ತುಮಕೂರು: ಗ್ರಾಮೀಣ ಭತ್ಯೆ ಪಡೆಯುವಲ್ಲಿ ಸರ್ಕಾರಿ ವೈದ್ಯರ ವಂಚನೆ ಪ್ರಕರಣಕ್ಕೆ ಇತಿಶ್ರೀ ಹಾಕಲು ಸರ್ಕಾರವೇ ಪರೋಕ್ಷವಾಗಿ ಸಂದೇಶ ರವಾನೆ ಮಾಡಿದೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇರುವುದಾಗಿ ವಾಸ್ತವ್ಯ ದೃಢೀಕರಣ ಪತ್ರ ನೀಡಿದ ಸರ್ಕಾರಿ ವೈದ್ಯರು ಗ್ರಾಮೀಣ ಭತ್ಯೆ ಪಡೆದ ಪ್ರಕರಣ ಲೋಕಾಯುಕ್ತ ತನಿಖೆಯಲ್ಲಿದೆ.

52 ವೈದ್ಯರ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದು, ಬಂಧನದ ಭೀತಿಯಲ್ಲಿದ್ದಾರೆ. ಈ ಪ್ರಕರಣ ಬಹಿರಂಗವಾಗುತ್ತಿದ್ದಂತೆ ರಾಜ್ಯ ಸರ್ಕಾರಿ ವೈದ್ಯರ ಸಂಘದ ಪದಾಧಿಕಾರಿಗಳು ಸರ್ಕಾರದ ಮೇಲೆ ಒತ್ತಡ ಹಾಕಿರುವುದರಿಂದ ಸರ್ಕಾರವು ಪ್ರಕರಣವನ್ನು ಕೈಬಿಡುವ ಸಿದ್ಧತೆಯಲಿದೆ.

ವೈದ್ಯರಿಂದ ಸಾಮೂಹಿಕ ರಾಜೀನಾಮೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ವೈದ್ಯರೊಂದಿಗೆ ಮತ್ತೆ ಸಂಘರ್ಷಕ್ಕೆ ಇಳಿಯುವುದು ಬೇಡ ಎಂಬ ಕಾರಣಕ್ಕೆ ವೈದ್ಯರ ಮೇಲಿನ ಲೋಕಾಯುಕ್ತ ತನಿಖೆಯನ್ನು ಶೈತ್ಯಾಗಾರಕ್ಕೆ ಸರಿಸಲು ಸರ್ಕಾರವೇ ಮುಂದಾಗಿದೆ. ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಸರ್ಕಾರದ ಸಂದೇಶವನ್ನು ಮೌಖಿಕವಾಗಿ ಲೋಕಾಯುಕ್ತ ಪೊಲೀಸರಿಗೆ ರವಾನಿಸಿದ್ದು ಪ್ರಕರಣ ತನಿಖೆ ಗತಿ ಬದಲಾಗಲಿದೆ ಎಂದು ಮೂಲಗಳು `ಪ್ರಜಾವಾಣಿ~ಗೆ ಖಚಿತ ಪಡಿಸಿವೆ.

`ಚಿಕ್ಕಬಳ್ಳಾಪುರ ಮಾತ್ರವಲ್ಲ ತುಮಕೂರು ಜಿಲ್ಲೆಯಲ್ಲೂ 101 ವೈದ್ಯರ ಗ್ರಾಮೀಣ ಭತ್ಯೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ವೈದ್ಯರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಸಿಲ್ಲ. ಕೋಲಾರ, ಬಾಗಲಕೋಟೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು.

ಎಲ್ಲರ ಮೇಲೂ ಕ್ರಮ ಅಸಾಧ್ಯ ಎಂಬುದು ಸರ್ಕಾರಕ್ಕೂ ಗೊತ್ತಾಗಿದೆ. ಹಾಗಾಗಿ ಕ್ರಮ ಕೈಗೊಳ್ಳುವುದರಿಂದ ದೂರ ಉಳಿಯಲು ಮುಂದಾಗಿದೆ~ ಎಂದು ಹೆಸರು ಹೇಳಲಿಚ್ಛಿಸದ ಜಿಲ್ಲಾ ಸರ್ಕಾರಿ ವೈದ್ಯರ ಸಂಘದ ಪದಾಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ಈ ಹಿಂದೆ ಸಂಬಳ ಹೆಚ್ಚಳಕ್ಕಾಗಿ ವೈದ್ಯರು ಧರಣಿ ನಡೆಸಿದ ವೇಳೆ ಸಂಬಳ ಹೆಚ್ಚಿಸಲು ಸರ್ಕಾರ ಒಪ್ಪಿತ್ತು. ಆದರೆ ಆಗ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್ಗೋಪಾಲ್ ಸಂಬಳ ಹೆಚ್ಚುವಂತೆಯೂ ಆಗಬೇಕು, ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯರು ಸಿಗಬೇಕೆಂಬ ಉದ್ದೇಶದಿಂದ ಕೇಂದ್ರ ಸ್ಥಾನದಲ್ಲಿರುವ ವೈದ್ಯರು ಮಾಸಿಕ ರೂ. 7 ಸಾವಿರ ವಿಶೇಷ ಭತ್ಯೆಯಾಗಿ ಪಡೆಯಬಹುದು ಎಂಬ ತಿದ್ದುಪಡಿಗೆ ಕಾರಣವಾಗಿದ್ದರು. ಇದು ಈಗ ವೈದ್ಯರನ್ನು ಸುತ್ತಿಕೊಂಡಿದೆ~ ಎಂದು ಗ್ರಾಮೀಣ ಭ್ಯತ್ಯೆ ಪಡೆದಿರುವ ವೈದ್ಯರೊಬ್ಬರು ಅಳಲು ತೋಡಿಕೊಂಡರು.

ವೈದ್ಯರೊಂದಿಗೆ ಸರ್ಕಾರ ಸಂಘರ್ಷಕ್ಕೆ ಇಳಿಯುವುದಿಲ್ಲ. ಗ್ರಾಮೀಣ ಭತ್ಯೆ ನಿಯಮಕ್ಕೆ ತಿದ್ದುಪಡಿ ತರುವ ಭರವಸೆ ನೀಡಲಾಗಿದೆ. ಅದರಂತೆ ಗ್ರಾಮೀಣ ವಾಸ್ತವ್ಯಕ್ಕೆ ಬದಲಿಗೆ `ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ವೈದ್ಯರಿಗೆ ಗ್ರಾಮೀಣ ಭತ್ಯೆ~ ಎಂದು ತಿದ್ದುಪಡಿ ತರುವ ಭರವಸೆ ವೈದ್ಯರಿಗೆ ಸಿಕ್ಕಿದೆ.

ಗ್ರಾಮೀಣ ವಾಸ್ತವ್ಯಕ್ಕೆ ತಿದ್ದುಪಡಿ ತಂದಲ್ಲಿ ಒಬ್ಬ ವೈದ್ಯ ಕೂಡ ಗ್ರಾಮದಲ್ಲಿ ಇರಲಾರ. ಹಳ್ಳಿಗಳಿಗೆ ಬೆಳಿಗ್ಗೆ10 ಗಂಟೆಗೆ ಮೊದಲ ಬಸ್ ಸಂಪರ್ಕ ಬಿಟ್ಟರೆ ಸಂಜೆ 4 ಗಂಟೆಗೆ ಕೊನೆ ಬಸ್ ಸಂಪರ್ಕ ಇರುತ್ತದೆ. ವೈದ್ಯರು ಕೇವಲ ಐದಾರು ಗಂಟೆ ಕಾಲ ಆಸ್ಪತ್ರೆಗಳಲ್ಲಿ ಸಿಗುತ್ತಾರೆ. ರೋಗಿಗಳನ್ನು ಒಳರೋಗಿಗಳಾಗಿ ದಾಖಲಿಸುವ ಪ್ರಮಾಣ ಇಳಿಮುಖವಾಗಲಿದೆ ಎಂಬ ಆತಂಕವನ್ನು ಕೆಲ ವೈದ್ಯರು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.