ಒಂಚೂರು
ಜನಪ್ರಿಯ ಕೋತಿ
ಡಾರ್ವಿನ್ ಹೆಸರಿನ ಏಳು ತಿಂಗಳ ರೆಸಸ್ ಕೋತಿ ಇಂಟರ್ನೆಟ್ನಲ್ಲಿ ಜನಪ್ರಿಯವಾಯಿತು.
ಟೊರಾಂಟೊದ ಕಾರ್ ಪಾರ್ಕ್ ಬಳಿಯ ಮಳಿಗೆಯೊಂದರತ್ತ ಅದು ನಡೆಯತೊಡಗಿದ್ದನ್ನು ವಿಡಿಯೊ ಚಿತ್ರೀಕರಣದ ಮೂಲಕ ಸೆರೆಹಿಡಿಯಲಾಯಿತು.
ಟ್ರೆಂಡಿ ಜಾಕೆಟ್ ತೊಟ್ಟಿದ್ದ ಆ ಕೋತಿಯನ್ನು ಕಂಡು ಅನೇಕರಿಗೆ ಅಚ್ಚರಿ. ಅದು ಒಡೆಯ ಯಾಸ್ಮಿನ್ ನಖುದಾ ಅವರ ಕಾರಿನಿಂದ ತಪ್ಪಿಸಿಕೊಂಡು ಆ ಅಂಗಡಿಯತ್ತ ಹೆಜ್ಜೆ ಹಾಕಿತ್ತು.
ಅದನ್ನು ಅನಿಮಲ್ ಸರ್ವಿಸಸ್ ಅಥಾರಿಟೀಸ್ನವರು ಹಿಡಿದರು. ಈ ಘಟನೆ ನಡೆದದ್ದು ಕಳೆದ ವರ್ಷ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.