ಜಗಳೂರು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಆಂಧ್ರ ಮೂಲದ ಕಂಪೆನಿಯೊಂದಕ್ಕೆ ತಾಲ್ಲೂಕಿನ ಬೆಣ್ಣೆಹಳ್ಳಿ ಸಮೀಪ ಗೋಮಾಳದ ಜಮೀನನ್ನು ಕಲ್ಲು ಗಣಿಗಾರಿಕೆ ಉದ್ದೇಶಕ್ಕೆ ನೀಡಿರುವ ಜಿಲ್ಲಾಡಳಿತದ ಕ್ರಮ ಜನವಿರೋಧಿಯಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಗೋಪಾಲ್ ಆರೋಪಿಸಿದರು..

ತಾಲ್ಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ಗುರುವಾರ ಕಿಸಾನ್ ಸಭಾ ಶಾಖೆ ಉದ್ಘಾಟನೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೀರಭೂಮಿ ಘೋಷಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ 13 ವಿಸ್ತರಣೆಗೆ ಸಾವಿರಾರು ಕೋಟಿ ರೂಪಾಯಿಗೆ ಗುತ್ತಿಗೆ ಪಡೆದ ಕಂಪನಿಗೆ ರಸ್ತೆ ನಿರ್ಮಾಣದ ನೆಪದಲ್ಲಿ ಕಲ್ಲುಗಣಿಗಾರಿಕೆ ಕೈಗೊಳ್ಳಲು ಗೋಮಾಳದ 10 ಎಕರೆ ಜಮೀನು ಮಂಜೂರು ಮಾಡಿರುವುದು ಸರಿಯಲ್ಲ. ರಸ್ತೆ ಗುತ್ತಿಗೆ ಪಡೆದವರು ಜಲ್ಲಿಕಲ್ಲನ್ನು ಎಲ್ಲಿಂದಾದರೂ ತಂದು ಕಾಮಗಾರಿ ಮಾಡಲಿ ಅದು ಅವರ ಜವಾಬ್ದಾರಿ. ಸಾವಿರಾರು ಜಾನುವಾರುಗಳು ಆಶ್ರಯಿಸಿರುವ ಗೋಮಾಳ ಭೂಮಿಯನ್ನು ಗುತ್ತಿಗೆದಾರರಿಗೆ ನೀಡುವುದು ಕಾನೂನು ಬಾಹಿರ ಎಂದು ಆರೋಪಿಸಿದರು.

ಬಂಡವಾಳಶಾಹಿ ಕಂಪನಿಗಳು ರಸ್ತೆ ನಿರ್ಮಾಣದ ನಂತರ 25 ವರ್ಷಗಳವರೆಗೂ ಟೋಲ್ ಶುಲ್ಕ ವಸೂಲಿ ಮಾಡುತ್ತಾ ಪ್ರಯಾಣಿಕರನ್ನು ಶೋಷಿಸುತ್ತಿವೆ. ಇಂತಹ ವಸೂಲಿ ಕಂಪನಿಗಳ ಪರವಾಗಿ ಸರ್ಕಾರದ ನೀತಿಗಳನ್ನು ರೂಪಿಸಲಾಗಿದೆ. ಇಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡುವುದರಿಂದ ಅಂತರ್ಜಲ ಮೂಲಗಳು ಬತ್ತಿ ರೈತರ ಪಂಪ್ಸೆಟ್ಗಳು ಬರಿದಾಗುವ ಅಪಾಯ ಇದೆ. ರೈತರು ಕೃಷಿಯನ್ನು ಕೈಬಿಟ್ಟು ಗುಳೆ ಹೋಗುವ ಸ್ಥಿತಿ ಎದುರಾಗಲಿದೆ ಎಂದು ಗೋಪಾಲ್ ಆತಂಕ ವ್ಯಕ್ತಪಡಿಸಿದರು.

ಎಐಟಿಯುಸಿ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಸರ್ಕಾರದ ಭೂಮಿಯನ್ನು ಗಣಿಗಾರಿಕೆ ಉದ್ದೇಶಕ್ಕೆ ನೀಡುವ ಸಂದರ್ಭದಲ್ಲಿ ಗ್ರಾಮಸ್ಥರ ಅಭಿಪ್ರಾಯ ಪಡೆಯವುದು ಕಡ್ಡಾಯ ನಿಯಮ. ಆದರೆ ಬೆಣ್ಣೆಹಳ್ಳಿಯಲ್ಲಿ ಯಾವುದೇ ಗ್ರಾಮಸಭೆಗಳನ್ನು ನಡೆಸದೆ ಅಧಿಕಾರಿಗಳು ಕಾನೂನು ಉಲ್ಲಂಘಿಸಿದ್ದಾರೆ. ಕಾನೂನುಬಾಹಿರವಾಗಿ ನೀಡಿರುವ ಭೂಮಿಯ ಗುತ್ತಿಗೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕಿಸಾನ್ ಸಭಾ ಮುಖಂಡರಾದ ಹೊಸಳ್ಳಿ ಮಲ್ಲೇಶ್, ಆವರಗೆರೆ ಉಮೇಶ್, ಎಂ. ಚಂದ್ರಣ್ಣ, ಪ್ರಸನ್ನಕುಮಾರ್, ನಿಜಲಿಂಗಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.