ಕೆಲ ತಿಂಗಳ ಹಿಂದಿನ ಮಾತು. ತುಮಕೂರಿನಿಂದ ಶಿರಾ ಪಟ್ಟಣಕ್ಕೆ ಹೋಗುತ್ತಿದ್ದೆ. ಶಿರಾ ಅಮಾನಿಕೆರೆಯ ಅಂಗಳ ಕಣ್ಣಿಗೆ ಬಿತ್ತು. ಅಲ್ಪ ನೀರಿನಲ್ಲಿ ದೊಡ್ಡ ದೊಡ್ಡ ಪಕ್ಷಿಗಳ ಗುಂಪು ನನ್ನನ್ನು ಆಕರ್ಷಿಸಿತು. ಮನೆಗೆ ಹೋಗಿ ಕ್ಯಾಮೆರಾದೊಂದಿಗೆ ಕೆರೆಯಂಗಳಕ್ಕೆ ಕಾಲಿಟ್ಟೆ. ಅಂಗಳದ ತುಂಬ ಕೊಳೆಯುತ್ತಿರುವ ಸೀಮೆ ಜಾಲಿ ಮುಳ್ಳುಗಳು ನನ್ನನ್ನು ಸ್ವಾಗತಿಸಿದವು. ನೆಲ ಹುಡುಕಿಕೊಂಡು ನಿಧಾನವಾಗಿ ಕಾಲಿಡುತ್ತ ಪಕ್ಷಿಗಳಿರುವ ಸಮೀಪಕ್ಕೆ ಬಂದೆ.

ತೆಳುವಾದ ನೀರಿನಲ್ಲಿ ಕಪ್ಪೆ, ಮೀನು, ಕಪ್ಪೆಚಿಪ್ಪು, ಏಡಿಗಳ ಭೇಟೆಯಲ್ಲಿ ತಲ್ಲೀನರಾದ ತೆರೆದ ಕೊಕ್ಕಿನ ಕೊಕ್ಕರೆ, ಬಣ್ಣದ ಕೊಕ್ಕರೆ, ನಾಮದ ಕೋಳಿ, ಚುಕ್ಕೆ ಕೊಕ್ಕಿನ ಬಾತುಕೋಳಿ, ನೀರು ಕಾಗೆ, ಚಮಚ ಕೊಕ್ಕಿನ ಹಕ್ಕಿ, ಕರಿ ತಲೆ ಹಕ್ಕಿ, ಕಪ್ಪು ಕೊರವಂಚ, ಸ್ಟಿಲ್ಟ್ಗಳು, ಇಗ್ರೇಟ್ಗಳು, ಟರ್ನ್ ಪಕ್ಷಿಗಳು ತಮ್ಮ ತಮ್ಮ ಶಕ್ತ್ಯಾನುಸಾರ ಆಹಾರ ಭಕ್ಷಿಸುತ್ತಿದ್ದವು.

ದ್ವೀಪದಂತಿದ್ದ ನಡುಗಡ್ಡೆ ಜಾಗಕ್ಕೆ ಹೋದರೆ ಈ ಪಕ್ಷಿಗಳ ಫೋಟೊ ಚೆನ್ನಾಗಿ ತೆಗೆಯಬಹುದು ಎಂದು ನೀರಿರುವ ಕೆಸರಿನಲ್ಲಿ ನಡೆದುಕೊಂಡು ಹೋದೆ. ನಡುಗಡ್ಡೆಗೆ ಪ್ರವೇಶ ಮಾಡಿದ ತಕ್ಷಣ ಗುಬ್ಬಚ್ಚಿಗಿಂತ ತುಸು ದೊಡ್ಡ ಗಾತ್ರದ ತೆಳುವಾದ ಪುಟ್ಟ ಕಾಲುಗಳು, ಚಿಕ್ಕದಾದ ಕೊಕ್ಕು, ಕಣ್ಣು ಮತ್ತು ಕೊಕ್ಕಿನ ಮಧ್ಯೆ ಕಪ್ಪು ಪಟ್ಟಿ ಹೊಂದಿರುವ ತಿಳಿ ಬೂದು ಬಣ್ಣದ ಎರಡು ಪಕ್ಷಿಗಳು ನೆಲದ ಮೇಲೆ ಓಡುತ್ತಿರುವುದು ಬೈನಾಕ್ಯುಲರ್ನಲ್ಲಿ ಗೋಚರವಾಯಿತು.

೨೦ ವರ್ಷಗಳ ಹಿಂದೆ ನೋಡಿದ ಚಿಕ್ಕ ಪ್ರಾಟಿನ್ ಕೋಲ್ ಪಕ್ಷಿಗಳ ನೆನಪಾಯಿತು. ಇವುಗಳ ಛಾಯಾಗ್ರಹಣ ಮಾಡಲೆಂದು ನಿಧಾನವಾಗಿ ಅವುಗಳನ್ನು ಹಿಂಬಾಲಿಸಿಕೊಂಡು ಮುಂದೆ ಸಾಗಿದೆ.

ಈ ಪಕ್ಷಿಗಳು ಅಣತಿ ದೂರ ಹಾರಿ ನಂತರ ನೆಲಕ್ಕಿಳಿದು ಓಡುತ್ತಿದ್ದವು. ಅವುಗಳನ್ನು ಹಿಂಬಾಲಿಸಿ ಮುಂದೆ ನಡೆದಾಗ ಎದುರುಗಡೆ ಇನ್ನೂ ೧೨ ಪ್ರಾಟಿನ್ ಕೋಲ್ಗಳು ಕಾಣಿಸಿದವು. ಸುತ್ತ ಮುತ್ತ ಕಣ್ಣು ಹಾಯಿಸಿದೆ. ೮೦ಕ್ಕೂ ಹೆಚ್ಚು ಇದೇ ಪಕ್ಷಿಗಳ ಓಡಾಟ, ಹಾರಾಟ ನೋಡಿ ಈ ನಡುಗಡ್ಡೆ ಈ ಪಕ್ಷಿಗಳ ಸಾಮ್ರಾಜ್ಯವೆನಿಸಿತು.

ಛಾಯಾಗ್ರಹಣ ಮಾಡಲು ಮುಂದಾದಾಗ ಕೆಲವು ಪಕ್ಷಿಗಳು ತಲೆಯ ಮೇಲೆ ಹಾರಾಡಿದರೆ, ಇನ್ನೂ ಕೆಲವು ನೆಲದಲ್ಲಿ ಓಡುತ್ತಿದ್ದವು. ಕೆಲವು ಅಡ್ಡಲಾಗಿ ಓಡಿದರೆ, ಕೆಲವು ಬಿಳಿ ಮಿಶ್ರಿತ ಕಪ್ಪು ರೆಕ್ಕೆ ಅಗಲಿಸಿ ನೆಲದಲ್ಲಿ ನನ್ನ ಕಡೆ ಓಡೋಡಿ ಬರುತ್ತಿದ್ದವು. ಇನ್ನು ಕೆಲವು ನೆಲಕ್ಕೆ ದೇಹವನ್ನೆಲ್ಲ ಸ್ಪರ್ಶಿಸಿಕೊಂಡು ಹೊರಳಾಡುತ್ತಿದ್ದವು. ಕೆಲವು ದೇಹವನ್ನು ಕುಗ್ಗಿಸಿಕೊಂಡು ನಿಶ್ಚಲವಾಗಿ ಕುಳಿತಿದ್ದವು. ಇವುಗಳು ಒಮ್ಮೆಲೆ ಜೆಟ್ ಫೈಟರ್ಗಳ ಹಾಗೆ ಒಟ್ಟಾಗಿ ಮೇಲಕ್ಕೆ ಹಾರುತ್ತಿದ್ದವು.

ಯಾವುದೋ ಅಗೋಚರ ಕಮ್ಯಾಂಡರ್ ಆಜ್ಞೆ ಸಿಕ್ಕಂತೆ ಇಡೀ ತಂಡವೇ ಗಾಳಿಯಲ್ಲಿ ಹಠಾತ್ತಾಗಿ ಗಿರಕಿ ಹೊಡೆದು ಮಿಂಚಿನಂತೆ ಬಳುಕಿ ನರ್ತನ ಮಾಡುತ್ತಿದ್ದವು. ಒಮ್ಮೊಮ್ಮೆ ಎಲ್ಲಾ ಪಕ್ಷಿಗಳು ಒಂದೇ ಸಲ ಹಾರಿ ಚುಮ್ ಚುಮ್ ಶಬ್ದ ಮಾಡಿಕೊಂಡು ಪುನಃ ನೆಲದಲ್ಲಿ ಕುಳಿತುಕೊಳ್ಳುತ್ತಿದ್ದವು. ಇವುಗಳನ್ನು ಹುಡುಕಲು ಹದ್ದಿನ ಕಣ್ಣಿಗೂ ಕಷ್ಟವಾಗಬಹುದಿತ್ತು.

ಆಗಲೇ ೧೦ ಗಂಟೆ ಸಮಯ ಬೇಸಿಗೆಯ ರಣಬಿಸಿಲು ತಡೆಯಲಾರದ ಸೆಕೆ ದೇಹವನ್ನೆಲ್ಲ ಬೆವರುವಂತೆ ಮಾಡಿತ್ತು. ಹೊಟ್ಟೆ ಚುರುಗುಟ್ಟುತ್ತಿತ್ತು. ಕುಳಿತುಕೊಳ್ಳಲು ಮುಳ್ಳುಗಳಿಲ್ಲದ ಜಾಗ ಹುಡುಕುತ್ತಿದ್ದೆ. ಕಣ್ಣೆದುರು ಕಂದು ಮಿಶ್ರಿತ ಬೂದು ಬಣ್ಣದ ಸುಂದರ ಮೂರು ಮೊಟ್ಟೆಗಳು ಬೋಳು ನೆಲದಲ್ಲಿ ಕಾಣಿಸಿದವು. ಕಣ್ಣನ್ನು ಆಚೀಚೆ ಹೊರಳಾಡಿಸಿದೆ. ನೆಲದ ಎಲ್ಲಾ ಕಡೆ ಮೊಟ್ಟೆಗಳು ಕಾಣತೊಡಗಿದವು. ಕುತೂಹಲ ಕೆರಳಿತು ಬಿಸಿಲು ಸೆಕೆ ಮಾಯವಾಯಿತು. ನನ್ನ ಹೊಟ್ಟೆ ಹಸಿವು ಮರೆತು ಹೋಯಿತು.

ಮೊಟ್ಟೆಗಳನ್ನು ಎಣಿಸುತ್ತಾ ಹೋದೆ. ೩೮ ಕಡೆ ಮೊಟ್ಟೆಗಳಿದ್ದವು. ಪ್ರತಿ ಸ್ಥಳದಲ್ಲೂ ೨ ಅಥವಾ ೩ ಮೊಟ್ಟೆಗಳಿದ್ದವು. ಮೊಟ್ಟೆಗಳಿಗೆ ಯಾವುದೇ ಗೂಡು ನಿರ್ಮಾಣವಾಗಿರಲಿಲ್ಲ. ಎಲ್ಲಾ ಪಕ್ಷಿಗಳು ಸುಂದರ ವೈವಿಧ್ಯಮಯ ಗೂಡು ನಿರ್ಮಾಣ ಮಾಡಿ ಮೊಟ್ಟೆ ಇಡುತ್ತವೆ. ಆದರೆ ಈ ಪಕ್ಷಿಗಳು ನಗ್ನ ನೆಲದ ಮೇಲೆ ಮೊಟ್ಟೆ ಇಟ್ಟಿದ್ದವು. ಯಾವುದೇ ರಕ್ಷಣೆ ಸಹ ಇರಲಿಲ್ಲ. ನೆಲದ ಬಣ್ಣಕ್ಕೆ ಮೊಟ್ಟೆಗಳ ಬಣ್ಣ ಸರಿದೂಗುತ್ತಿತ್ತು.

ಅಲ್ಲಿದ್ದ ಪ್ರಾಟಿನ್ ಕೋಲ್ಗಳನ್ನು ಎಣಿಸಿದಾಗ ೮೦ಕ್ಕೂ ಹೆಚ್ಚು ಪಕ್ಷಿಗಳಿದ್ದವು. ಅವುಗಳೆಲ್ಲಾ ಇವು ತೊಲಗಿದರೆ ಸಾಕು ಎಂದು ಚಡಪಡಿಸುತ್ತಿದ್ದವು. ಅವುಗಳ ಕಷ್ಟ ಗೊತ್ತಾಯಿತು. ಆ ಜಾಗದಿಂದ ಹೊರಬಂದು ದೂರದಿಂದ ಬೈನಾಕ್ಯುಲರ್ನಲ್ಲಿ ಅವುಗಳ ಚಟುವಟಿಕೆ ವೀಕ್ಷಿಸುತ್ತಾ ಕುಳಿತೆ. ಎಲ್ಲಾ ಪಕ್ಷಿಗಳು ಅವುಗಳ ಮೊಟ್ಟೆಗಳ ಹತ್ತಿರ ಓಡೋಡಿ ಬಂದು ಕಾವು ಕೊಡಲು ಪ್ರಾರಂಭಿಸಿದವು. ಕ್ಷಮೆ ಇರಲಿ ಎಂದು ವಾಪಸು ಬಂದೆ.

೫ ದಿನಗಳ ನಂತರ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಸ್ನೇಹಿತರ ಜೊತೆ ಕೆರೆಗೆ ಭೇಟಿ ಕೊಟ್ಟೆ. ಆ ದಿನವೂ ಸಹ ಪಕ್ಷಿಗಳ ವರ್ತನೆಯು ಮನರಂಜಿಸುವಂತಿತ್ತು. ನಂತರ ಅವುಗಳ ಮೊಟ್ಟೆಗೆ ಕಾವು ಕೊಡುವುದಕ್ಕೆ ತೊಂದರೆ ಕೊಡದೆ ವಾಪಸಾದೆವು.

ನಂತರ ೧೭ ದಿನಗಳ ನಂತರ ಕೆರೆಗೆ ಪುನಃ ಹಾಜರಾದೆ ಮೊಟ್ಟೆಗಳಿದ್ದ ಜಾಗಕ್ಕೆ ಬಂದೆ. ಒಂದು ಮೊಟ್ಟೆಯೂ ಕಾಣುತ್ತಿಲ್ಲ! ಮೊಟ್ಟೆಯಿಂದ ಮರಿ ಹೊರಬಂದಾದ ಮೇಲೆ ಅದರ ಮೊಟ್ಟೆಯ ಕವಚಗಳು ಅಲ್ಲಿರಬೇಕಿತ್ತು. ಅದೂ ಸಹ ಕಾಣುತ್ತಿಲ್ಲ. ನನ್ನಲ್ಲಿ ಅನುಮಾನ ಸಂಶಯಗಳು ಮೂಡಲು ಪ್ರಾರಂಭಿಸಿದವು. ಯಾರಾದರೂ ಮೊಟ್ಟೆಗಳನ್ನು ಕದ್ದರೆ ಅಥವಾ ಹದ್ದು ನಾಯಿಗಳೇನಾದರೂ ತಿಂದವೆ ಅಥವಾ ಮೊಟ್ಟೆಯಿಂದ ಹೊರಬಂದ ಮರಿಗಳಿಗೆ ಗುಟುಕು ಕೊಟ್ಟುಕೊಂಡು ಉತ್ತರ ಭಾರತ ಮತ್ತು ಸಿಂಧ್ ಪ್ರಾಂತ್ಯಕ್ಕೆ ವಾಪಸಾದವೆ...? ನನಗೆ ಇನ್ನೂ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.