ಬುಧವಾರ, ಜೂನ್ 16, 2021
27 °C

ಚುನಾವಣೆಗೆ ಸೂಕ್ತ ಬಂದೋಬಸ್ತ್: ಬಿದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯನ್ನು ಅತ್ಯಂತ ಶಾಂತಿಯುತ ಮತ್ತು ನ್ಯಾಯಸಮ್ಮತವಾಗಿ ನಡೆಸಲು 1200 ಸೈನಿಕರು ಸೇರಿದಂತೆ ಒಟ್ಟು 6 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ತಿಳಿಸಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಬಂದೋಬಸ್ತ್‌ಗೆ ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ 416 ಪೊಲೀಸ್ ಅಧಿಕಾರಿಗಳು, 2843 ಪೊಲೀಸ್ ಸಿಬ್ಬಂದಿ, ರಾಜ್ಯ ಶಸಸ್ತ್ರ ಮೀಸಲು ಪಡೆ 24 ತುಕಡಿ, ಜಿಲ್ಲಾ ಶಸಸ್ತ್ರ ಮೀಸಲು ಪಡೆ 24  ತುಕಡಿಗಳು, ಬಿಎಸ್‌ಎಫ್ 6 ತುಕಡಿ ಮತ್ತು ಕೇಂದ್ರೀ ಯ ಅರೆಸೈನಿಕ ಪಡೆಯ 4 ತುಕಡಿ ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿ ದರು.ಎರಡೂ ಜಿಲ್ಲೆಗಳ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಚಿಕ್ಕಮಗ ಳೂರು ಜಿಲ್ಲೆಯಲ್ಲಿ ಎಸ್‌ಪಿ ಶಿವ ಕುಮಾರ್ ಮತ್ತು ಉಡುಪಿ ಯಲ್ಲಿ ಎಸ್.ಪಿ. ಬೋರಲಿಂಗಯ್ಯ ಬಂದೋಬಸ್ತ್ ನೇತೃತ್ವ ವಹಿಸಲಿದ್ದಾರೆ ಎಂದು ವಿವರಿಸಿದರು. ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್‌ಪೀಡಿತ ಪ್ರದೇಶಗಳಾದ ಶೃಂಗೇರಿ ಮತ್ತು ಮೂಡಿಗೆರೆಯಲ್ಲಿ ಒಟ್ಟು 77 ಮತಗಟ್ಟೆಗಳನ್ನು ನಕ್ಸಲ್‌ಪೀಡಿತವೆಂದು ಗುರತಿಸಲಾಗಿದೆ.ನಕ್ಸಲ್‌ಪೀಡಿತ ಮತಗಟ್ಟೆಗಳಿಗೆ ಶಸ್ತ್ರಸಜ್ಜಿತ ಪೊಲೀಸ ರನ್ನು ನಿಯೋಜಿಸಲಾಗುವುದು. ವಿಶೇಷ ವಾಗಿ ನಕ್ಸಲ್‌ಪೀಡಿತ ಮತಗಟ್ಟೆಗಳಲ್ಲಿ ಪಿಎಸ್‌ಐ, ಎಎಸ್‌ಐ ಹಾಗೂ ಮೂವರು ಕಾನ್ಸ್‌ಟೆಬಲ್‌ಗಳಿರುವ ಸೆಕ್ಟರ್ ಮೊಬೈಲ್ ತಂಡಗಳು ಕರ್ತವ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.ನಕ್ಸಲರನ್ನು ಹತ್ತಿಕ್ಕುವ ಕಾರ್ಯಾ ಚರಣೆ ಹಿನ್ನಡೆಗೆ ಗುಪ್ತದಳ ವಿಫಲವಾಗಿ ರುವುದು ನಿಜ. ಬೆಳ್ತಂಗಡಿ ಬಳಿ ಕೃಷ್ಣಗಿರಿ ಯಲ್ಲಿ ಇತ್ತೀಚೆಗೆ ನಡೆದ ನಕ್ಸಲ್ ವಿರುದ್ಧದ ಕಾರ್ಯಾಚರಣೆ ಸ್ಪಲ್ಪ ಅಡೆತಡೆ ಯಾಗಿವೆ. ಇಲ್ಲದಿದ್ದರೆ ಫಲಿತಾಂಶ ನೀಡು ತ್ತಿದ್ದೆವು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಮ್ಮ ಸಿಬ್ಬಂದಿ ಕಾರ್ಯಾ ಚರಣೆ ತೀವ್ರಗೊಳಿಸಿದ್ದಾರೆ ಎಂದು ಹೇಳಿದರು.ಈಗಿನ ಮಾಹಿತಿ ಪ್ರಕಾರ ರಾಜ್ಯದಲ್ಲಿ 23ರಿಂದ 25 ಮಂದಿ ನಕ್ಸಲರ ತಂಡ ಸಕ್ರಿಯವಾಗಿದೆ. ಇಷ್ಟು ಮಂದಿಯೂ ಕೃಷ್ಣಗಿರಿ ಅರಣ್ಯದಲ್ಲಿ ಎಎನ್‌ಎಫ್ ಸಿಬ್ಬಂದಿಗೆ ಎದುರಾಗಿರುವುದು ನಿಜ. ಅಧಿಕಾರ ವಹಿಸಿಕೊಂಡ ನಂತರ ನಕ್ಸ ಲರಿಗೆ ಶರಣಾಗುವಂತೆ ಕರೆ ನೀಡಿದ್ದೆ. ಆದರೆ, ಅವರು ನಮ್ಮ ಕರೆಗೆ ಸ್ಪಂದಿಸಿಲ್ಲ. ನಮ್ಮ ಮೇಲೆ ವಿಶ್ವಾಸವಿಡಿ, ಸದ್ಯದಲ್ಲೇ ನಕ್ಸಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ಫಲಿತಾಂಶ ನೀಡುತ್ತೇವೆ ಎಂದು ಪ್ರತಿಕ್ರಿಯಿಸಿದರು.ಈಗಾಗಲೇ ನಕ್ಸಲ್ ಶರಣಾಗತಿ ಪ್ಯಾಕೇಜ್‌ನಲ್ಲಿ ಶರಣಾಗಿರುವವರ ವಿರುದ್ಧ ಪ್ರಕರಣಗಳನ್ನು ರದ್ದುಪಡಿಸದಿರುವ ಬಗ್ಗೆ ಗಮನ ಸೆಳೆದಾಗ, ಒಬ್ಬ ವ್ಯಕ್ತಿ ವಿರುದ್ಧದ ಪ್ರಕರಣಗಳನ್ನು ರದ್ದು ಪಡಿಸುವಾಗ ಸಾಕಷ್ಟು ಪ್ರಕ್ರಿಯೆಗಳು ಇರುತ್ತವೆ. ಅವುಗಳನ್ನು ಕೂಲಂಕಶವಾಗಿ ಪರಿಶೀಲಿಸಬೇಕು. ಅವುಗಳಿಗೆ ಸಮಯವಿಡಿಯುತ್ತದೆ. ಈ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.ಐಜಿಪಿ ಪ್ರತಾಪ್‌ರೆಡ್ಡಿ,   ಎಸ್‌ಪಿ  ಶಿವ ಕುಮಾರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.