ಧಾರವಾಡ: ವೀರ ಶೈವ ಲಿಂಗಾಯತ ಸಮುದಾಯ ಯಾವುದೇ ಒಂದು ಪಕ್ಷಕ್ಕೆ ಸೇರಿಲ್ಲ. ಜಾತಿಯ ಹೆಸರು ಹೇಳಿ ಕೊಂಡು ರಾಜಕಾರಣ ಮಾಡುವ ರಾಜ ಕಾರಣಿಗಳ ನಿಲುವನ್ನು ಮಹಾಸಭಾ ವಿರೋಧ ಮಾಡುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾ ಸಭಾದ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಮಹಾಸಭಾ ಬಿಜೆಪಿ ಅಥವಾ ಕಾಂಗ್ರೆಸ್ಸಿನ ಸ್ವತ್ತಲ್ಲ. ಮಹಾಸಭಾ ಕೋಮುರಹಿತ ರಾಷ್ಟ್ರೀಯ ಸಂಘಟನೆ ಯಾಗಿಯೇ ಗುರುತಿಸಲ್ಪಡುತ್ತದೆ. ಒಂದೊಮ್ಮೆ ಯಾರಾದರೂ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದರೆ ಅದು ದ್ರೋಹ ಬಗೆದಂತೆ ಎಂದರು.

ಯಡಿಯೂರಪ್ಪ, ಜಗದೀಶ ಶೆಟ್ಟರ ಅವರು ಲಿಂಗಾಯತ ಜಾತಿಯ ಬಲ ದಿಂದಲೇ ರಾಜಕಾರಣ ಮಾಡುತ್ತಿ ದ್ದಾರಲ್ಲ ಎಂಬ ಪತ್ರಕರ್ತರ ಮಾತಿಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದ ಖಂಡ್ರೆ, ನೂರಾರು ವರ್ಷಗಳ ಕಾಲ ಸಾಧು- ಸತ್ಪುರುಷರು ಮಹಾಸಭಾವನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಅವರು ತಿಸಿದರು.

ಅವರು ಬಿಟ್ಟು ಹೋದ ಕೆಲಸವನ್ನು ಮಾಡಲು ಮಹಾಸಭಾ ಇದೆಯೇ ಹೊರತು ಯಾವುದೇ ಪಕ್ಷದ ಪರ ವಕಾಲತ್ತು ವಹಿಸಲು ಅಲ್ಲ ಎಂದು ಹೇಳಿದರು.

ಶ್ಯಾಮನೂರಗೆ ಗೆಲುವು: ವೀರಶೈವ ಮಹಾಸಭಾದ ಕೇಂದ್ರ ಸಮಿತಿಗೆ ನಡೆದ ಚುನಾವಣೆಯಲ್ಲಿ ರಾಜ್ಯದ 25 ಸ್ಥಾನ ಗಳಲ್ಲಿ ಈಗಾಗಲೇ 19 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಉಳಿದ ಆರು ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮಹಾಸಭಾದ ಅಧ್ಯಕ್ಷರಾಗಿ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರು ಅವಿರೋಧವಾಗಿ ಆಯೆ ್ಕಯಾಗಲಿದ್ದಾರೆ.

ದೇಶದಾದ್ಯಂತ ಇರುವ 10 ಸಾವಿರ ಮತ ದಾರರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಅವರು ಶಿವ ಶಂಕರಪ್ಪ ಅವರನ್ನು ಆಯ್ಕೆ ಮಾಡು ವುದಾಗಿ ಭರವಸೆ ನೀಡಿದ್ದಾರೆ ಎಂದರು.

ಅವಿರೋಧ ಆಯ್ಕೆಯಿಂದ ಲಿಂಗಾ ಯತರು ಒಗ್ಗಟ್ಟಾಗಿದ್ದಾರೆ ಎಂಬ ಸಂದೇಶ ಇತರರಿಗೆ ಹೋಗುತ್ತದೆ. ಮುಸ್ಲಿಮರಿಗೆ ಮೆಕ್ಕಾ, ಕ್ರಿಶ್ಚಿಯನ್ನರಿಗೆ ಜೆರುಸಲೇಂ, ಸಿಖ್ಖರಿಗೆ ಸ್ವರ್ಣಮಂದಿರ ಇದ್ದಂತೆ ಲಿಂಗಾಯತರಿಗೆ ಬಸವ ಕಲ್ಯಾಣವನ್ನು ಪವಿತ್ರ ಸ್ಥಳವನ್ನಾಗಿ ಮಾಡುವುದು ನಮ್ಮ ಉದ್ದೇಶ ಎಂದರು.

ನೂತನ ರಾಜ್ಯ ಅಧ್ಯಕ್ಷ ಎನ್. ತಿಪ್ಪಣ್ಣ, ಡಾ.ಎಸ್.ಆರ್. ರಾಮನ ಗೌಡರ, ಗುರುರಾಜ ಹುಣಸಿಮರದ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.