ಚಿಕ್ಕಬಳ್ಳಾಪುರ: ಸಿಡಿಮದ್ದುಗಳ ಸ್ಫೋಟಕ್ಕೆ ಮಕ್ಕಳು ನಡುಗುತ್ತಾರೆ. ಸುಭದ್ರ ಗೋಡೆಗಳುಳ್ಳ ಮನೆಗಳು ಬಿರುಕು ಬಿಟ್ಟಿವೆ. ಅಪಾಯಕಾರಿ ದೂಳು ಮಣ್ಣಿನಿಂದ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ನೆಮ್ಮದಿಯನ್ನೇ ಕಳೆದುಕೊಂಡಿರುವ ಗ್ರಾಮಸ್ಥರು ಅನಾರೋಗ್ಯಕ್ಕೀಡಾಗಿದ್ದಾರೆ.

ಭಾರೀ ವಾಹನಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟಿವೆ. ಇದ್ಯಾವುದೋ ಯುದ್ಧಭೂಮಿ ಅಥವಾ ಊರು ಹೊರವಲಯದ ಚಿತ್ರಣವಾಗಿದ್ದರೆ, ಅಚ್ಚರಿ ಪಡಬೇಕಿರಲಿಲ್ಲ. ಆದರೆ ಇದು ಅಕ್ಷರಶಃ ಜನವಸತಿ ಗ್ರಾಮಗಳ ದಯನೀಯ ಸ್ಥಿತಿ.

ಗ್ರಾಮಸ್ಥರು ಹೀಗೆ ಆತಂಕದಿಂದ ಜೀವನ ನಡೆಸುತ್ತಿರುವುದನ್ನು ಕಣ್ಣಾರೆ ನೋಡಬೇಕಿದ್ದರೆ, ಚಿಕ್ಕಳ್ಳಾಪುರ ತಾಲ್ಲೂಕು ಕಣಿವೆನಾರಾಯಣಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಭೇಟಿ ನೀಡಬೇಕು. ಸುಮಾರು 30 ಗ್ರಾಮಗಳ ಸುತ್ತಮುತ್ತ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆದಿದ್ದು, ಗ್ರಾಮಸ್ಥರು ಪ್ರತಿಯೊಂದು ಕ್ಷಣವನ್ನು ಆತಂಕ ಮತ್ತು ಭಯದಲ್ಲೇ ಕಳೆಯುತ್ತಿದ್ದಾರೆ. ಬೆಟ್ಟ ಗುಡ್ಡಗಳು ಸಿಡಿಮದ್ದುಗಳಿಂದ ಕರಗಿ ಬೋಳಾಗುತ್ತಿದ್ದರೂ ಕಲ್ಲು ಗಣಿಗಾರಿಕೆ ಮಾತ್ರ ನಿರಾತಂಕವಾಗಿ ಮುಂದುವರಿದಿದೆ.

ಕೂಲಿಕೆಲಸ ಮತ್ತು ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ಇಲ್ಲಿನ ಗ್ರಾಮಸ್ಥರು ಈಗ ಕೈಚೆಲ್ಲಿ ಕುಳಿತಿದ್ದಾರೆ. ವಿಷಕಾರಿ ದೂಳುಮಣ್ಣಿನಿಂದ ಜಾನುವಾರುಗಳು ಸಾವನ್ನಪ್ಪುತ್ತಿದ್ದರೆ, ಬಿರುಕು ಬಿಟ್ಟ ಮನೆಗಳಿಂದ ಇನ್ನೆಷ್ಟು ದಿನ ರಕ್ಷಣೆ? ಎಂಬ ಆತಂಕದಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ.

ಫಲವತ್ತತೆಯಿಂದ ಕೂಡಿದ್ದ ಜಮೀನು ಈಗ ತನ್ನ ಸತ್ವವನ್ನೇ ಕಳೆದುಕೊಂಡಿದೆ. `ಕೃಷಿಯೂ ಇಲ್ಲದೇ, ಕೂಲಿಯೂ ಸಿಗದೇ ನಾವು ಇಲ್ಲಿ ಜೀವನ ಮಾಡುವುದಾದರೂ ಹೇಗೆ~ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ. `ಕಲ್ಲುಗಣಿಗಾರಿಕೆಯಿಂದ ಕಣಿವೆನಾರಾಯಣಪುರ, ಭದ್ರೇನಹಳ್ಳಿ, ನಶಕುಂಟೆಹಳ್ಳಿ, ಗೋಚೇನಹಳ್ಳಿ, ಸೊನ್ನಾಪುರ, ಚಿಕ್ಕರಾಯಪ್ಪನಹಳ್ಳಿ ಸೇರಿದಂತೆ ಸುಮಾರು 30 ಗ್ರಾಮಗಳ ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಇಡೀ ಜೀವನಶೈಲಿಯೇ ಬದಲಾಗಿದೆ. ಸಿಡಿಮದ್ದುಗಳ ಸ್ಫೋಟಗೊಂಡ ಕೂಡಲೇ ಕಣ್ಣುಗಳು ಗೋಡೆಯತ್ತ ಹೊರಳುತ್ತದೆ. ಎಲ್ಲಿ ಬಿರುಕು ಬಿಟ್ಟಿದೆ? ಮನೆ ಯಾವಾಗ ಕುಸಿಯುತ್ತೆಂದು ಆತಂಕವಾಗುತ್ತದೆ. ಮಕ್ಕಳಂತೂ ಭೀತಿಯಿಂದ ತತ್ತರಿಸುತ್ತಿದ್ದಾರೆ~ ಎಂದು ನಶಕುಂಟೆಹಳ್ಳಿಯ ಕದಿರೆಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

`ಇಲ್ಲಿ ಸುಮಾರು 15 ಕಡೆ ಗಣಿಗಾರಿಕೆ ನಡೆಯುತ್ತಿದೆ. ಒಂದೊಂದು ಗಣಿಗಾರಿಕೆ ಸ್ಥಳದಿಂದ ಪ್ರತಿ ದಿನ 50ಕ್ಕೂ ಹೆಚ್ಚು ಲಾರಿಗಳು ಸಂಚರಿಸುತ್ತವೆ. ಹಗಲುರಾತ್ರಿಯೆನ್ನದೆ ನೂರಾರು ಲಾರಿಗಳು ಸಂಚರಿಸುವುದರಿಂದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಕೆಲವೇ ಟನ್ಗಳಷ್ಟು ಲೋಡ್ ಸಾಗಿಸಬೇಕು ಎಂಬ ನಿಯಮವಿದ್ದರೂ ಕಾನೂನು ಉಲ್ಲಂಘಿಸಿ, ಭಾರಿ ಪ್ರಮಾಣದಲ್ಲಿ ಕಲ್ಲು ಮತ್ತು ಕಲ್ಲಿನ ಪುಡಿಯನ್ನು ಸಾಗಿಸಲಾಗುತ್ತಿದೆ.

ಲಾರಿಗಳು ಸಂಚರಿಸಿದಾಗಲೆಲ್ಲ, ಇಡೀ ಆವರಣವೂ ದೂಳಿನಿಂದ ಆವರಿಸಿಕೊಳ್ಳುತ್ತದೆ~ ಎಂದು ಅವರು ತಿಳಿಸಿದರು.
`ನಮ್ಮ ಮನೆಯು ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರದ ಗಡಿಭಾಗದಲ್ಲಿದೆ. ಸಿಡಿಮದ್ದುಗಳ ಸ್ಫೋಟ ಮತ್ತು ಗಣಿಗಾರಿಕೆಯಿಂದ ನಮ್ಮ ಮನೆ ಗೋಡೆ ಬಿರುಕುಬಿಟ್ಟಿದೆಯೆಂದರೆ, ನಿಮ್ಮ ತಾಲ್ಲೂಕಿಗೂ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿಗೂ ಸಂಬಂಧವಿಲ್ಲ ಎನ್ನುತ್ತಾರೆ.

ನಾವು ಚಿಕ್ಕಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡುತ್ತಿದ್ದೇವೆಯೇ ಹೊರತು ನಿಮ್ಮ ತಾಲ್ಲೂಕಿನಲ್ಲಿ ಅಲ್ಲ. ನೀವು ಯಾರ ಮುಂದೆಯಾದರೂ ನಿಮ್ಮ ಸಮಸ್ಯೆ ತೋಡಿಕೊಳ್ಳಿ ಎಂದು ಮಾರುತ್ತರ ಕೊಡುತ್ತಾರೆ~ ಎಂದು ಸಾಧುಮಠ ಗ್ರಾಮದ ಆಂಜನಪ್ಪ ತಿಳಿಸಿದರು.

`ಕಲ್ಲು ಗಣಿಗಾರಿಕೆ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿ ಹಲವಾರು ಬಾರಿ ಪ್ರತಿಭಟನೆ ಮಾಡಿದ್ದೇವೆ. ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿಪತ್ರಗಳನ್ನೂ ಸಲ್ಲಿಸಿದ್ದೇವೆ. ಆದರೆ ವರ್ಷಗಳೇ ಕಳೆದರೂ ನಮ್ಮ ಮನವಿಗೆ ಸ್ಪಂದನೆ ಸಿಕ್ಕಿಲ್ಲ.

ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ, ನಮ್ಮ ಗ್ರಾಮಗಳಿಗೆ ಇದುವರೆಗೆ ಭೇಟಿ ನೀಡಿಲ್ಲ. ನಮ್ಮ ಸಂಕಷ್ಟಗಳನ್ನು ಆಲಿಸಿಲ್ಲ. ಪ್ರತಿಭಟನೆ ನಡೆಸಿದರೆ, ಗಣಿಗಾರಿಕೆ ಮಾಡುವವರು ನಮ್ಮನ್ನೇ ಬೆದರಿಸುತ್ತಾರೆ. ನಾವು ಆತಂಕದಲ್ಲೇ ಜೀವಿಸುತ್ತಿದ್ದೇವೆ~ ಎಂದು ಗ್ರಾಮಸ್ಥ ಸುರೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.