ಶುಕ್ರವಾರ, ಜೂನ್ 18, 2021
27 °C

ಚುನಾವಣೆ: ದೂರು ಸ್ವೀಕಾರ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಲೋಕಸಭಾ ಚುನಾ­ವಣೆ ಕುರಿತ ದೂರು ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿ ಕಾರ್ಯಾ­ಲಯದಲ್ಲಿ ದೂರವಾಣಿ ಸಂಖ್ಯೆ 1950 ಮತ್ತು 08532–227­077 ಆರಂಭಿಸಲಾಗಿದೆ ಎಂದು ಹೆಚ್ಚು­ವರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ದೂರು ವಿಭಾಗವು ವಾರದ ಎಲ್ಲ ದಿನಗಳಲ್ಲಿಯೂ ಹಾಗೂ ದಿನದ 24 ತಾಸು ಕಾಲ ಕಾರ್ಯ ನಿರ್ವಹಿ­ಸಲಿದೆ. ಚುನಾವಣೆಗೆ ಸಂಬಂಧಪಟ್ಟ ದೂರುಗಳನ್ನು ಈ ದೂರವಾಣಿ ಸಂಖ್ಯೆಗೆ ನೇರವಾಗಿ ದಾಖಲಿಸ­ಬಹುದು ಎಂದರು.ಮಾಧ್ಯಮ ಪರಿಶೀಲನಾ ಸಮಿತಿ ರಚನೆ: ಲೋಕಸಭಾ ಚುನಾವಣೆ ಹಿನ್ನೆಲೆ­ಯಲ್ಲಿ ರಾಯಚೂರು ಲೋಕ­ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಮೇ­ದುವಾರರಾಗಲಿರುವ ಹಾಗೂ ರಾಜಕೀಯ ಪಕ್ಷಗಳು ಚುನಾವಣೆಗಳಿಗಾಗಿ ಪತ್ರಿಕೆಗಳಲ್ಲಿ ಹಾಗೂ ವಿದ್ಯುನ್ಮಾನ ಮತಯಂತ್ರ ನೀಡುವ ಜಾಹೀರಾತುಗಳನ್ನು ಖುದ್ದಾಗಿ ಪ್ರತಿ ದಿನವೂ ಪರಿಶೀಲಿಸಿ ಜಿಲ್ಲಾಚುನಾವಣಾಧಿಕಾರಿಗಳಿಗೆ ವರದಿ ನೀಡಲು ನಾಲ್ಕು ಅಧಿಕಾರಿ ಹಾಗೂ ಹಿರಿಯ ಪತ್ರಕರ್ತರ ತಂಡ ರಚನೆ ಮಾಡಲಾಗಿದೆ ಎಂದು ಚುನಾ­ವಣಾಧಿಕಾರಿ ಎಸ್.­ಎನ್ ನಾಗರಾಜು ಹೇಳಿದ್ದಾರೆ.ಜಿಲ್ಲಾ ಚುನಾವ­ಣಾಧಿಕಾರಿ ಅಧ್ಯಕ್ಷ­ರಾಗಿದ್ದು, ಉಪ ವಿಭಾಗಾ­ಧಿಕಾರಿ­ಗಳು, ದೂರದರ್ಶನ ಕೇಂದ್ರ ನಿಲಯ ನಿರ್ದೇಶಕ, ಹಿರಿಯ ಪತ್ರಕರ್ತ ಕೆ ರಾಮ­ಕೃಷ್ಣ ಸದಸ್ಯರಾ­ಗಿದ್ದಾರೆ.  ವಾರ್ತಾ­ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಟಿ ಕನುಮಪ್ಪ ಸದಸ್ಯ ಕಾರ್ಯದರ್ಶಿ­ಯಾಗಿದ್ದಾರೆ.ಚುನಾವಣೆ: ಕೇಂದ್ರ ಸ್ಥಾನ ಬಿಡದಂತೆ–ರಜೆ ಹಾಕದಂತೆ ಡಿಸಿ ಸೂಚನೆ:  ಲೋಕಸಭಾ ಚುನಾವಣೆ ಇರುವುದರಿಂದ ಜಿಲ್ಲೆ ಎಲ್ಲ ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ  ಅಧಿಕಾರಿ ಮತ್ತು ಸಿಬ್ಬಂದಿ ವರ್ಗ­ದವರು ಕೇಂದ್ರ ಸ್ಥಾನ ಬಿಡಬಾರದು ಮತ್ತು ರಜೆ ಹಾಕಬಾರದು ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್.­ಎನ್ ನಾಗರಾಜು ಆದೇಶ ಮಾಡಿದ್ದಾರೆ.ರಜೆ ಮೇಲಾಗಲಿ ಅಥವಾ ಸರ್ಕಾರಿ ಕೆಲಸದ ನಿಮಿತ್ತ ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು. ರಜೆ ಅಥವಾ ಕೇಂದ್ರ ಸ್ಥಾನ ಬಿಡುವ ಸಂದರ್ಭಗಳು ಉದ್ಭವಿಸಿದಲ್ಲಿ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾಚುನಾವಣಾ ಅಧಿಕಾ­ರಿಗಳ ಪೂರ್ವಾನುಮತಿ ಪಡೆದು­ಕೊಂಡು ಹೋಗಬೇಕು. ಆದೇಶ ಉಲ್ಲಂಘನೆ ಮಾಡಿದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.