ಬುಧವಾರ, ಆಗಸ್ಟ್ 5, 2020
27 °C

ಜಪಾನ್‌ನಲ್ಲಿ ಬೃಹತ್ ರ‌್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಪಾನ್‌ನಲ್ಲಿ ಬೃಹತ್ ರ‌್ಯಾಲಿ

ಟೋಕಿಯೊ (ಎಪಿ ವರದಿ): ಅಣು ಶಕ್ತಿ ಬಳಕೆಯನ್ನು ವಿರೋಧಿಸಿ ಜಪಾನಿಯರು ಶನಿವಾರ ಟೋಕಿಯೊದಲ್ಲಿ ಬೃಹತ್ ರ್ಯಾಲಿ ನಡೆಸಿದರು. ಪ್ರಕೃತಿ ವಿಕೋಪ ದುರಂತ ಸಂಭವಿಸಿ ಮೂರು ತಿಂಗಳು ಕಳೆದ ಕಾರಣ ಈ ರ‌ಯಾಲಿಯನ್ನು ಆಯೋಜಿಸಲಾಗಿತ್ತು.ಮಾಸ್ಕೊ ವರದಿ:
ಜಪಾನ್‌ನಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಮೂರು ತಿಂಗಳು ಕಳೆದರೂ 90 ಸಾವಿರಕ್ಕೂ ಹೆಚ್ಚು ಸಂತ್ರಸ್ತರು ಇನ್ನೂ ನಿರಾಶ್ರಿತರ ಶಿಬಿರದಲ್ಲಿಯೇ ಇದ್ದಾರೆ ಎಂದು ಎನ್‌ಎಚ್‌ಕೆ ವಾಹಿನಿ ಶನಿವಾರ ವರದಿ ಮಾಡಿದೆ.ಸ್ಥಳಾಂತರಿಸಲಾದ ಸಂತ್ರಸ್ತರಿಗಾಗಿ 28 ಸಾವಿರ ತಾತ್ಕಾಲಿಕ ಮನೆ ನಿರ್ಮಿಸಲಾಗಿದೆ. ಇನ್ನು 52 ಸಾವಿರ ಮನೆ ನಿರ್ಮಿಸಲು ಜಪಾನ್ ಸರ್ಕಾರ ಯೋಜನೆ ರೂಪಿಸಿದೆ. ಆದರೆ. ಅನೇಕರು ಅಲ್ಲಿಗೆ ಹೋಗಲು ನಿರಾಕರಿಸುತ್ತಿದ್ದಾರೆ. ಜಪಾನ್ ಭೂಕಂಪ ಮತ್ತು ಸುನಾಮಿಯಿಂದ 15,405 ಮಂದಿ ಅಸುನೀಗಿದ್ದಾರೆ. 8,095 ಮಂದಿ ಕಣ್ಮರೆಯಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.