ಬೆಂಗಳೂರು: `ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಶೇ 4ರಷ್ಟು ಆದಾಯ ಜವಳಿ ಉದ್ಯಮದಿಂದಲೇ ಬರುತ್ತದೆ. ಜವಳಿ ಉದ್ಯಮವನ್ನು ಕಡೆಗಣಿಸಿದರೆ, ಮುಂದೆ ದೇಶ ಗಂಭೀರಪರಿಸ್ಥಿತಿ ಎದುರಿಸಬೇಕಾಗುತ್ತದೆ' ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಲಿ ಎಚ್ಚರಿಸಿದರು.

ಟೆಕ್ಸ್ಟೈಲ್ ಕೋ ಆಪರೇಟಿವ್ ಬ್ಯಾಂಕ್ ನಗರದ ಶಿಕ್ಷಕರ ಸದನದಲ್ಲಿ ಭಾನುವಾರ ಆಯೋಜಿಸಿದ್ದ `ಬ್ಯಾಂಕ್ನ ಸುವರ್ಣ ಮಹೋತ್ಸವ ಸಮಾರಂಭ'ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ದೇಶದ ಉತ್ಪಾದನೆಯಲ್ಲಿ ಕೃಷಿ ನಂತರದ ಸ್ಥಾನವನ್ನು ನೇಕಾರಿಕೆ ಉದ್ಯಮ ಪಡೆದುಕೊಂಡಿದೆ. ಈ ಉದ್ಯಮವನ್ನು ನಿರ್ಲಕ್ಷಿಸದೆ ಇದರ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ಪರಿವರ್ತನೆ ಮಾಡುವಂತಹ ಶಕ್ತಿಯನ್ನು ಈ ಉದ್ಯಮ ಪಡೆದಿದೆ' ಎಂದರು.

`ಎಲ್ಲ ಹಿಂದುಳಿದ ಶಕ್ತಿಗಳ ಕ್ರೋಡೀಕರಣದಿಂದ ದೇಶ ಪ್ರಗತಿ ಹೊಂದಲು ಸಾಧ್ಯ. ಆದ್ದರಿಂದ, ಎಲ್ಲ ಹಿಂದುಳಿದ ವರ್ಗಗಳು ರಾಜಕೀಯವಾಗಿ, ಸಾಮಾಜಿಕವಾಗಿ ಸಂಘಟಿತವಾಗಬೇಕು. ನೇಕಾರಿಕೆ ಉದ್ಯಮಕ್ಕಾಗಿ ರಾಜ್ಯ ಸರ್ಕಾರ ಆದ್ಯತಾ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಬೇಕು. ಅದಕ್ಕೆ ಕೇಂದ್ರ ಸರ್ಕಾರ ಸಹಾಯ ಸಹಕಾರವನ್ನು ನೀಡುತ್ತದೆ' ಎಂದು ಭರವಸೆ ನೀಡಿದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, `ರಾಜ್ಯದಲ್ಲಿ ರೈತರ ನಾಯಕತ್ವದ ನಂತರ ನೇಕಾರಿಕೆ ನಾಯಕತ್ವ ಬರಬೇಕಿತ್ತು. ಆದರೆ, ರಾಜಕೀಯವಾಗಿ ಸಂಘಟನೆಯಾಗದ ನೇಕಾರರು ಅವರ ನಾಯಕತ್ವ ಪಡೆಯಲಾಗಿಲ್ಲ' ಎಂದರು.

`ನೇಕಾರರು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಸಂಘಟನೆಯಾಗಿದ್ದಾರೆ. ಆದರೆ, ರಾಜಕೀಯವಾಗಿ ಸಂಘಟನೆಯಾಗಲು ಈವರೆಗೂ ಸಾಧ್ಯವಾಗಿಲ್ಲ. ಅವರು ರಾಜಕೀಯವಾಗಿಯೂ ಸಂಘಟನೆಯಾಗಬೇಕಾದ ಅಗತ್ಯವಿದೆ' ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, `ನೇಕಾರಿಕೆ ನಮ್ಮ ದೇಶದ ಪ್ರಾಚೀನ ವೃತ್ತಿಯಾಗಿದೆ. ಈಗಿನ ಆಧುನಿಕ ಕಾಲದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ನೇಕಾರಿಕೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಅಗತ್ಯ ಪ್ರೋತ್ಸಾಹ ನೀಡಲು ಸರ್ಕಾರ ಬದ್ಧವಾಗಿದೆ' ಎಂದರು.

`ಇಂದಿನ ಆಧುನಿಕ ತಂತ್ರಜ್ಞಾನಗಳಿಂದ ನೇಕಾರಿಕೆ ವೃತ್ತಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ, ಈ ಆಧುನಿಕ ತಂತ್ರಜ್ಞಾನಗಳನ್ನು ನೇಕಾರಿಕೆ ವೃತ್ತಿಗೆ ಬಳಸಿಕೊಳ್ಳುವುದರ ಕುರಿತು ಚಿಂತನೆ ನಡೆಸಬೇಕು' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.