ಬೆಂಗಳೂರು: ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ನಿವೇಶನ ನೋಂದಣಿ ಮಾಡಿಸಲು, ಫಾರ್ಮ್ 9 ಮತ್ತು 11 ಬಳಸಿ ಸಲ್ಲಿಸಿದ ದಾಖಲೆಗಳನ್ನು
ಉಪ ನೋಂದಣಾಧಿಕಾರಿ ಪರಿಗಣಿಸಬೇಕು ಎಂದು ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ನಿರ್ದೇಶನ ನೀಡಿದೆ.

ಬೆಂಗಳೂರಿನ ಹೆಸರಘಟ್ಟದ ಹೇಮಂತ್ ಕುಮಾರ್ ಮತ್ತು ಎಂ. ಸುರೇಶ್ ಎಂಬುವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ಈ ನಿರ್ದೇಶನ ನೀಡಿದರು. ಅರ್ಜಿದಾರರು ಫಾರ್ಮ್ 9 ಮತ್ತು 11 ಬಳಸಿ ದಾಖಲೆ ಸಲ್ಲಿಸಿದರೆ ಅದನ್ನು ಪರಿಗಣಿಸಬೇಕು. ಮಧ್ಯಂತರ ನಿರ್ದೇಶನವು ಈ ಅರ್ಜಿಗೆ ಸಂಬಂಧಿಸಿದಂತೆ ತಾನು ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ನಿವೇಶನ ನೋಂದಣಿಗೆ ಫಾರ್ಮ್ 9ಎ ಮತ್ತು 11ಎ ಇ–ಖಾತಾ ಮೂಲಕವೇ ದಾಖಲೆಗಳನ್ನು ನೀಡಬೇಕು ಎಂದು ಹೆಸರಘಟ್ಟದ ಉಪ ನೋಂದಣಾಧಿಕಾರಿಯವರು ಹೇಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಅರ್ಜಿದಾರರು ದೂರಿದ್ದರು. ವಿಚಾರಣೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.