿದೆ”
“ಪ್ರತಿಯೊಂದು ಕಾರ್ಖಾನೆಯವರು ಎಕ್ಸ್ಫೀಲ್ಡ್ ದರದಂತೆ ತಮ್ಮ ಖಾಯಂ ರೈತರ ಕಬ್ಬು ಕಟಾವು ದಿನಾಂಕ ನಿಗದಿಪಡಿಸಿರುತ್ತಾರೆ. ಆದರೆ ಈ ವರ್ಷ ಪದ್ಧತಿ(ಪಾಳಿ) ಪ್ರಕಾರ ಕಬ್ಬು ಕಟಾವು ಮತ್ತು ಸಾಗಾಣಿಕೆಯಲ್ಲಿ ವಿಫಲಗೊಂಡಿರುವ ಕಾರ್ಖಾನೆಗಳು ಕಬ್ಬು ಸಾಗಾಣಿಕೆಗಾಗಿ ರೈತರ ನಡುವೆಯೇ ಅನಾರೋಗ್ಯಕರ ಪೈಪೋಟಿ ಹುಟ್ಟುಹಾಕಿದ್ದಾರೆ” ಎಂದು ಕಬ್ಬು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ಆತಂಕ
ನಾಟಿ ಮಾಡಿದ 16ರಿಂದ 18 ತಿಂಗಳ ಕಬ್ಬು ಕಟಾವು ಆಗದೇ ಹಾಗೇ ಉಳಿದಿರುವಾಗ ಕೆಲ ಗ್ಯಾಂಗ್ಗಳು ಹೆಚ್ಚಿನ ಹಣದ ಆಸೆಗಾಗಿ 10ರಿಂದ 12 ತಿಂಗಳಿನ ಕಬ್ಬು ಕಟಾವು ಮಾಡುತ್ತಿರುವುದು ಉಳಿದ ರೈತರ ಆತಂಕಕ್ಕೆ ಕಾರಣವಾಗಿದೆ ಎಂದು ಗಡದಣ್ಣವರ ಹೇಳಿದರು.

“ಒಂದು ವೇಳೆ ತಾವು ಹೆಚ್ಚಿನ ಹಣ ನೀಡದಿದ್ದರೆ ಕಬ್ಬು ಕಟಾವು ಹಾಗೂ ಸಾಗಾಣಿಕೆ ಮತ್ತಷ್ಟು ವಿಳಂಬಗೊಳ್ಳಬಹುದು ಎಂಬ ಆತಂಕದಿಂದ ರೈತರೇ ಪೈಪೋಟಿಗೆ ಬಿದ್ದು ಗ್ಯಾಂಗ್ಗಳಿಗೆ ಹೆಚ್ಚಿನ ಹಣ ನೀಡಿ ಕರೆತರುವ ಪರಿಸ್ಥಿತಿ ಉದ್ಭವಿಸಿದೆ. ಇದರಿಂದ ಕಬ್ಬು ಬೆಳೆಗಾರರು ಪ್ರತಿ ಟನ್ಗೆ 200 ರೂಪಾಯಿ ಹೆಚ್ಚುವರಿ ಹಣ ನೀಡುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಪರಿಸ್ಥಿತಿ ಲಾಭ ಪಡೆದುಕೊಳ್ಳುತ್ತಿರುವ ಗ್ಯಾಂಗ್ಗಳು ಕಾರ್ಖಾನೆ ನೀಡುವ ಕಟಾವು ಚಾರ್ಜ್ ಹೊರತುಪಡಿಸಿ ಪ್ರತಿ ಟ್ರಿಪ್(15ರಿಂದ 20 ಟನ್)ಗೆ ಎರಡರಿಂದ ಐದು ಸಾವಿರ ರೂಪಾಯಿಗಳವರೆಗೆ ಲಗಾನ್ ‘ವಸೂಲಿ’ ಮಾಡ ತೊಡಗಿದ್ದಾರೆ ಎಂದು ಬೆಳೆಗಾರರ ಸಂಘದ ಮುಧೋಳ ತಾಲ್ಲೂಕು ಅಧ್ಯಕ್ಷ ಬಸವರಾಜ ಗಣಿ ದೂರಿದರು.

ಒಂದು ಟನ್ ಕಬ್ಬು ಬೆಳೆಯಲು ರೈತರು 2 ಸಾವಿರಕ್ಕೂ ಅಧಿಕ ಖರ್ಚು ಮಾಡಬೇಕು. ಕಾರ್ಖಾನೆಗಳು ನೀಡುತ್ತಿರುವ ದರ 1800ರ ಆಸುಪಾಸು. ಇಂತಹ ಪರಿಸ್ಥಿತಿ ಇರುವಾಗ ಗ್ಯಾಂಗ್ನವರ ರೈತರಿಂದಲೇ ಹೆಚ್ಚುವರಿ ಹಣ ಪಡೆದರೆ ರೈತರ ಪರಿಸ್ಥಿತಿ ಏನು ಎಂದು ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಮಲ್ಲಪ್ಪ ನಾಯಿಕ, ಸಂಗಪ್ಪ ದೇಸಾಯಿ, ಪ್ರತಾಪ್ ಚಂದನಶಿವ ಹಾಗೂ ಪ್ರಕಾಶ ಲಿಂಬಿಕಾಯಿ ಪ್ರಶ್ನಿಸುತ್ತಾರೆ.

ಮುಂದಿನ ವರ್ಷದಿಂದ ಕಾರ್ಖಾನೆಯವರೇ ಪದ್ಧತಿ(ಪಾಳಿ) ಪ್ರಕಾರ ರೈತರ ಹೊಲದಲ್ಲಿನ ಕಬ್ಬು ಕಟಾವು ಮಾಡಬೇಕು ಎಂದು ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.

ರೈತರು ಕಬ್ಬು ಉಳಿಯುತ್ತದೆ ಎಂದು ವಿನಾಕಾರಣ ಆತಂಕಪಟ್ಟುಕೊಳ್ಳದೇ ಪಾಳಿ ಪ್ರಕಾರ ಕಬ್ಬು ಕಟಾವು ಮತ್ತು ಸಾಗಾಣಿಕೆ ಕಾರ್ಖಾನೆಗಳ ಮೇಲೆ ಒತ್ತಡ ಹೇರಬೇಕೇ ವಿನಃ ಗ್ಯಾಂಗ್ನವರಿಗೆ ಹೆಚ್ಚುವರಿ ಹಣ ಪಾವತಿಸುವುದು ಅಥವಾ ತಾವೇ ಗ್ಯಾಂಗ್ ಕರೆತರುವುದನ್ನು ನಿಲ್ಲಿಸಬೇಕು ಎಂದು ಸಂಘದ ಮುಖಂಡು ಮನವಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.