ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಹೆಚ್ಚಿನ ತನಿಖೆಗಾಗಿ ಸಿಬಿಐ ಪೊಲೀಸರ ವಶಕ್ಕೆ ಒಪ್ಪಿಸಿರುವ ಸಿಬಿಐ ವಿಶೇಷ ಕೋರ್ಟ್ ಆದೇಶವನ್ನು ಹೈಕೋರ್ಟ್ ಗುರುವಾರ ಊರ್ಜಿತಗೊಳಿಸಿದೆ.

ಇದೇ 2ರಂದು ವಿಶೇಷ ಕೋರ್ಟ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್.ಆನಂದ ಅವರು ವಜಾಗೊಳಿಸಿದ್ದಾರೆ.

`ಪ್ರಕರಣದ ಗಂಭೀರತೆ ಹಾಗೂ ಹಿನ್ನೆಲೆ ಅರಿತ ನ್ಯಾಯಾಧೀಶರು ಆರೋಪಿಯನ್ನು 11 ದಿನಗಳವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಆದೇಶದ ಮಧ್ಯೆ ನಾವು ಪ್ರವೇಶ ಮಾಡುವುದಿಲ್ಲ~ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ವಿಚಾರಣೆಯನ್ನು ವಿಶೇಷ ಕೋರ್ಟ್ಗೆ ವರ್ಗಾಯಿಸಿ ಮುಂದಿನ ಪ್ರಕ್ರಿಯೆ ನಡೆಸುವಂತೆ ಸೂಚಿಸಿದ್ದಾರೆ.

ಮಾನ್ಯವಾಗದ ವಾದ: `ವಾರೆಂಟ್ ಜಾರಿ ಮಾಡುವ ಮೂಲಕ ಆರೋಪಿಗಳನ್ನು ಪೊಲೀಸ್ ಬಂಧನಕ್ಕೆ ಒಪ್ಪಿಸುವ ಅಧಿಕಾರ ಅಧೀನ ಕೋರ್ಟ್ಗೆ ಇಲ್ಲ. ಅಷ್ಟೇ ಅಲ್ಲದೇ, ಐದು ದಿನಗಳಿಗಿಂತ ಹೆಚ್ಚಿನ ಅವಧಿಯವರೆಗೆ ತನಿಖೆಗಾಗಿ ಪೊಲೀಸರ ವಶಕ್ಕೆ ಆದೇಶಿಸುವ ಅಧಿಕಾರ ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ಅಡಿ ಕಾನೂನು ಬಾಹಿರ. ಆದರೆ ವಿಶೇಷ ಕೋರ್ಟ್ ಕಾಯ್ದೆ ಉಲ್ಲಂಘಿಸಿ ಇದೇ 2ರಿಂದ 12ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ ಎಂಬ ರೆಡ್ಡಿ ವಾದವನ್ನು ನ್ಯಾಯಮೂರ್ತಿಗಳು ತಳ್ಳಿ ಹಾಕಿದ್ದಾರೆ.

`ರಾಜಸ್ತಾನ ವರ್ಸಸ್ ಸಂತೋಷ್ ಯಾದವ್ ಪ್ರಕರಣದಲ್ಲಿ ರಾಜಸ್ತಾನ ಹೈಕೋರ್ಟ್ನ ಪೂರ್ಣ ಪೀಠವು ನೀಡಿರುವ ತೀರ್ಪಿನ ಅನ್ವಯ ನ್ಯಾಯಾಂಗ ಬಂಧನದಲ್ಲಿ ಇದ್ದ ಆರೋಪಿಗಳನ್ನು ವಿಚಾರಣೆಗಾಗಿ ಪೊಲೀಸರ ವಶಕ್ಕೆ ಒಪ್ಪಿಸುವ ಅಧಿಕಾರ ವಿಶೇಷ ಕೋರ್ಟ್ಗೆ ಇದೆ.

ಗಂಭೀರ ಸ್ವರೂಪದ ಆರೋಪಗಳು ಇದ್ದ ಸಂದರ್ಭಗಳಲ್ಲಿ ಈ ರೀತಿ ಆದೇಶ ಹೊರಡಿಸುವ ಅಧಿಕಾರ ಅಧೀನ ಕೋರ್ಟ್ಗಳಿಗೆ ಇದೆ ಎಂದು ಸಿಆರ್ಪಿಸಿಯ 267ನೇ ಕಲಮಿನಲ್ಲಿಯೂ ಉಲ್ಲೇಖಗೊಂಡಿದೆ. ಆದುದರಿಂದ ವಾದ ಮಾನ್ಯ ಮಾಡಲು ಆಗದು~ ಎಂದು ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

`ಇದೇ ಆರೋಪದಲ್ಲಿ ಸಿಲುಕಿರುವ ಇನ್ನೊಬ್ಬ ಆರೋಪಿ ಮೆಹಫೂಜ್ ಅಲಿಖಾನ್ ನಾಪತ್ತೆಯಾಗಿದ್ದ. ಆತನ ಬಗ್ಗೆ ಮಾಹಿತಿ ನೀಡುವ ಸಂಬಂಧ ರೆಡ್ಡಿ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಇದು ಕಾನೂನು ಬಾಹಿರ~ ಎಂದು ರೆಡ್ಡಿ ಪರ ವಕೀಲರು ವಾದಿಸಿದ್ದರು.

ಈ ವಾದವನ್ನೂ ನ್ಯಾಯಮೂರ್ತಿಗಳು ಪುರಸ್ಕರಿಸಲಿಲ್ಲ. `ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವಿವಾದ ಇದಾಗಿದೆ. ಅದಿರು ಗಣಿಗಾರಿಕೆ ಯಾವ ಪ್ರದೇಶದಲ್ಲಿ ನಡೆದಿದೆ, ಅದನ್ನು ಎಲ್ಲಿ ಶೇಖರಿಸಿ ಇಡಲಾಗಿದೆ ಎಂಬ ಬಗ್ಗೆ ತಿಳಿದುಕೊಳ್ಳುವ ಅಧಿಕಾರ ಪೊಲೀಸರಿಗೆ ಇದೆ. ಈ ರೀತಿಯ ಆರೋಪಗಳು ಇರುವ ಸಂದರ್ಭದಲ್ಲಿ ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆಯ 164ನೇ ಕಲಮಿನ ಅನ್ವಯ ಸಾಕ್ಷ್ಯಗಳನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುವ ಅಧಿಕಾರ ಪೊಲೀಸರಿಗೆ ಇದೆ. ಅದು ಕಾನೂನು ಬಾಹಿರ ಎನ್ನಲಾಗದು~ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಸಿಬಿಐ ವಿಶೇಷ ಕೋರ್ಟ್ ಆದೇಶಕ್ಕೆ ತಡೆ ನೀಡಲು ನ್ಯಾಯಮೂರ್ತಿಗಳು ಈ ಹಿಂದೆ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ರೆಡ್ಡಿ ಅವರು , ಈಗಾಗಲೇ 12ರಂದು ಪೊಲೀಸ್ ತನಿಖೆಗೆ ಹಾಜರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.