ಗುರುವಾರ , ಮೇ 13, 2021
35 °C

ಜಿಡಿಪಿ ಶೇ 7.5ಕ್ಕೆ ಇಳಿಕೆ: ಮೂಡೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಜಾಗತಿಕ ಮೌಲ್ಯಮಾಪನ ಸಂಸ್ಥೆ `ಮೂಡೀಸ್~ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ)  ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಶೇ 7.5 ಮತ್ತು ಶೇ 8ರ ನಡುವೆ ಇರಲಿದೆ ಎಂದು ಹೇಳಿದೆ.ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ದುಬಾರಿ ಬಡ್ಡಿ ದರಗಳಿಂದ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಅಂದಾಜಿಸಿರುವ `ಜಿಡಿಪಿ~ ಮಟ್ಟ ತಲುಪಲು ಸಾಧ್ಯವಿಲ್ಲ. ಆದರೆ, ದೇಶದ ಸಾಲ ಯೋಗ್ಯತೆ ಮಟ್ಟಕ್ಕೆ ಈ ಸಂಗತಿಗಳು ಯಾವುದೇ ಪರಿಣಾಮ  ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.ಭಾರತೀಯ ರಿಸರ್ವ್ ಬ್ಯಾಂಕ್ ನಿರಂತರವಾಗಿ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಿರುವುದು ವೃದ್ಧಿ ದರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಜಾಗತಿಕ ಆರ್ಥಿಕ ಅಸ್ಥಿರತೆ ಮುಂದುವರೆದಿರುವ ಸಂದರ್ಭದಲ್ಲಿ ಈ ಮೊದಲು ಅಂದಾಜಿಸಿರುವ ವೃದ್ಧಿ ದರದ ಗುರಿ ಶೇ 8ನ್ನು ತಲುಪುವುದು ಕಷ್ಟ ಎಂದು ಹೇಳಿದೆ.2010-11ನೇ ಸಾಲಿನಲ್ಲಿ ದೇಶದ ವೃದ್ಧಿ ದರ ಶೇ 8.5ರಷ್ಟಿತ್ತು. ಆದರೆ, ಈ ಬಾರಿ ಸರ್ಕಾರ ಮತ್ತು `ಆರ್‌ಬಿಐ~ ಅಂದಾಜಿಸಿರುವ ಮಟ್ಟಕ್ಕಿಂತ ವೃದ್ಧಿ ದರ ಕಡಿಮೆ ಇರಲಿದೆ ಎಂದು `ಮೂಡೀಸ್~ ಹೇಳಿದೆ.ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ವೃದ್ಧಿ ದರ ಶೇ 8.8 ರಿಂದ ಶೇ 7.8ಕ್ಕೆ ಕುಸಿದಿದೆ. ಇದು ಕಳೆದ 18 ತಿಂಗಳಲ್ಲೇ ಇದು ಗರಿಷ್ಠ ಮಟ್ಟದ ಕುಸಿತ. ವರ್ಷಾಂತ್ಯಕ್ಕೆ `ಜೆಡಿಪಿ~ ಶೇ 8ರಷ್ಟು ಇರಲಿದೆ ಎಂದು `ಆರ್‌ಬಿಐ~ ಅಂದಾಜಿಸಿದೆ. ಮಾರ್ಚ್ 2012ರ ವೇಳೆಗೆ ಆಹಾರ ಹಣದುಬ್ಬರ ದರವೂ ಗಣನೀಯವಾಗಿ ಇಳಿಕೆ ಕಾಣಲಿದ್ದು, ಶೇ 7ರಷ್ಟಾಗಲಿದೆ ಎಂದು `ಮೂಡೀಸ್~ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.