ಮಂಗಳವಾರ, ಮೇ 17, 2022
24 °C

ಜಾತಿವಾರು ಸಮೀಕ್ಷೆ ಅತ್ಯಗತ್ಯ

-ಡಾ.ಡಿ.ಎ. ಶಂಕರ್,ಮೈಸೂರು Updated:

ಅಕ್ಷರ ಗಾತ್ರ : | |

ಕೆಲವು ತಿಂಗಳುಗಳ ಹಿಂದೆ ಜಾತಿವಾರು ಸಮೀಕ್ಷೆಯ ವಿಷಯ ಪ್ರಸ್ತಾಪವಾಗಿತ್ತು. ಆ ಸಮಯದಲ್ಲಿ ಜಾತಿವಾರು ಸಮೀಕ್ಷೆಯನ್ನು ಸಮರ್ಥಿಸಿ ನಾನು `ಪ್ರಜಾವಾಣಿ' ವಾಚಕರವಾಣಿ ವಿಭಾಗಕ್ಕೆ ಪತ್ರ ಬರೆದಿದ್ದೆ. ಇದನ್ನು ಬರೆದ ತರುಣದಲ್ಲೇ ನನ್ನ ಆರ್ಥಿಕತಜ್ಞ ಮಿತ್ರರು, ಅಭಿವೃದ್ಧಿತಜ್ಞ ಮಿತ್ರರು, `ಸ್ವಾಮಿ, ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿಲ್ಲ.ಈ ಜಾತಿವಾರು ಸಮೀಕ್ಷೆಯ ಸಂಗತಿ ಸೂಕ್ಷ್ಮಾತಿಸೂಕ್ಷ್ಮವಾದದ್ದು. ಅಗಾಧವಾದ ಸಂಕೀರ್ಣತೆಯನ್ನು ಹೊಂದಿರುವಂಥದು. ಸಮೀಕ್ಷೆಯ ನಂತರ ದೊರೆಯುವ ಅಂಕಿಅಂಶಗಳು ನಿಖರವಾಗಿರುವ ಸಾಧ್ಯತೆ ಬಲು ಕಮ್ಮಿ. ಏಕೆಂದರೆ ಹಲವಾರು ಜಾತಿ ಹಾಗೂ ಸಾಮಾಜಿಕ ಕಾರಣಗಳಿಂದ ಅನೇಕರು ತಮ್ಮ ಮನಸ್ಸಿಗೆ ಸಮಾಧಾನ ಕೊಡುವ, ಹೆಮ್ಮೆಯನ್ನು ಹೆಚ್ಚಿಸುವ ಅಥವಾ ಸಂಖ್ಯಾಬಲ ಹೆಚ್ಚಿಸುವ ಪಂಗಡಗಳ ಹೆಸರು ಕೊಡುವ ಸಾಧ್ಯತೆ ಅಪಾರವಾಗಿದೆ.ಈ ಸಮೀಕ್ಷೆ ಸುಲಭವಲ್ಲ, ಅನೇಕ ತೊಡಕುಗಳಿಗೆ ಅದೇ ಕಾರಣವಾಗಬಲ್ಲದು' ಎಂದಿದ್ದರು. ಬಹುಶಃ ಇದು ಸರಿ. ಅವರ ಅನುಮಾನಗಳು, ಆತಂಕಗಳೂ ನಿಜವೇ ಇರಬಹುದು. ಆದರೆ ಸಮಸ್ಯೆಯ ಗುಮ್ಮಕ್ಕೆ ಹೆದರಿ ಸಮಸ್ಯೆಯಿಂದ ಓಡಿಹೋಗಬಾರದು. ಸಮೀಕ್ಷೆ ನಡೆಯಲಿ, ವಾಸ್ತವ ತಿಳಿಯಲಿ; ವಾಸ್ತವದ ಚರ್ಚೆ ಮುಕ್ತವಾಗಿ ನಡೆಯಲಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.