ಭಾನುವಾರ, ಜನವರಿ 26, 2020
24 °C

ಚಿದಂಬರಂ ವಿರುದ್ಧ ದಾಖಲೆ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಕೋರಿ ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಮನವಿಯನ್ನು ಇದೇ 21ರಂದು ನಡೆಯುವ ವಾದ ಮಂಡನೆ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಲು ದೆಹಲಿ ಕೋರ್ಟ್ ಶನಿವಾರ ನಿರ್ಧರಿಸಿದೆ.ಚಿದಂಬರಂ ಅವರ ವಿರುದ್ಧ ತಾವು ಸಲ್ಲಿಸಿದ ಖಾಸಗಿ ದೂರಿಗೆ ಸಮರ್ಥನೆಯಾಗಿ ಸ್ವಾಮಿ, ವಿವಿಧ ಪ್ರಮಾಣೀಕೃತ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಅವರು, ಸ್ವಾಮಿ ಅವರ ಮನವಿಯನ್ನು 21ರಂದು ನಡೆಯಲಿರುವ ವಾದ ಮಂಡನೆಗೆ ಹೆಸರಿಸಿದರು.

ಪ್ರತಿಕ್ರಿಯಿಸಿ (+)