ಶನಿವಾರ, ಮೇ 8, 2021
19 °C

ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಶಿರುಗುಪ್ಪ ಸಕ್ಕರೆ ಕಾರ್ಖಾ ನೆಯ ಮಾಲೀಕರಿಂದ ಕಬ್ಬು ಬೆಳೆಗಾರ ರಿಗೆ ಮತ್ತು ಕಾರ್ಮಿಕರಿಗೆ ಪರಿಹಾರ ಧನ ಒದಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ  ಸದಸ್ಯರು ಹಾಗೂ ಕಾರ್ಮಿಕರು ಸೋಮ ವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.



ಪರಿಹಾರ ಧನ ಶೀಘ್ರ ದೊರಕಿಸುವ ಬಗ್ಗೆ ಖಚಿತ ಭರವಸೆ ನೀಡುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ರೈತರು ಸುಮಾರು ಐದು ಗಂಟೆಗೂ ಹೆಚ್ಚು ಕಾಲದವರೆಗೆ ಪ್ರತಿ ಭಟನೆ ನಡೆಸಿದರು. ಜಿಲ್ಲಾಧಿ ಕಾರಿ ಪ್ರತಿಭಟನಾ ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೆ ಪ್ರತಿಭಟನೆ ಮುಂದು ವರೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.



ರೈತ ಮುಖಂಡ ಎನ್.ವೆಂಕಟರೆಡ್ಡಿ, `ಶಿರುಗುಪ್ಪ ಸಕ್ಕರೆ ಕಾರ್ಖಾನೆ ಮಾಲೀ ಕರು ಬಡ್ಡಿ ಸಮೇತ ಬಾಕಿ ಹಣವನ್ನು ಕಬ್ಬು ಬೆಳೆಗಾರರಿಗೆ ಮತ್ತು ಕಾರ್ಮಿ ಕರಿಗೆ ನೀಡಬೇಕು ಎಂದು ಹದಿಮೂರು ವರ್ಷಗಳಿಂದ ಹೋರಾಟ ನಡೆಸು ತ್ತಿದ್ದರೂ ಸರ್ಕಾರ ಮಾತ್ರ ಈ ವಿಷಯ ವನ್ನು ಗಂಭೀರವಾಗಿ ಪರಿಗಣಿಸಿಲ್ಲ. ರೈತರು ಮತ್ತು ಕಾರ್ಮಿಕರ ಸಮಸ್ಯೆ ಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಪರಿ ಹಾರ ಧನ ಸಿಗದೇ ರೈತರು ಕಂಗಾ ಲಾ ಗಿದ್ದು, ಸಂಕಷ್ಟದಿಂದ ಜೀವನ ನಡೆಸು ತ್ತಿದ್ದಾರೆ~ ಎಂದರು.



`ಕಾರ್ಖಾನೆಯ ಮಾಲೀಕರು ಕಬ್ಬು ಬೆಳೆಗಾರರಿಗೆ ಬಡ್ಡಿ ಸಮೇತ 6.41 ಕೋಟಿ ರೂಪಾಯಿ ಮತ್ತು ಕಾರ್ಮಿ ಕರಿಗೆ 12.54 ಕೋಟಿ ರೂಪಾಯಿ ನೀಡ ಬೇಕಿದ್ದು, ಹಣ ನೀಡಲು ಬೇರೆ ಬೇರೆ ನೆಪಗಳನ್ನು ಒಡ್ಡಲಾಗುತ್ತಿದೆ.

13 ವರ್ಷಗಳ ಹಿಂದೆಯೇ ಪಾವತಿಸ ಬಹುದಾಗಿದ್ದ ಹಣವನ್ನು ಈವರೆಗೆ ನೀಡಿಲ್ಲ. ಕರ್ನಾಟಕ ಮತ್ತು ಮಹಾ ರಾಷ್ಟ್ರದ ಇತರ ಭಾಗಗಳಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಖರೀದಿಸುತ್ತಿರುವ ಮಾಲೀಕರು ಕಬ್ಬು ಬೆಳೆಗಾರರಿಗೆ ಮತ್ತು ಕಾರ್ಮಿಕರಿಗೆ ಹಣ ನೀಡಲು ನಿರ್ಲಕ್ಷ್ಯ ತೋರುತ್ತಿದ್ದಾರೆ~ ಎಂದು ಆರೋಪಿಸಿದರು.



`ಅಸಲು ಪಾವತಿಸಿರುವ ಮಾಲೀಕರು ಬಡ್ಡಿಹಣವನ್ನು ನೀಡಲು ಇಲ್ಲಸಲ್ಲದ ನೆಪಗಳನ್ನು ಹೇಳುತ್ತಿದ್ದಾರೆ. ಬಡ್ಡಿ ಮನ್ನಾ ಮಾಡುವಂತೆ ಶಾಸಕರ ಮತ್ತು ಪ್ರಭಾವಿ ಸಚಿವರ ಮೂಲಕ ಮುಖ್ಯ ಮಂತ್ರಿಗೆ ಒತ್ತಡ ಹೇರುತ್ತಿದ್ದಾರೆ. ಬೇರೆ ಬೇರೆ ಕಡೆ ಕಾರ್ಖನೆಗಳನ್ನು ಖರೀದಿ ಸಲು ಭಾರಿ ಪ್ರಮಾಣದಲ್ಲಿ ಹಣ ಹೊಂದಿರುವ ಮಾಲೀಕರು ಕಬ್ಬು ಬೆಳೆಗಾರರಿಗೆ ಮತ್ತು ಕಾರ್ಮಿಕರಿಗೆ ಹಣ ನೀಡಲು ಯಾಕೆ ನಿರಾಸಕ್ತಿ ತೋರು ತ್ತಿದ್ದಾರೆ? ವರ್ಷಗಳಿಂದ ಹೋರಾಟ ಮಾಡುತ್ತಿರುವ ರೈತರ ಮತ್ತು ಕಾರ್ಮಿಕರ ಸಹನೆಯನ್ನು ಸರ್ಕಾರ ಪರೀಕ್ಷಿಸುತ್ತಿದೆ. ಸರ್ಕಾರ ಸಮಸ್ಯೆ ಪರಿಹರಿಸದಿದ್ದಲ್ಲಿ, ಮುಂದಿನ ದಿನ ಗಳಲ್ಲಿ ಉಗ್ರ  ಹೋರಾಟ ನಡೆಸಲಾಗುವುದು~ ಎಂದು ಅವರು ಎಚ್ಚರಿಕೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.