ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹರಿಯುವ ಕಾವೇರಿ, ಲಕ್ಷ್ಮಣ ತೀರ್ಥ, ಹೇಮಾವತಿ, ಬರಪೊಳೆ ಸೇರಿದಂತೆ ಇತರ ನದಿಗಳ ದಂಡೆಯಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಆದರೆ ಇದನ್ನು ತಡೆಯುವ ಪರಿಣಾಮಕಾರಿ ಕ್ರಮಗಳು ಕಂಡುಬರುತ್ತಿಲ್ಲ.

ಸರ್ಕಾರ ಮರಳು ಗಣಿಗಾರಿಕೆಗೆ ನೀಡಿದ್ದ ಮೇ 31ರ ಗಡುವು ಮುಗಿದಿದ್ದರೂ ನದಿಗಳ ಪಾತ್ರದಿಂದ ಮರಳು ಎತ್ತುವ ಕೆಲಸ ಈಗಲೂ ಮುಂದುವರಿದಿದೆ. ಮುಖ್ಯವಾಗಿ ಸೋಮವಾರಪೇಟೆಯ ಕೊಡ್ಲಿಪೇಟೆ, ಶಿರಂಗಾಲ ಹಾಗೂ ವಿರಾಜಪೇಟೆಯ ಸಿದ್ದಾಪುರ, ನೆಲ್ಲಿಹುದಿಕೇರಿ ಸುತ್ತಮುತ್ತ ನಡೆದಿರುವುದು ಗೋಚರಿಸುತ್ತಿದೆ.

ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಲ್ಲಬೇಕಾದ ಲಕ್ಷಾಂತರ ರೂಪಾಯಿ ರಾಜಧನ ವಂಚನೆಯಾಗುತ್ತಿದೆ. ಮತ್ತೊಂದೆಡೆ ಕೊಡಗಿನಲ್ಲಿರುವ ಅತ್ಯಂತ ವಿಶಿಷ್ಟ ಜೀವವೈವಿಧ್ಯ ಪರಿಸರ ಕೂಡ ಹಾಳಾಗುತ್ತಿದೆ. ಬೇಕಾಬಿಟ್ಟಿ ಮರಳು ಎತ್ತುವುದರಿಂದ ನೀರಿನ ಹರಿವು ಬದಲಾಗಿ, ಜಲಚರ ಪ್ರಾಣಿಗಳಿಗೆ ಸಂಚಕಾರ ಬಂದೊದಗಿದೆ. ಇದನ್ನು ನಿಯಂತ್ರಿಸಬೇಕಾದ `ಟಾಸ್ಕ್ಫೋರ್ಸ್' ಕೈಕಟ್ಟಿ ಕುಳಿತಿದೆ.

ರಾಜ್ಯ ಸರ್ಕಾರದ ಮರಳು ನೀತಿ ಅನ್ವಯ ಮರಳು ವ್ಯವಹಾರವನ್ನು ನಿಯಂತ್ರಿಸಬೇಕಾದ `ಟಾಸ್ಕ್ಫೋರ್ಸ್' ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಕೊರತೆಯಿಂದಾಗಿ ನಿತ್ರಾಣಗೊಂಡಿರುವುದು ಮರಳು ದಂಧೆಕೋರರಿಗೆ ವರವಾಗಿ ಪರಿಣಮಿಸಿದೆ.

ಜಿಲ್ಲೆಯ ಕಾವೇರಿ ನದಿಪಾತ್ರ ಪ್ರದೇಶಗಳಾದ ಬಲ್ಲಮಾವುಟಿ, ಬೇಂಗೂರು, ಕುಶಾಲನಗರ, ಕಣಿವೆ, ಹೆಬ್ಬಾಲೆ, ಕೊಟ್ಟಮುಡಿ, ಬೇತ್ರಿ ಹಾಗೂ ಮೂರ್ನಾಡು, ಲಕ್ಷ್ಮಣತೀರ್ಥ ನದಿಪಾತ್ರ ಸ್ಥಳಗಳಾದ ಕಾನೂನು ಹಾಗೂ ಬಾಳೆಲೆ, ಹೇಮಾವತಿ ನದಿದಂಡೆ ಪ್ರದೇಶಗಳಾದ ಕೊಡ್ಲಿಪೇಟೆ, ಶಿರಂಗಾಲ ಪ್ರದೇಶಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ.

ಸ್ಟಾಕ್ಯಾರ್ಡ್ ಇಲ್ಲ: ಮರಳು ನೀತಿ ಅನ್ವಯ ನದಿಪಾತ್ರದಿಂದ ಮರಳನ್ನು ಎತ್ತುವ ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆ ಗುರುತಿಸಿರುವ ಸ್ಟಾಕ್ಯಾರ್ಡ್ಗಳಲ್ಲಿ ಮರಳನ್ನು ಸಂಗ್ರಹಿಸಿಡಬೇಕು. ಆದರೆ, ಜಿಲ್ಲೆಯಲ್ಲಿ ಇದುವರೆಗೆ ಯಾವ ಪ್ರದೇಶದಲ್ಲೂ ಸ್ಟಾಕ್ಯಾರ್ಡ್ ಸ್ಥಾಪಿಸಿಲ್ಲ. ಹೀಗಾಗಿ, ಗುತ್ತಿಗೆದಾರರು ನೇರವಾಗಿ ಮರಳನ್ನು ದುಪ್ಪಟ್ಟು ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

ಕಳೆದ ವರ್ಷ ಮರಳು ನೀತಿ ಜಾರಿಗೊಂಡಾಗ ಜಿಲ್ಲೆಯಲ್ಲಿ 38 ಬ್ಲಾಕ್ಗಳನ್ನು ಗುರುತಿಸಲಾಗಿತ್ತು. ಮರಳು ಸಂಗ್ರಹಣಾ ಸ್ಟಾಕ್ಯಾರ್ಡ್ಗಳನ್ನು ನಿರ್ಮಿಸಲು ಸೋಮವಾರಪೇಟೆಯಲ್ಲಿ ಎರಡು ಕಡೆ ಹಾಗೂ ವಿರಾಜಪೇಟೆಯಲ್ಲಿ ಎರಡು ಕಡೆ ಸ್ಥಳಗಳನ್ನು ಗುರುತಿಸಲಾಗಿತ್ತು. ಮಡಿಕೇರಿಯಲ್ಲಿ ಯಾವುದೇ ಸ್ಥಳಗಳನ್ನು ಗುರುತಿಸಿರಲಿಲ್ಲ.

ಸ್ಟಾಕ್ಯಾರ್ಡ್ ನಿರ್ಮಾಣಕ್ಕೆ ಗುರುತಿಸಲಾಗಿದ್ದ ಸ್ಥಳವನ್ನು ಸರ್ವೇ ಮಾಡಿ, ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸುವಲ್ಲಿ ಕಂದಾಯ ಇಲಾಖೆ ವಿಫಲವಾಯಿತು. ಹೀಗಾಗಿ, ಇದುವರೆಗೆ ಜಿಲ್ಲೆಯಲ್ಲಿ ಒಂದೂ ಸ್ಟಾಕ್ ಯಾರ್ಡ್ಗಳ ನಿರ್ಮಾಣ ಸಾಧ್ಯವಾಗಿಲ್ಲ. ಇದು ಇಲಾಖೆಗಳ ಸಮನ್ವಯತೆಯ ಕೊರತೆಗೆ ಸ್ಪಷ್ಟ ಉದಾಹರಣೆ ಎನ್ನುತ್ತಾರೆ ಜನ.

ಮೇಲ್ನೋಟಕ್ಕೆ ಚೆಕ್ಪೋಸ್ಟ್: ಮರಳು ತೆಗೆಯುವ ಪ್ರದೇಶಗಳಿಂದ ಬಹುದೂರ ಚೆಕ್ಪೋಸ್ಟ್ಗಳನ್ನು ನಿರ್ಮಿಸಿರುವುದು ಕೂಡ ಸಂಶಯಕ್ಕೆ ಎಡೆಮಾಡಿ ಕೊಡುತ್ತಿದೆ. ಉದಾಹರಣೆಗೆ ಶಿರಂಗಾಲದಲ್ಲಿ ತೆಗೆಯಲಾಗುವ ಮರಳನ್ನು ತಪಾಸಣೆ ನಡೆಸಲು ಕಣಿವೆಯಲ್ಲಿ ಚೆಕ್ಪೋಸ್ಟ್ ನಿರ್ಮಿಸಲಾಗಿದೆ. ಶಿರಂಗಾಲ ಹಾಗೂ ಕಣಿವೆ ನಡುವೆ ಹಲವು ಒಳದಾರಿಗಳಿವೆ. ಈ ಒಳದಾರಿಯನ್ನು ಬಳಸಿಕೊಂಡು ಹೊರಜಿಲ್ಲೆಗಳಿಗೆ ಮರಳನ್ನು ಸಾಗಿಸಲಾಗುತ್ತಿದೆ. ಚೆಕ್ಪೋಸ್ಟ್ ಇದ್ದೂ ಇಲ್ಲದಂತಾಗಿದೆ.

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಅತ್ಯಲ್ಪ ಪ್ರಮಾಣದಲ್ಲಿ ನಡೆಯುತ್ತವೆ. ಆದಾಗ್ಯೂ, ಇಲ್ಲಿನ ನದಿದಂಡೆಯಿಂದ ಮರಳು ಎತ್ತುವ ಕೆಲಸ ಮಾತ್ರ ಯಾವ ಜಿಲ್ಲೆಗೂ ಕಡಿಮೆ ಇಲ್ಲದಂತೆ ನಡೆಯುತ್ತದೆ. ಇಲ್ಲಿ ಉತ್ತಮ ಗುಣಮಟ್ಟದ ಮರಳು ಸಿಗುವುದು ಇದಕ್ಕೆ ಕಾರಣವಾಗಿದೆ. ಇಲ್ಲಿಂದ ಎತ್ತುವ ಹೆಚ್ಚಿನಾಂಶ ಮರಳನ್ನು ನೆರೆಯ ಜಿಲ್ಲೆಗಳಿಗೆ ರವಾನಿಸಲಾಗುತ್ತದೆ.

ಕೇವಲ ಮಾನವ ಶಕ್ತಿಯಿಂದಲೇ ಮರಳನ್ನು ಎತ್ತಬೇಕೆನ್ನುವ ನಿಯಮವಿದ್ದರೂ, ಬಹಳ ಪ್ರದೇಶಗಳಲ್ಲಿ ಯಂತ್ರಗಳನ್ನು ಬಳಸಲಾಗುತ್ತಿದೆ. ಯಾಂತ್ರೀಕೃತ ಬೋಟ್ಗಳು ಹಾಗೂ ಜೆಸಿಬಿ ಯಂತ್ರಗಳ ಸಹಾಯವನ್ನು ಪಡೆಯಲಾಗುತ್ತಿದೆ. ಎಷ್ಟೋ ಸಂದರ್ಭಗಳಲ್ಲಿ ನದಿಯ ಆಳದಿಂದಲೇ ಮರಳನ್ನು ಎತ್ತಲಾಗುತ್ತಿದೆ. ಈ ರೀತಿ ಮಾಡುವುದರಿಂದ ಸಾಕಷ್ಟು ಜಲಚರ ಪ್ರಾಣಿಗಳು ಬಲಿಯಾಗುತ್ತಿವೆ.

ರಾಜಕೀಯ ಹಸ್ತಕ್ಷೇಪ: ಕಳೆದ ವರ್ಷ ಮರಳು ಎತ್ತುವ ಟೆಂಡರ್ ಪಡೆದುಕೊಂಡ ಬಹುತೇಕ ಗುತ್ತಿಗೆದಾರರು ನಿರ್ದಿಷ್ಟವಾದ ಒಂದು ಪಕ್ಷಕ್ಕೆ ಸೇರಿದವರು ಎನ್ನುವುದು ಗಮನಾರ್ಹ. ಹೀಗಾಗಿ, ಗುತ್ತಿಗೆದಾರರಿಗೆ `ರಾಜಕೀಯ ಕೃಪಾಕಟಾಕ್ಷ' ಕೂಡ ಇದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುವ ಮಾತು. `ಅಕ್ರಮ ಮರಳು ಸಾಗಾಟ ಮಾಡುವ ಪ್ರಕರಣಗಳನ್ನು ಹಿಡಿಯಲು ನಾವು ಮುಂದಾದರೆ, ರಾಜಕೀಯ ನಾಯಕರು ಮಧ್ಯೆ ಪ್ರವೇಶಿಸುತ್ತಾರೆ' ಎಂದು ಹೆಸರು ಬಹಿರಂಗಪಡಿಸದಂತೆ ಮನವಿ ಮಾಡಿಕೊಂಡ ಅಧಿಕಾರಿಯೊಬ್ಬರು ತಮ್ಮ ಅಸಹಾಯಕತೆ ತೋಡಿಕೊಂಡರು.

ಸಿಬ್ಬಂದಿ ಕೊರತೆ
ಮರಳು ಗಣಿಗಾರಿಕೆಯ ಎಲ್ಲ ಕೆಲಸಗಳು ಪಿಡಬ್ಲುಡಿಗೆ ಸಂಬಂಧಿಸಿದ್ದು ಎಂದು ಕಂದಾಯ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ. ಮರಳು ಸಿಗುವ ಸ್ಥಳಗಳನ್ನು ಗುರುತಿಸುವುದು ಹಾಗೂ ಅದಕ್ಕೆ ಟೆಂಡರ್ ಪ್ರಕ್ರಿಯೆ ನಡೆಸುವುದು ಮಾತ್ರ ಪಿಡಬ್ಲುಡಿಗೆ ಸಂಬಂಧಿಸಿದೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟುವುದು ಟಾಸ್ಕ್ಫೋರ್ಸ್ನಲ್ಲಿರುವ ಎಲ್ಲ ಇಲಾಖೆಗಳ ಕರ್ತವ್ಯ. ಆದರೆ, ಇತರ ಇಲಾಖೆಯ ಅಧಿಕಾರಿಗಳು ಇದಕ್ಕೆ ಸಂಪೂರ್ಣವಾಗಿ ಸಹಕಾರ ನೀಡುತ್ತಿಲ್ಲ. ತಮ್ಮ ಬಳಿ ಸಿಬ್ಬಂದಿಯ ಕೊರತೆಯಿದೆ ಎಂದು ಜಾರಿಕೊಳ್ಳುತ್ತಿದ್ದಾರೆ.
-ದೊಡ್ಡಸಿದ್ದಯ್ಯ, ಪಿಡಬ್ಲುಡಿ ಮುಖ್ಯ ಎಂಜಿನಿಯರ್

ಪ್ರಕೃತಿ ಮೇಲೆ ಪರಿಣಾಮ
ದಕ್ಷಿಣ ಕೊಡಗಿನ ಬರಪೊಳೆ, ಕೊಂಗಣಹೊಳೆ, ಲಕ್ಷ್ಮಣ ತೀರ್ಥ, ಕಾವೇರಿ ನದಿ ದಂಡೆಯಲ್ಲಿ ಈಗಲೂ ಅಕ್ರಮ ಮರಳು ದಂಧೆ ಮುಂದುವರಿದಿದೆ. ಇದನ್ನು ತಡೆಯುವಂತೆ ಕಾನೂನಿನ ಹೋರಾಟವನ್ನು ಕೂಡ ಮಾಡಿದ್ದೇವೆ. ಆದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ. ಬೇಕಾಬಿಟ್ಟಿಯಾಗಿ ಮರಳು ತೆಗೆದರೆ ನದಿ ದಿಕ್ಕು ಬದಲಾಗುತ್ತದೆ. ಅಲ್ಲದೇ, ಜಲಚರ ಪ್ರಾಣಿಗಳಿಗೆ ಅಪಾಯವಾಗುತ್ತದೆ. ಒಟ್ಟಾರೆಯಾಗಿ ಕೊಡಗಿನ ಪ್ರಕೃತಿ ಮೇಲೆ ಪರಿಣಾಮ ಬೀರುವುದು ಖಂಡಿತ.
-ರವಿ ಚೆಂಗಪ್ಪ, ಕಾವೇರಿ ಸೇನೆ ಸಂಚಾಲಕ

ನಿರಂತರವಾಗಿ ಅಕ್ರಮ
ಸೋಮವಾರಪೇಟೆಯ ಶಿರಂಗಾಲ, ಕೊಡ್ಲಿಪೇಟೆ, ಕಣಿವೆ, ಹೆಬ್ಬಾಲೆ ಮುಂತಾದ ಸ್ಥಳಗಳಲ್ಲಿ ನಿರಂತರವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಇದನ್ನು ತಡೆಯುವಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆವು. ಹತ್ತಾರು ಬಾರಿ ಹೋರಾಟ, ಪ್ರತಿಭಟನೆ ನಡೆಸಿದೆವು. ಜೈಲಿಗೆ ಕೂಡ ಹೋಗಿ ಬಂದೆವು. ಆದರೂ, ಅಕ್ರಮ ನಿಂತಿಲ್ಲ.
- ವಿ.ಪಿ. ಶಶಿಧರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.