ಅಹಮದಾಬಾದ್: ಇಡೀ ದೇಶದ ಕೋಟಿ ಕೋಟಿ ಜನರ ಎದೆಬಡಿತ ಹೆಚ್ಚಿಸಿ, ನಂತರ ಎಲ್ಲರ ಮನದಲ್ಲೂ ಸಂಭ್ರಮ ತುಂಬಿದ ದೋನಿ ಪಡೆ ಚಾಂಪಿಯನ್ ಆಸ್ಟ್ರೇಲಿಯವನ್ನು ‘ಶಹಭಾಸ್’ ಎನ್ನುವ ರೀತಿಯಲ್ಲಿ ಮಣಿಸಿ, ಹತ್ತನೇ ವಿಶ್ವ ಕಪ್ ಕ್ರಿಕೆಟ್ ಸೆಮಿಫೈನಲ್ಗೆ ಮುನ್ನಡೆಯಿತು.

ಮೊಟೆರಾದ ಸರ್ದಾರ ಪಟೇಲ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ಕ್ರಿಕೆಟ್ನ ಎಲ್ಲ ರೋಚಕ ಅಂಶಗಳೂ ಕಂಡುಬಂದವು. ಭಾರತ ಸೋಲುವ ಆತಂಕದಲ್ಲೂ ಇತ್ತು. ಆದರೆ ಯುವರಾಜ್ ಸಿಂಗ್ ಮತ್ತೊಮ್ಮೆ ಆಲ್ರೌಂಡ್ ಆಟ ಪ್ರದರ್ಶಿಸಿ ಭಾರತವನ್ನು ಕುಸಿತದಿಂದ ಮೇಲೆತ್ತಿದರು. ನಾಯಕ ಮಹೇಂದ್ರ ಸಿಂಗ್ ದೋನಿ ಔಟಾದಾಗ, ಆಸ್ಟ್ರೇಲಿಯ ಒತ್ತಡ ಹೇರಿ ಗೆಲುವನ್ನು ಕಿತ್ತುಕೊಳ್ಳಬಹುದೆಂಬ ಭೀತಿ ಎದುರಾಗಿತ್ತು. ಆದರೆ ಯುವರಾಜ ಮಹಾರಾಜನಂತೆ ಆಡಿದರು. ಆಸ್ಟ್ರೇಲಿಯದ ವೇಗದ ದಾಳಿ ದಿಕ್ಕೆಟ್ಟುಹೋಗುವಂತೆ ಮಾಡಿದರು. ಹತಾಶರಾಗಿದ್ದ ಪಾಂಟಿಂಗ್ ತಂಡದ ಆಟಗಾರರು ಹೋರಾಟ ಕೈಬಿಟ್ಟರು. ಇನ್ನೂ 14 ಎಸೆತಗಳು ಉಳಿದಿರುವಂತೆಯೇ ಐದು ವಿಕೆಟ್ಗಳಿಂದ ಗೆದ್ದ ಭಾರತ, ಮಾರ್ಚ್ 30ರಂದು ಮೊಹಾಲಿಯಲ್ಲಿ ನಡೆಯುವ ಸೆಮಿಫೈನಲ್ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸುವುದು.

ಭಾರತಕ್ಕೆ ಗೆಲ್ಲಲು 261 ರನ್ ಮಾಡುವ ಸವಾಲು ಸಣ್ಣದೇನೂ ಆಗಿರಲಿಲ್ಲ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯ, ನಾಯಕ ರಿಕಿ ಪಾಂಟಿಂಗ್ ಅವರ ಶತಕದ ನೆರವಿನಿಂದ 6 ವಿಕೆಟ್ಗೆ 260 ರನ್ ಮಾಡಿತು. ಆಸ್ಟ್ರೇಲಿಯದ ವೇಗದ ಬೌಲರುಗಳಾದ ಬ್ರೆಟ್ ಲೀ, ಶಾನ್ ಟೇಟ್, ಮಿಷೆಲ್ ಜಾನ್ಸನ್ ಮತ್ತು ಶೇನ್ ವಾಟ್ಸನ್ ಅವರಿಗೆ ಭಾರತದ ಹತ್ತು ವಿಕೆಟ್ಗಳನ್ನು ಉರುಳಿಸಲು ಈ ಮೊತ್ತ ಸಾಕೆಂಬ ಭಾವನೆ ಮೂಡಿತ್ತು.

ಅದಕ್ಕೆ ಸರಿಯಾಗಿ ವೀರೇಂದ್ರ ಸೆಹ್ವಾಗ್ ದೊಡ್ಡ ಹೊಡೆತಕ್ಕೆ ಕೈಹಾಕಿ ಸುಲಭ ಕ್ಯಾಚ್ ಕೊಟ್ಟರು. ಆದರೆ ಸಚಿನ್ ತೆಂಡೂಲ್ಕರ್ ಅರ್ಧಶತಕ ಹೊಡೆದರು. ಅವರು ತಮ್ಮ ನೂರನೇ ಶತಕ ಗಳಿಸದಿದ್ದರೂ ಅವರ ಆಟ ಭಾರತಕ್ಕೆ ಉಪಯುಕ್ತ ಅಡಿಪಾಯ ಹಾಕಿಕೊಟ್ಟಿತು.

ವಿರಾಟ್ ಕೊಹ್ಲಿ ಕೂಡ ತಪ್ಪು ಹೊಡೆತಕ್ಕೆ ವಿಕೆಟ್ ಒಪ್ಪಿಸಿದರು. ಗಂಭೀರ್ ಮೂರ್ಖತನದಿಂದ ರನ್ ಔಟ್ ಆದರು. ಹಿಂದಿನ ಎಸೆತವೊಂದರಲ್ಲಿ ಆದ ಗಲಿಬಿಲಿಯಲ್ಲಿ ಅವರು ರನ್ ಔಟ್ ಆಗುವುದರಿಂದ ಬಚಾವಾಗಿದ್ದರು. ಆದರೆ ಮರುಎಸೆತದಲ್ಲಿ, ಇಲ್ಲದ ರನ್ನಿಗಾಗಿ ಯೋಚನೆಯನ್ನೂ ಮಾಡದೆ ಓಡಿದ ಅವರು ವಾಪಸ್ಸು ಗೆರೆಯೊಳಗೆ ಬರಲಾಗಲಿಲ್ಲ. ಅದೇ ರೀತಿ ಕೆಲವು ಎಸೆತಗಳ ನಂತರ ಯುವರಾಜ್ ಕೂಡ ರನ್ಔಟ್ ಆಗುವ ಸಾಧ್ಯತೆ ಇತ್ತು. ಆದರೆ ಚೇತರಿಸಿಕೊಂಡ ಯುವರಾಜ್ ಮತ್ತೆ ತಪ್ಪು ಮಾಡಲಿಲ್ಲ. ಇದೇ ಎರಡನೇ ವಿಶ್ವ ಕಪ್ ಪಂದ್ಯ ಆಡುತ್ತಿರುವ ಸುರೇಶ್ ರೈನಾ ತಲೆ ಉಪಯೋಗಿಸಿ ಆಡಿದರು. ಒಂದೊಂದು ಬೌಂಡರಿ ಬಂದಂತೆ ಆಸ್ಟ್ರೇಲಿಯದ ಆಟಗಾರರು ಹತಾಶರಾದರು. 40ನೇ ಓವರ್ನಲ್ಲಿ ಬ್ರೆಟ್ ಲೀ 14 ರನ್ ಕೊಟ್ಟರು. ರೈನಾ ಅವರ ಒಂದು ಎಸೆತದಲ್ಲಿ ಭರ್ಜರಿ ಸಿಕ್ಸರ್ ಹೊಡೆದರು. ಪಂದ್ಯ ಆಸ್ಟ್ರೇಲಿಯದ ಕೈ ಜಾರಿಹೋಯಿತು.

ಭಾರತದ ಈ ಅಮೋಘ ಗೆಲುವಿನೊಂದಿಗೆ, ಸತತ ನಾಲ್ಕನೇ ಬಾರಿಗೆ (ಒಟ್ಟು ಐದು ಸಲ) ವಿಶ್ವ ಕಪ್ ಗೆಲ್ಲುವ ಆಸ್ಟ್ರೇಲಿಯದ ಕನಸು ಕ್ವಾರ್ಟರ್ಫೈನಲ್ ಹಂತದಲ್ಲೇ ಕಮರಿಹೋಯಿತು. ಸತತವಾಗಿ ಎರಡು ಸಲ ಕಪ್ ಎತ್ತಿಹಿಡಿದಿದ್ದ ರಿಕಿ ಪಾಂಟಿಂಗ್ ಅವರ ಹ್ಯಾಟ್ರಿಕ್ ಕನಸೂ ನುಚ್ಚುನೂರಾಯಿತು.

ಹಿಂದಿನ ಪಂದ್ಯಗಳಂತೆ ಭಾರತದ ಮಧ್ಯಮ ಕ್ರಮಾಂಕ ಗುರುವಾರ ಕೈಕೊಡಲಿಲ್ಲ. ಸಚಿನ್ ನಂತರ ಯುವರಾಜ್ ಹೋರಾಟ ಮುಂದುವರಿಸಿದರು. ಗೌತಮ್ ಗಂಭೀರ್ ಚೆನ್ನಾಗಿ ಆಡಿದರಾದರೂ ಅನಗತ್ಯವಾಗಿ ರನ್ಔಟ್ ಆದರು. ಸುರೇಶ್ ರೈನಾ ಗಲಿಬಿಲಿಗೊಳ್ಳಲಿಲ್ಲ. ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಂತೆ ಆಡಿದರು. ಆದರೆ ಇಡೀ ದೇಶದ ಆಶೋತ್ತರವನ್ನು ಈಡೇರಿಸಿದವರು ಯುವರಾಜ್ ಸಿಂಗ್. ಮಧ್ಯಾಹ್ನ ಎರಡು ವಿಕೆಟ್ಗಳೊಡನೆ ಆಸ್ಟ್ರೇಲಿಯಕ್ಕೆ ಕಡಿವಾಣ ಹಾಕಿದ್ದ ಅವರು, ತಾವು ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಹೊಡೆದು ಎದುರಾಳಿಗೆ ಎಚ್ಚರಿಕೆ ನೀಡಿದ್ದರು. ನಂತರ ಅವರ ಬ್ಯಾಟಿನಿಂದ ರನ್ನುಗಳು ಸುಲಲಿತವಾಗಿ ಹರಿದುಬಂದವು. ಬ್ರೆಟ್ ಲೀ ಬೌಲಿಂಗ್ನಲ್ಲಿ ಅವರು ಗೆಲುವಿನ ಬೌಂಡರಿ ಹೊಡೆಯುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿದ್ದ 50 ಸಾವಿರ ಜನ ಹುಚ್ಚೆದ್ದು ಕುಣಿದರು. ಯುವರಾಜ್ ಸರ್ದಾರನಾಗಿ ಮೆರೆದರು.

ಯುವರಾಜ್ ಹಾಗೂ ರೈನಾ ನಡುವೆ ಮುರಿಯದ ಆರನೇ ವಿಕೆಟ್ಗೆ 61 ಎಸೆತಗಳಲ್ಲಿ 74 ರನ್ನುಗಳು ಬಂದವು. ಯುವರಾಜ್ ನಾಲ್ಕನೇ ಬಾರಿಗೆ ಪಂದ್ಯದ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.

ರಿಕಿ ಪಾಂಟಿಂಗ್ ಮಧ್ಯಾಹ್ನ ಟಾಸ್ ಗೆದ್ದಾಗಲೇ ಅರ್ಧ ಹೋರಾಟ ಗೆದ್ದವರಂತೆ ಬೀಗಿದರು. ಅದು ಅವರ ಶತಕದ ಆಟದಲ್ಲಿ ಎದ್ದುಕಂಡಿತು. ದೋನಿ ನಿರೀಕ್ಷೆಯಂತೆ ಆಫ್ಸ್ಪಿನ್ನರ್ ಆರ್. ಅಶ್ವಿನ್ ಅವರೊಂದಿಗೆ ದಾಳಿ ಆರಂಭಿಸಿದರು. ಶೇನ್ ವಾಟ್ಸನ್ ಮತ್ತು ಬ್ರಾಡ್ ಹಡಿನ್ ಎಚ್ಚರಿಕೆಯಿಂದ ಆಡಿದರು. ಯಾವ ಗಡಿಬಿಡಿಯನ್ನೂ ತೋರದೇ ನಿಧಾನವಾಗಿ ಕೆಟ್ಟ ಎಸೆತಗಳನ್ನು ದಂಡಿಸುತ್ತ ಮುನ್ನಡೆದ ಇವರಿಬ್ಬರೂ ಮೊದಲ ವಿಕೆಟ್ಗೆ 40 ರನ್ ಸೇರಿಸಿ, ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡರು.

ಅಶ್ವಿನ್ ಬೌಲಿಂಗ್ನಲ್ಲಿ ಪುಲ್ ಮಾಡಲು ಹೋಗಿ ಗುರಿ ತಪ್ಪಿದ ವಾಟ್ಸನ್ ಬೌಲ್ಡ್ ಆದರು. ಆಗ ಬಂದ ಪಾಂಟಿಂಗ್ ಕೂಡ ನಿಧಾನವಾಗಿಯೇ ಆಟ ಆರಂಭಿಸಿದರು. ಈ ವಿಶ್ವ ಕಪ್ನಲ್ಲಿ ಹೆಚ್ಚು ರನ್ನುಗಳನ್ನು ಹೊಡೆಯದ ಪಾಂಟಿಂಗ್, ತಮ್ಮ ಅತ್ಯುತ್ತಮ ಆಟವನ್ನು ಭಾರತ ವಿರುದ್ಧವೇ ಕಾಯ್ದಿಟ್ಟಂತೆ ಆಡಿದರು. 2003 ರ ಫೈನಲ್ನಲ್ಲಿ ಭಾರತದ ಬೌಲರುಗಳನ್ನು ಮನಸಾರೆ ಚಚ್ಚಿದ್ದ ಅವರು ಅಂಥ ಆಟ ಪ್ರದರ್ಶಿಸಲಿಲ್ಲ. ಆದರೆ ತಂಡ ಉತ್ತಮ ಮೊತ್ತ ತಲುಪುವ ವರೆಗೂ ಅವರು ಔಟಾಗಲಿಲ್ಲ. ಅಶ್ವಿನ್ ಬೌಲಿಂಗ್ನಲ್ಲಿ ರಿವರ್ಸ್ ಸ್ವೀಪ್ ಮಾಡಿದ ಅವರು ಷಾರ್ಟ್ ಫೈನ್ಲೆಗ್ನಲ್ಲಿದ್ದ ಜಹೀರ್ ಅವರ ಕೈಗೆ ನೇರ ಕ್ಯಾಚ್ ಕೊಟ್ಟರು.

ಐದನೇ ವಿಶ್ವ ಕಪ್ ಆಡುತ್ತಿರುವ ಪಾಂಟಿಂಗ್ ಅವರ ಐದನೇ ಶತಕ ಇದು. ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 30ನೆಯದು. ಯುವರಾಜ್ ಸಿಂಗ್ ಬೌಲಿಂಗ್ನಲ್ಲಿ ಮುನ್ನುಗ್ಗಿ ಕವರ್ಸ್ ಮೇಲೆ ಎತ್ತಿದ್ದ ಸಿಕ್ಸರ್ ಅವರ ಅತ್ಯುತ್ತಮ ಹೊಡೆತವಾಗಿತ್ತು. ಬ್ರಾಡ್ ಹಡಿನ್ ಜೊತೆ ಎರಡನೇ ವಿಕೆಟ್ಗೆ 77 ಎಸೆತಗಳಲ್ಲಿ 70 ರನ್ ಬರಲು ನೆರವಾಗಿದ್ದ ಅವರು, ಡೇವಿಡ್ ಹಸ್ಸಿ ಜೊತೆ ಆರನೇ ವಿಕೆಟ್ಗೆ 43 ಎಸೆತಗಳಲ್ಲಿ 55 ರನ್ ಸೇರಿಸಿದರು. 44ನೇ ಓವರ್ನಿಂದ ಬ್ಯಾಟಿಂಗ್ ಪವರ್ಪ್ಲೇ ತೆಗೆದುಕೊಂಡ ಅವರು ಐದು ಓವರುಗಳಲ್ಲಿ 44 ಬರುವಂತೆ ಆಡಿದರು. ಕೊನೆಯ ಹತ್ತು ಓವರುಗಳಲ್ಲಿ ಆಸ್ಟ್ರೇಲಿಯ 75 ರನ್ ಸೇರಿಸಿತು.

ನಿರೀಕ್ಷೆಯಂತೆ ಭಾರತದ ಸ್ಪಿನ್ನರುಗಳು ಆಸ್ಟ್ರೇಲಿಯದ ಬ್ಯಾಟ್ಸಮನ್ನರು ಹೆಚ್ಚು ರನ್ ಹೊಡೆಯದಂತೆ ನಿಯಂತ್ರಿಸಿದರು. ಅಶ್ವಿನ್ ಮತ್ತು ಯುವರಾಜ್ ಸಿಂಗ್ ತಲಾ ಎರಡು ವಿಕೆಟ್ ಪಡೆದರೆ, ಹರಭಜನ್ ಸಿಂಗ್ಗೆ ಮಾತ್ರ ವಿಕೆಟ್ ಸಿಗಲಿಲ್ಲ. ಚುರುಕಾಗಿ ರನ್ ಗಳಿಸುವ ಮೈಕೆಲ್ ಹಸ್ಸಿ ಮತ್ತು ಕ್ಯಾಮರೂನ್ ವೈಟ್ ತಳವೂರಲು ಕೊಡದ ಜಹೀರ್ ಖಾನ್, ಆಸ್ಟ್ರೇಲಿಯದ ಮೊತ್ತ 300 ರ ಸಮೀಪ ಹೋಗದಂತೆ ನೋಡಿಕೊಂಡರು. ಮುನಾಫ್ ಪಟೇಲ್ ಒಬ್ಬರೇ ದುಬಾರಿಯಾಗಿದ್ದು. ಫೀಲ್ಡಿಂಗ್ನಲ್ಲಿ ಸುರೇಶ್ ರೈನಾ ಮತ್ತು ವಿರಾಟ್ ಕೊಹ್ಲಿ ಮಿಂಚಿದರು.

ಸ್ಕೋರು ವಿವರ

ಆಸ್ಟ್ರೇಲಿಯ: 50 ಓವರುಗಳಲ್ಲಿ 6 ವಿಕೆಟ್ 260

ಶೇನ್ ವಾಟ್ಸನ್ ಬಿ ಅಶ್ವಿನ್ 25
(38 ಎಸೆತ, 5 ಬೌಂಡರಿ)
ಬ್ರಾಡ್ ಹಡಿನ್ ಸಿ ರೈನಾ ಬಿ ಯುವರಾಜ್ ಸಿಂಗ್ 53
(62 ಎಸೆತ, 6 ಬೌಂಡರಿ, ಒಂದು ಸಿಕ್ಸರ್)
ರಿಕಿ ಪಾಂಟಿಂಗ್ ಸಿ ಜಹೀರ್ ಬಿ ಅಶ್ವಿನ್ 104
(118 ಎಸೆತ, 7 ಬೌಂಡರಿ, ಒಂದು ಸಿಕ್ಸರ್)
ಮೈಕೆಲ್ ಕ್ಲಾರ್ಕ್ ಸಿ ಜಹೀರ್ ಬಿ ಯುವರಾಜ್ ಸಿಂಗ್ 08
(19 ಎಸೆತ)
ಮೈಕೆಲ್ ಹಸ್ಸಿ ಬಿ ಜಹೀರ್ ಖಾನ್ 03
(9 ಎಸೆತ)
ಕ್ಯಾಮರೂನ್ ವೈಟ್ ಸಿ ಮತ್ತು ಬಿ ಜಹೀರ್ ಖಾನ್ 12
(22 ಎಸೆತ)
ಡೇವಿಡ್ ಹಸ್ಸಿ ಔಟಾಗದೆ 38
(26 ಎಸೆತ, 3 ಬೌಂಡರಿ, ಒಂದು ಸಿಕ್ಸರ್)
ಮಿಷೆಲ್ ಜಾನ್ಸನ್ ಔಟಾಗದೆ 06
(6 ಎಸೆತ)

ಇತರೆ ರನ್: (ಲೆಗ್ಬೈ-2, ವೈಡ್ 9) 11

ವಿಕೆಟ್ ಪತನ: 1-40 (ವಾಟ್ಸನ್), 2-110 (ಹಡಿನ್), 3-140 (ಕ್ಲಾರ್ಕ್), 4-150 (ಮೈಕೆಲ್ ಹಸ್ಸಿ), 5-190 (ವೈಟ್), 6-245 (ಪಾಂಟಿಂಗ್)

ಬೌಲಿಂಗ್: ಆರ್. ಅಶ್ವಿನ್ 10-0-52-2 (ವೈಡ್ 1),

ಜಹೀರ್ ಖಾನ್ 10-0-53-2, ಹರಭಜನ್ ಸಿಂಗ್ 10-0-50-0 (ವೈಡ್-8), ಮುನಾಫ್ ಪಟೇಲ್ 7-0-44-0, ಯುವರಾಜ್ ಸಿಂಗ್ 10-0-44-2, ಸಚಿನ್ ತೆಂಡೂಲ್ಕರ್ 2-0-9-0, ವಿರಾಟ್ ಕೊಹ್ಲಿ 1-0-6-0

ಪವರ್ಪ್ಲೇ: 1 ರಿಂದ 10ನೇ ಓವರ್: 40 ರನ್, ಒಂದು ವಿಕೆಟ್

ಬೌಲಿಂಗ್ ಪವರ್ಪ್ಲೇ: 11 ರಿಂದ 15ನೇ ಓವರ್: ವಿಕೆಟ್ ನಷ್ಟವಿಲ್ಲದೇ 30 ರನ್

ಬ್ಯಾಟಿಂಗ್ ಪವರ್ಪ್ಲೇ: 44 ರಿಂದ 48 ನೇ ಓವರ್: ವಿಕೆಟ್ ನಷ್ಟವಿಲ್ಲದೇ 44 ರನ್.

ಭಾರತ: 47.4 ಓವರುಗಳಲ್ಲಿ 5 ವಿಕೆಟ್ಗೆ 261
ವೀರೇಂದ್ರ ಸೆಹ್ವಾಗ್ ಸಿ ಮೈಕೆಲ್ ಹಸ್ಸಿ ಬಿ ವಾಟ್ಸನ್ 15
(22 ಎಸೆತ, 2 ಬೌಂಡರಿ)
ಸಚಿನ್ ತೆಂಡೂಲ್ಕರ್ ಸಿ ಹಡಿನ್ ಬಿ ಟೇಟ್ 53
(68 ಎಸೆತ, 7 ಬೌಂಡರಿ)
ಗೌತಮ್ ಗಂಭೀರ್ ರನ್ಔಟ್ 50
(64 ಎಸೆತ, 2 ಬೌಂಡರಿ)
ವಿರಾಟ್ ಕೊಹ್ಲಿ ಸಿ ಕ್ಲಾರ್ಕ್ ಬಿ ಡೇವಿಡ್ ಹಸ್ಸಿ 24
(33 ಎಸೆತ, ಒಂದು ಬೌಂಡರಿ)
ಯುವರಾಜ್ ಸಿಂಗ್ ಔಟಾಗದೆ 57
(65 ಎಸೆತ, 8 ಬೌಂಡರಿ)
ಮಹೇಂದ್ರಸಿಂಗ್ ದೋನಿ ಸಿ ಕ್ಲಾರ್ಕ್ ಬಿ ಬ್ರೆಟ್ ಲೀ 07
(8 ಎಸೆತ, ಒಂದು ಬೌಂಡರಿ)
ಸುರೇಶ್ ರೈನಾ ಔಟಾಗದೆ 34
(28 ಎಸೆತ, 2 ಬೌಂಡರಿ, ಒಂದು ಸಿಕ್ಸರ್)
ಇತರೆ ರನ್ (ಲೆಗ್ಬೈ 3, ನೋಬಾಲ್ 2, ವೈಡ್ 16) 21
ವಿಕೆಟ್ ಪತನ: 1-44 (ಸೆಹ್ವಾಗ್), 2-94 (ತೆಂಡೂಲ್ಕರ್), 3-143 (ಕೊಹ್ಲಿ), 4-168 (ಗಂಭೀರ್), 5-187 (ದೋನಿ),

ಬೌಲಿಂಗ್: ಬ್ರೆಟ್ ಲೀ 8.4-1-45-1 (ವೈಡ್-3)
ಶಾನ್ ಟೇಟ್ 7-0-52-1 (ನೋಬಾಲ್ 2, ವೈಡ್ 6)
ಮಿಷೆಲ್ ಜಾನ್ಸನ್ 8-0-41-0, ಶೇನ್ ವಾಟ್ಸನ್ 7-0-37-1, ಜೇಸನ್ ಕ್ರೇಜಾ 9-0-45-0, ಮೈಕೆಲ್ ಕ್ಲಾರ್ಕ್ 3-0-19-0, ಡೇವಿಡ್ ಹಸ್ಸಿ 5-0-19-1
ಪವರ್ಪ್ಲೇ: 1 ರಿಂದ 10ನೇ ಓವರ್: 50 ರನ್ನುಗಳು, ಒಂದು ವಿಕೆಟ್

ಬೌಲಿಂಗ್ ಪವರ್ಪ್ಲೇ: 11 ರಿಂದ 15: ವಿಕೆಟ್ ನಷ್ಟವಿಲ್ಲದೇ 26

ಬ್ಯಾಟಿಂಗ್ ಪವರ್ಪ್ಲೇ: 46 ರಿಂದ 47.4 ಓವರ್: ವಿಕೆಟ್ ನಷ್ಟವಿಲ್ಲೇ 22 ರನ್

ಪಂದ್ಯದ ಆಟಗಾರ: ಯುವರಾಜ್ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.