ಬೆಂಗಳೂರು: ‘ಬ್ಯಾಂಕ್ಗಳು ಗ್ರಾಹಕರ ಸೇವೆಯನ್ನು ಪ್ರಧಾನವಾಗಿಸಿಕೊಂಡು ಕಾರ್ಯನಿರ್ವಹಿಸಬೇಕು’ ಎಂದು ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಜನತಾ ಕೋ ಆಪರೇಟಿವ್ ಬ್ಯಾಂಕ್ ನಗರದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಬ್ಯಾಂಕ್ಗಳು ಗ್ರಾಹಕರ ಸಹಾಯವನ್ನು ಸದಾ ಸ್ಮರಿಸಬೇಕು. ಬ್ಯಾಂಕ್ನ ಸಿಬ್ಬಂದಿ ಬ್ಯಾಂಕ್ನ ಏಳಿಗೆ ಮತ್ತು ಗ್ರಾಹಕರ ಏಳಿಗೆಗೆ ಶ್ರಮಿಸಬೇಕು’ ಎಂದರು.

ಬ್ಯಾಂಕ್ನ ಅಧ್ಯಕ್ಷ ಸಿ.ಎಲ್.ಮರಿಗೌಡ ಮಾತನಾಡಿ, ‘ಈಗಾಗಲೇ ರಾಜ್ಯದ ಸುಮಾರು ೨೨೦ ಕ್ಕೂ ಹೆಚ್ಚು ಕೋ ಆಪರೇಟಿವ್ ಬ್ಯಾಂಕ್ಗಳ ಪಟ್ಟಿಯಲ್ಲಿ ಮೊದಲ ೬ ಸ್ಥಾನಗಳಲ್ಲಿ ಒಂದೆನಿಸಿಕೊಂಡಿರುವ ಬ್ಯಾಂಕಿನ ವಹಿವಾಟು ₨ ೫೦೦ ಕೋಟಿಗೂ ಹೆಚ್ಚಿದೆ’ ಎಂದರು.

‘ಸುವರ್ಣ ಸಂಭ್ರಮಾಚರಣೆಗೆ ಸಜ್ಜಾಗುತ್ತಿರುವ ದಿ ಜನತಾ ಕೋ ಆಪರೇಟಿವ್ ಬ್ಯಾಂಕ್ ಇನ್ನೂ ಹಲವಾರು ವಿಶೇಷ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.