ಜಲಮಂಡಳಿ ಸ್ಪಷ್ಟೀಕರಣ

ಸೋಮವಾರ, ಮೇ 27, 2019
33 °C

ಜಲಮಂಡಳಿ ಸ್ಪಷ್ಟೀಕರಣ

Published:
Updated:

* `ಕ್ಯಾಸಲ್ ಬೀದಿಯಲ್ಲಿ ಮತ್ತೆ ಕಲುಷಿತ ನೀರು~ ಎಂಬ ದೂರು.

ಸದರಿ ಸ್ಥಳದಲ್ಲಿ ಕೊಳವೆ ಮಾರ್ಗದಲ್ಲಿ ಚರಂಡಿ ನೀರು ಹರಿದು ಕಲುಷಿತಗೊಳ್ಳುತ್ತಿದ್ದನ್ನು ಗಮನಿಸಿ ಸದರಿ ಕೊಳವೆ ಮಾರ್ಗವನ್ನು ಬದಲಾಯಿಸಲಾಗಿದೆ. ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಶುದ್ಧ ನೀರನ್ನು ಸರಬರಾಜು ಮಾಡಲಾಗುತ್ತಿದೆ.* `ಎಲ್ಲೆಲ್ಲೂ ರಸ್ತೆ ಅಗೆತ ಇದು ವಸಂತನಗರ~ ಎಂಬ ಆಕ್ಷೇಪ.

ಮಿಲ್ಲರ್ ರಸ್ತೆ, ವಸಂತನಗರ, ಹಾಗೂ ಜಸ್ಮಾಭವನ ಪ್ರದೇಶವನ್ನು ಜಲಮಂಡಲಿಯ ಎಂಜಿನಿಯರ್ ಪರಿಶೀಲಿಸಿದ್ದಾರೆ. ಸದರಿ ಸ್ಥಳದಲ್ಲಿ ಮಂಡಲಿಯ ವತಿಯಿಂದ ಹೊಸದಾಗಿ ಕೊಳವೆ ಮಾರ್ಗವನ್ನು ಅಳವಡಿಸುವ ಕಾಮಗಾರಿ ಕೆಲಸ ಪೂರ್ಣಗೊಂಡಿದ್ದು, ರಸ್ತೆಯನ್ನು ಯಥಾಸ್ಥಿತಿಗೆ ತರಲಾಗಿರುತ್ತದೆ. ಆದರೆ ಬಿಬಿಎಂಪಿ ವತಿಯಿಂದ ಡಾಂಬರೀಕರಣ ಕೆಲಸ ಬಾಕಿ ಇರುತ್ತದೆ.* `ನೀರಿಲ್ಲ ಸ್ವಾಮಿ~ ಎಂಬ ಆಕ್ಷೇಪ.

ವಿಲ್ಸನ್ ಗಾರ್ಡನ್‌ನ ಚಿನ್ನಯ್ಯನ ಪಾಳ್ಯ ಪ್ರದೇಶವನ್ನು ಜಲಮಂಡಲಿಯ ಎಂಜಿನಿಯರ್ ಪರಿಶೀಲಿಸ್ದ್ದಿದಾರೆ. ಸದರಿ ಸ್ಥಳದಲ್ಲಿ ಕೊಳವೆ ಮಾರ್ಗದಲ್ಲಿ ನೀರು ಸರಾಗವಾಗಿ ಹರಿಯದೆ ಅಡಚಣೆ ಉಂಟಾಗಿತ್ತು. ಮಂಡಲಿಯ ವತಿಯಿಂದ ಕೊಳವೆ ಮಾರ್ಗ ಸ್ವಚ್ಛತೆ ಕಾಮಗಾರಿ ಕೈಗೊಳ್ಳಲಾಗಿದೆ. ಅಲ್ಲಿ ಈಗ ಸಮರ್ಪಕವಾಗಿ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry