ಶನಿವಾರ, ಏಪ್ರಿಲ್ 17, 2021
30 °C

ಚಿಂತನಶೀಲ ನಾಯಕರಿಂದ ಅಭಿವೃದ್ಧಿ: ಉಮಾಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾವಳ್ಳಿ (ತಾ.ನವಲಗುಂದ): `ಜನರ ಸಮಸ್ಯೆಗಳನ್ನು ಅರಿತು ಅಭಿವೃದ್ಧಿಯ ಬಗ್ಗೆ ಚಿಂತಿಸುವ ಹಾಗೂ ಹೊಸ ಯೋಜನೆಗಳನ್ನು ರೂಪಿಸುವ ಚಿಂತನಶೀಲ ರಾಜಕಾರಣಿಗಳ ಅಗತ್ಯವಿದೆ~ ಎಂದು ನಟಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ಉಮಾಶ್ರೀ ಅಭಿಪ್ರಾಯಪಟ್ಟರು.ಗ್ರಾಮದಲ್ಲಿ ಕೆ.ಎಚ್. ಪಾಟೀಲ ಪ್ರತಿಷ್ಠಾನ, ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಗುರುವಾರ ನಡೆದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.`ಜನರನ್ನು ಮರೆತರೆ ಅದು ಘೋರವಾಗುತ್ತದೆ ಹಾಗೂ ಅಭಿವೃದ್ಧಿ ಕುಂಠಿತವಾಗುತ್ತದೆ. ಖಜಾನೆ ತುಂಬಿದರೆ  ಅಭಿವೃದ್ಧಿ ಸಾಧ್ಯ ಎಂದ ಅವರು, ಇಂದಿನ ಕಲುಷಿತ ವಾತಾವರಣದಲ್ಲಿ ಸಜ್ಜನರು, ಪ್ರಾಮಾಣಿಕರನ್ನು ಉಳಿಸಿಕೊಳ್ಳುವ ಜವಾಬ್ದಾರಿ ಒಳ್ಳೆಯವರ ಮೇಲಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿಯ ಮೂರುಸಾವಿರಮಠದ ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಬಡವರಿಗೆ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು ನೀಡುವ ಕಾರ್ಯ ಶ್ಲಾಘನೀಯ ಎಂದರು

ಘಟಕ ಉದ್ಘಾಟಿಸಿದ ಜನಾಂದೋಲನದ ರೂವಾರಿ ಎಚ್.ಕೆ.ಪಾಟೀಲ ಅವರು ಮಾತನಾಡಿ, ಗ್ರಾಮೀಣ ಜನರ ಆರೋಗ್ಯ ಸುಧಾರಿಸಿ ಜೀವನ ಮಟ್ಟ ಎತ್ತರಕ್ಕೇರಿಸುವುದೇ ಜನಾಂದೋಲನದ ಉದ್ದೇಶ ಎಂದರು.ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಸಿ.ಎಸ್. ಶಿವಳ್ಳಿ, ಜಾತ್ಯತೀತ ಜನತಾದಳದ ಧುರೀಣ ಎನ್.ಎಚ್. ಕೋನರಡ್ಡಿ, ವೀರಣ್ಣ ನೀರಲಗಿ, ಎಸ್.ಸಿ.ಹಿರೇಮಠ, ಎಫ್.ಎಚ್ ಜಕ್ಕಪ್ಪನವರ, ಎನ್.ಎಚ್.ಕೋನರಡ್ಡಿ ಮಾತನಾಡಿದರು.ಮಾಜಿ ಶಾಸಕ ಡಿ.ಆರ್.ಪಾಟೀಲ, ಎ.ಆರ್.ಕಿರೇಸೂರ, ಕಾಂತ ಮಾಸ್ತಿ, ಎಸ್.ಎನ್.ಚಾಕಲಬ್ಬಿ, ಎಸ್.ಎಚ್ ಮಾಸ್ತಿ, ಜಿ.ಪಂ.ಮಾಜಿ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಸುಧಾ ಲಿಂಗರಡ್ಡಿ, ಎಚ್.ವಿ. ಮಾಡೊಳ್ಳಿ, ವಿ.ಡಿ.ಅಂದಾನಿಗೌಡ್ರ, ಎಸ್.ಸಿ.ರೇಣುಕಮಠ, ಎಪಿಎಂಸಿ ಸದಸ್ಯರಾದ ಶಿವಾನಂದ ಕರಿಗಾರ, ಪ್ರಕಾಶ ಅಂಗಡಿ, ಬಿ.ಬಿ. ಪಾಟೀಲ, ಮೋಹನ ಕುರಟ್ಟಿ, ಸಿದ್ಧನಗೌಡ ಪಾಟೀಲ, ವಿಜಯ ಕುಂದನಹಳ್ಳಿ, ಭೀಮಣ್ಣ ಬಡಿಗೇರ ಪಾಲ್ಗೊಂಡಿದ್ದರು. ಡಿ.ಎಂ.ಶಲವಡಿ ಸ್ವಾಗತಿಸಿ, ಚಂದ್ರನ್ನವರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.