ಮಂಗಳವಾರ, ಜೂನ್ 22, 2021
24 °C

ಗ್ಯಾಸ್‌ ರೀಫಿಲ್ಲಿಂಗ್‌: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನಗರದ ವಿವಿಧೆಡೆ ಅಕ್ರಮವಾಗಿ ಗ್ಯಾಸ್‌ ಸಿಲಿಂಡರ್ ರೀಫಿಲ್ಲಿಂಗ್‌ ಮಾಡುತ್ತಿದ್ದ ಮೂವರನ್ನು ನಗರ ಠಾಣೆಯ ಪೋಲಿಸರು ಬಂಧಿಸಿ ಅವರಿಂದ 66 ಸಾವಿರ ರೂಪಾಯಿ ಮೌಲ್ಯದ ಸಿಲಿಂಡರ್ ಮತ್ತು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ನಗರದ ಉತ್ತರ ಬಡಾವಣೆಯ ಅರಳಿಕಟ್ಟೆ ವೃತ್ತದ ಸಮೀಪ ರಾಜರಾಜೇಶ್ವರಿ ಎಂಟರ್‌ಪ್ರೈಸಸ್‌ ಮೇಲೆ ದಾಳಿ ನಡೆಸಿದ ಪೊಲೀಸರು ಎಸ್.ಜಿ. ಪ್ರಸಾದ್ ಎಂಬುವನನ್ನು ಬಂಧಿಸಿ 30,450 ರೂಪಾಯಿ -ಮೌಲ್ಯದ ಭಾರತ್ ಗ್ಯಾಸ್ ಕಂಪನಿಯ 13 ಸಿಲಿಂಡರ್ ಮತ್ತು ರೆಗ್ಯುಲೇಟರ್ ಮತ್ತು ಪೈಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ರಂಗೋಲಿಹಳ್ಳದಲ್ಲಿರುವ ಬ್ರಹ್ಮಕುಮಾರಿ ಸಮಾಜದ ಹಿಂಭಾಗದ ಪಾಳು ಬಿದ್ದಿರುವ ಖಾಲಿ ನಿವೇಶನದಲ್ಲಿ ಅಕ್ರಮವಾಗಿ ಗ್ಯಾಸ್‌ ರಿಫಿಲ್ಲಿಂಗ್‌ ಮಡುತ್ತಿದ್ದ ಶಿವಕುಮಾರ್ ಎಂಬುವನನ್ನು ಬಂಧಿಸಿ ಅವರಿಂದ 20,300 ರೂಪಾಯಿ ಮೌಲ್ಯದ ಮೂರು ಖಾಲಿ ಸಿಲಿಂಡರ್, 1 ತುಂಬಿದ ಸಿಲಿಂಡರ್, ಗ್ಯಾಸ್ ರಿಫೀಲಿಂಗ್ ರಾಡ್, ಡಿಜಿಟಲ್ ಸ್ಕೇಲ್‌ ವಶಪಡಿಸಿಕೊಳ್ಳಲಾಗಿದೆ.ನಗರದ ಭಾರತಿ ವಿದ್ಯಾಮಂದಿರ ಶಾಲೆಯ ಹಿಂಭಾಗದಲ್ಲಿ ರಿಫಿಲ್ಲಿಂಗ್‌ ಮಾಡುತ್ತಿದ್ದ ಲಕ್ಮೀಕಾಂತ್ ಎಂಬುವನನ್ನು ಬಂಧಿಸಿ 16,030 ರೂಪಾಯಿ ಮೌಲ್ಯದ ಮೂರು ಸಿಲಿಂಡರ್, ತೂಕದ ಯಂತ್ರ ಮತ್ತು ಗ್ಯಾಸ್ ರೀಫಿಲಿಂಗ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಜಿಲ್ಲಾ ಅಪರಾಧ ಪತ್ತೆ ದಳದ ಪಿ.ಎಸ್‌.ಐ. ಎಂ.ಎನ್. ಶಶಿಧರ್ ಹಾಗೂ ಅವರ ಸಿಬ್ಬಂದಿ ಈ ಮೂರು ಸ್ಥಳಗಳಿಗೆ ದಾಳಿ ಮಾಡಿದ್ದರು. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.