ಗುರುವಾರ , ಮೇ 6, 2021
26 °C

ಜಿಯಾ ಆತ್ಮಹತ್ಯೆ: ಸೂರಜ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ):  ಬಾಲಿವುಡ್ ನಟಿ ಜಿಯಾಖಾನ್ ಅವರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಜಿಯಾ ಗೆಳೆಯ ಸೂರಜ್ ಪಾಂಚೊಲಿಯನ್ನು  ಸೋಮವಾರ ಬಂಧಿಸಿದ್ದು ಮಂಗಳ ವಾರ ಕೋಟ್‌ಗೆ ಹಾಜರು ಪಡಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ವಿಶ್ವಾಸ್ ನಂಗ್ರೆ ಪಾಟೀಲ ತಿಳಿಸಿದ್ದಾರೆ.`ಸೂರಜ್ ಪಾಂಚೊಲಿಯ ಲಂಪಟತನದಿಂದಾಗಿ ನನ್ನ ಹೃದಯ ಒಡೆದುಹೋಗಿದೆ' ಎಂದು ಜಿಯಾ ಖಾನ್ ಸಾಯುವ ಮುನ್ನ ಬರೆದಿಟ್ಟಿರುವ 6 ಪುಟಗಳ ಪತ್ರದಲ್ಲಿ ಉಲ್ಲೇಖಿಸಿದ್ದು ಇದರ ಅನ್ವಯ ಪಾಂಚೊಲಿಯನ್ನು ಬಂಧಿಸಲಾಗಿದೆ.`ಸೂರಜ್ ಪಾಂಚೊಲಿ ಹಾಗೂ ಆತನ ತಂದೆಯಿಂದ ನನ್ನ ಮಗಳು ಕಿರುಕುಳ ಅನುಭವಿಸಿದಳು' ಎಂದು ಜಿಯಾ ತಾಯಿ ರಬಿಯಾ ಖಾನ್ ಸೋಮವಾರ ಆರೋಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.