ಬೆಂಗಳೂರು: ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ರಾಜ್ಯಕ್ಕೆ ರೂ. 19.74 ಕೋಟಿಗಳ ಸಾಲ ನೆರವು ಪ್ರಕಟಿಸಿದೆ.

‘ಗ್ರಾಮೀಣ ಮೂಲಸೌಕರ್ಯ ವೃದ್ಧಿ ನಿಧಿ (ಆರ್ಐಡಿಎಫ್) ಮೂಲಕ ‘ನಬಾರ್ಡ್’ ಈ ನೆರವು ನೀಡಿದ್ದು, ಗ್ರಾಮೀಣ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕಳೆದ ವರ್ಷ ‘ನಬಾರ್ಡ್’ ರಾಜ್ಯಕ್ಕೆ 822 ಕೋಟಿಗಳಷ್ಟು ಸಾಲದ ನೆರವು ನೀಡಿತ್ತು.

ಒಟ್ಟು 82.30 ಕಿ.ಮೀ ಉದ್ದದ 26 ಗ್ರಾಮೀಣ ರಸ್ತೆ ಯೋಜನೆಗಳಿಗೆ ಈ ಸಾಲದ ನೆರವು ಅನ್ವಯಿಸಲಿದೆ. ಇದರಿಂದ 15 ಜಿಲ್ಲೆಗಳಿಗೆ ಅನುಕೂಲವಾಗಲಿದ್ದು, 105 ಹಳ್ಳಿಗಳನ್ನು ಮತ್ತು 45 ಮಾರುಕಟ್ಟೆಗಳನ್ನು ಹೊಸ ರಸ್ತೆಗಳು ಸಂಪರ್ಕಿಸಲಿವೆ. ಇದರಿಂದ 7.08 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಲಿದೆ ಎಂದು ‘ನಬಾರ್ಡ್’ನ ಕರ್ನಾಟಕ ಪ್ರಾದೇಶಿಕ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.