ಬೆಂಗಳೂರು: ಕರ್ನಾಟಕದ ಅಥ್ಲೀಟ್ಗಳು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 40ನೇ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಗೆಲುವಿನ ಓಟ ಮುಂದವರಿಸಿದ್ದು, ಭಾನುವಾರ 20 ವರ್ಷದೊಳಗಿನವರ ಪುರುಷರ 4x100 ರಿಲೇ ಚಿನ್ನದ ಪದಕ ಗೆದ್ದುಕೊಂಡರು. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು.

ಸಂದೇಶ್ ಕಂಬಳಿ, ಸರ್ವಜೀತ್, ಆಯುಷ್ ದೇವಾಡಿಗ ಹಾಗೂ ಪ್ರತೀಕ್ ಡಿ. ಅವರನ್ನೊಳಗೊಂಡ ಕರ್ನಾಟಕ ತಂಡವು 41.71 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಸ್ವರ್ಣದ ಪದಕ ತನ್ನದಾಗಿಸಿಕೊಂಡಿತು. ತಮಿಳುನಾಡು (41.73) ಹಾಗೂ ಪಂಜಾಬ್ (41.75) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದವು.

ಮಹಿಳೆಯರ ವಿಭಾಗದಲ್ಲಿ ನೀಲಮ್ಮ ಎಂ., ನೂಪುರ ಹೊಳ್ಳ, ರಂಜಿತ ಕೆ. ಹಾಗೂ ಶಮತ್ಮಿಕ ಜೋಯಿಸ್ ಅವರು (47.75ಸೆ.) ಬೆಳ್ಳಿ ಜಯಿಸಿದರು. 47.72ಸೆ.ಗಳಲ್ಲಿ ಗುರಿಮುಟ್ಟಿದ ಮಹಾರಾಷ್ಟ್ರ ಚಿನ್ನದ ಪದಕ ಗೆದ್ದರೆ, ಕೇರಳ (49.47ಸೆ.) ಕಂಚು ತನ್ನದಾಗಿಸಿಕೊಂಡಿತು.

16 ವರ್ಷದೊಳಗಿನ ಬಾಲಕಿಯರ 1000 ಮೀಟರ್ ಮೆಡ್ಲೆ ರಿಲೆಯಲ್ಲಿ ಮಹಾರಾಷ್ಟ್ರ (2ನಿ.17.36ಸೆ.) ಚಿನ್ನ ಗೆದ್ದರೆ, ಕರ್ನಾಟಕ (2.19.43ಸೆ.) ಬೆಳ್ಳಿ ಪದಕವನ್ನು ಹಾಗೂ ಕೇರಳ (2ನಿ.22.92ಸೆ.) ಕಂಚಿನ ಪದಕವನ್ನು ಜಯಿಸಿದವು.

18 ವರ್ಷದೊಳಗಿನ ಬಾಲಕರ ಲಾಂಗ್ಜಂಪ್ ಸ್ಪರ್ಧೆಯಲ್ಲಿ ರಾಜ್ಯದ ಮನ್ವಿತ್ ಎನ್. (7.83 ಮೀ.) ಕಂಚಿನ ಪದಕ ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.