ಕುಷ್ಟಗಿ: ಭೂಮಿ ಮತ್ತು ಬೆವರಿನ ಸಂಸ್ಕೃತಿಯಾಗಿ ಬೆಳೆದು ಮನುಕುಲಕ್ಕೆ ಶಕ್ತಿ ನೀಡುವಂಥ ವಿಶಿಷ್ಟ ಪರಿಕಲ್ಪನೆ ಹೊಂದಿರುವ ಜನಪದ ಕಲೆ ಜನರ ಮಧ್ಯೆ ಬೆಳೆಯುತ್ತಿರುವುದರಿಂದ ನಶಿಸುತ್ತಿದೆ ಎಂಬ ಆತಂಕಪಡುವ ಅಗತ್ಯವಿಲ್ಲ ಎಂದು ಪದವಿ ಕಾಲೇಜ್ ಉಪನ್ಯಾಸಕ ಬಸವರಾಜ ಕಂಬಳಿ ಶುಕ್ರವಾರ ಸಂಜೆ ಇಲ್ಲಿ ಹೇಳಿದರು.

ಸಮೃದ್ಧಿ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಆಶ್ರಯದಲ್ಲಿ ನಡೆದ ಎರಡು ದಿನಗಳ ‘ಜನಪದ ಕಲಾ ಉತ್ಸವ’ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕನ್ನು ಪ್ರೀತಿಸುವ ಜನಪದ ಕಲೆಯನ್ನು ತಮ್ಮ ನೋವಿನ ನಡುವೆಯೂ ಉಳಿಸಿ ಬೆಳೆಸುತ್ತಿರುವ ಜನಪದ ಕಲಾವಿದರು ಸಮಾಜದ ಜೀವನಾಡಿಗಳಾಗಿದ್ದಾರೆ ಎಂದರು.

ಸಮಾಜ ಸಾಂಪ್ರದಾಯಿ ಆಚಾರವನ್ನು ಸ್ವೀಕರಿಸುತ್ತದೆ ಹೊರತು ವಿಚಾರವನ್ನಲ್ಲ, ನಿಜವಾದ ಜನಪದ ಕಲಾವಿದರಿಗೆ ಬೆಲೆ ದೊರೆತರೆ ಮಾತ್ರ ಕಲೆ ಉಳಿಯುತ್ತದೆ, ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಸರ್ಕಾರ ಮತ್ತು ಸಮಾಜದಿಂದ ನಡೆಯಬೇಕು ಎಂದು ಕಂಬಳಿ ಹೇಳಿದರು.

ಸಾಹಿತಿ ಪ್ರಮೋದ ತುರ್ವಿಹಾಳ ಮಾತನಾಡಿ, ಆಧುನಕತೆ ದಬ್ಬಾಳಕೆಯಲ್ಲೂ ಜನಪದ ಕಲೆ ತನ್ನ ಸತ್ವವನ್ನು ಉಳಿಸಿಕೊಂಡಿದೆ, ಸಹಜ ನೆಲೆಯಿಂದ ಬಂದ ಕಲೆ ಮಾತ್ರ ಜನಪದ ಎನಿಸಿಕೊಳ್ಳುತ್ತದೆ, ಮನುಷ್ಯ ಮತ್ತು ಬದುಕಿನ ಸಂಬಂಧದ ಜೊತೆಗೆ ದೇವರನ್ನೇ ಪ್ರಶ್ನಿಸುವ ಶಕ್ತಿ ಜನಪದ ಕಲೆಯಲ್ಲಿದೆ ಎಂದರು.ಸಮೃದ್ಧಿ ಸಂಸ್ಥೆ ಅಧ್ಯಕ್ಷ ಸಿದ್ಧಲಿಂಗಪ್ಪ ಕಲಕಬಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ವೀರೇಶ ಬಂಗಾರಶೆಟ್ಟರ್, ಅಮಿ

ನುದ್ದೀನ ಮುಲ್ಲಾ, ವಸಂತ ಮೇಲಿನಮನಿ, ಚಂದ್ರು ವಡಗೇರಿ, ಶಿಕ್ಷಕ ಅರವಿಂದಕುಮಾರ ದೇಸಾಯಿ, ಕೆ.ಎಸ್.ಮಾಲಿಪಾಟೀಲ, ಶಶಿಧರ ಕವಲಿ ಮೊದಲಾದವರು ವೇದಿಕೆಯಲ್ಲಿದ್ದರು. ಕಿಶೋರ ಹಿರೇಮಠ ನಿರೂಪಿಸಿದರು. ನಬಿಸಾಬ್ ಕುಷ್ಟಗಿ ವಂದಿಸಿದರು.

ಯಲಬುರ್ಗಾದ ಬೀರಲಿಂಗೇಶ್ವರ ಜನಪದ ಕಲಾ ಸಂಘದವರು ಪ್ರಸ್ತುತಪಡಿಸಿದ ಕರಡಿಮಜಲು, ಬಸಮ್ಮ ಹಾಗೂ ಹಿರೇಅರಳಿಹಳ್ಳಿಯ ಹಿಮ್ಮೇಳ ತಂಡದವರ ಬಯಲಾಟದ ಪದ, ಕೃಷ್ಣಪ್ಪ ಗೋಂದಳಿ ತಂಡದವರ ಗೊಂದಲಿಗರ ಪದ, ಬಸಪ್ಪ ಚೌಡ್ಕಿ ತಂಡದವರ ಚೌಡಕಿ ಪದ ಮತ್ತಿತರೆ ಜನಪದ ಕಲೆಗಳು ಜನಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.