ರಾಯ್ಪುರ/ನವದೆಹಲಿ (ಪಿಟಿಐ): ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಬಿಡುಗಡೆಗೆ ನಕ್ಸಲರು ಬೇಡಿಕೆ ಮುಂದಿಟ್ಟಿರುವ ಹಿನ್ನೆಲೆಯಲ್ಲಿ ಛತ್ತೀಸ್ಗಡ ಸರ್ಕಾರ ಬಸ್ತರ್ ವಲಯದಲ್ಲಿ ಮಾವೊವಾದಿಗಳ ವಿರುದ್ಧ ಕಾರ್ಯಾಚರಣೆಯನ್ನು ಸೋಮವಾರ ಸ್ಥಗಿತ ಮಾಡಿದೆ. ಜೊತೆಗೆ ಪರಿಸ್ಥಿತಿ ಅವಲೋಕನ ಮತ್ತು ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿದೆ.

ಮೆನನ್ ಅವರ ಬಿಡುಗಡೆ ಆಗುವವರೆಗೂ ಬಸ್ತರ್ ವಲಯದಲ್ಲಿ ಕಾರ್ಯಾಚರಣೆಗೆ ತೊಡಗದಂತೆ ಭದ್ರತಾ ಪಡೆಗಳನ್ನು ರಾಜ್ಯ ಸರ್ಕಾರ ವಿನಂತಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.ಮೆನನ್ ಅವರನ್ನು ಛತ್ತೀಸ್ಗಡ- ಒಡಿಶಾ ಗಡಿ ಪ್ರದೇಶದಲ್ಲಿ ಸುಮಾರು 400 ಸಶಸ್ತ್ರ ನಕ್ಸಲರ ಕಾವಲಿನಲ್ಲಿ ಇರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಮಾನವ ರಹಿತ ವೈಮಾನಿಕ ಗಸ್ತು ವಾಹನವು ಜಿಲ್ಲಾಧಿಕಾರಿಗಳನ್ನು ಇರಿಸಿರುವ ಸ್ಥಳದ ಚಿತ್ರಗಳನ್ನು ಸೆರೆಹಿಡಿದಿದೆ ಎಂದು ತಿಳಿದುಬಂದಿದೆ.`ಮೆನನ್ ಅವರ ಸುರಕ್ಷಿತ ಬಿಡುಗಡೆಗೆ ಎಲ್ಲ ರೀತಿಯ ಮಾರ್ಗೋಪಾಯಗಳ ಕುರಿತು ಸರ್ಕಾರ ಚಿಂತಿಸುತ್ತಿದೆ. ಸರ್ವಪಕ್ಷಗಳ ಸಭೆಯನ್ನೂ ಕರೆಯಲಾಗಿದೆ. ಜೊತೆಗೆ ಕೇಂದ್ರ ಸರ್ಕಾರದೊಂದಿಗೂ ಸತತ ಸಂಪರ್ಕದಲ್ಲಿದೆ~ ಎಂದು ಮುಖ್ಯಮಂತ್ರಿ ರಮಣ್ ಸಿಂಗ್ ರಾಯ್ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

`ನೆರೆಯ ರಾಜ್ಯಗಳಿಗೆ ಕಟ್ಟೆಚ್ಚರದಿಂದಿರುವಂತೆ ಸಲಹೆ ನೀಡಲಾಗಿದ್ದು, ನಕ್ಸಲರಿಂದ ಜಿಲ್ಲಾಧಿಕಾರಿಯನ್ನು ಬಿಡಿಸಿಕೊಂಡು ಬರಲು ಅವುಗಳ ಸಹಕಾರವನ್ನು ಕೋರಲಾಗಿದೆ~ ಎಂದೂ ಅವರು ಹೇಳಿದ್ದಾರೆ.

ಈ ಮಧ್ಯೆ, ತಮ್ಮ ಪತಿ ಅಲೆಕ್ಸ್ ಪಾಲ್ ಅವರ ಸುರಕ್ಷತೆ ಬಗ್ಗೆ ಆತಂಕಗೊಂಡಿರುವ ಆಶಾ ಮೆನನ್ `ಅಪಹರಣವಾಗಿ ಎರಡು ದಿನವಾಯ್ತು. ಅವರು (ಅಲೆಕ್ಸ್ ಪಾಲ್) ಹೇಗಿದ್ದಾರೋ ಏನೋ? ಅವರನ್ನು ಚಿತ್ರೀಕರಿಸಿದ ದೃಶ್ಯ ಅಥವಾ ಅವರ ಧ್ವನಿ ಮುದ್ರಿಕೆಯನ್ನು ಅಪಹರಣಕಾರರು ಕಳುಹಿಸಿಲ್ಲ. ಸರ್ಕಾರ ಈ ಕುರಿತು ಏನಾದರೂ ಮಾಡಬೇಕು ಎಂದು ಕೋರಿದ್ದಾರೆ.

ಆಸ್ತಮದಿಂದ ಬಳಲುತ್ತಿರುವ ಮೆನನ್ ಅವರಿಗೆ ಔಷಧ ಕಳುಹಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಈ ಮಧ್ಯೆ, ನಕ್ಸಲ್ ನಿಗ್ರಹ ಪಡೆ ಮುಖ್ಯಸ್ಥರಾದ ಎಡಿಜಿಪಿ ರಾಮ್ ನಿವಾಸ್ ಜಿಲ್ಲಾಧಿಕಾರಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸುಕ್ಮಾ ಜಿಲ್ಲೆಯ ಮಜಿಪುರದಲ್ಲಿ `ಗ್ರಾಮ್ ಸೂರಜ್ ಅಭಿಯಾನ~ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರನ್ನು ನಕ್ಸಲರ ಗುಂಪು ಶನಿವಾರ ಆಪಹರಿಸಿತ್ತು.

ಐಎಎಸ್ ಅಧಿಕಾರಿಯನ್ನು ಬಿಡಬೇಕಿದ್ದರೆ ಜೈಲಿನಲ್ಲಿರುವ ಇಬ್ಬರು ಮಹಿಳೆಯರು ಸೇರಿದಂತೆ ತಮ್ಮ ಎಂಟು ಸಹಚರನ್ನು ಏ. 25ರೊಳಗೆ ಬಂಧ ಮುಕ್ತಗೊಳಿಸಬೇಕು ಮತ್ತು ತಮ್ಮ ವಿರುದ್ಧ ನಡೆಸುತ್ತಿರುವ `ಗ್ರೀನ್ ಹಂಟ್~ ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕು ಎಂಬ ಬೇಡಿಕೆಯ ಧ್ವನಿ ಮುದ್ರಿಕೆಯನ್ನು ನಕ್ಸಲರು ಭಾನುವಾರ ಸರ್ಕಾರಕ್ಕೆ ರವಾನಿಸಿದ್ದರು.

ಚಿದಂಬರಂ ನೇತೃತ್ವದಲ್ಲಿ ಸಭೆ
(ನವದೆಹಲಿ ವರದಿ): ಸುಕ್ಮಾ ಜಿಲ್ಲೆಯ ಜಿಲ್ಲಾಧಿಕಾರಿ ಅಪಹರಣ ಕುರಿತಂತೆ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಸೋಮವಾರ ನಡೆದಿದ್ದು, ನಕ್ಸಲೀಯರ ಹಾವಳಿ ಇರುವ ರಾಜ್ಯಗಳಿಗೆ ಕಟ್ಟೆಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

`ಛತ್ತೀಸ್ಗಡ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ.ರಾಜ್ಯ ಸರ್ಕಾರ ನೆರವು ಕೋರಿದರೆ ಸಹಾಯಕ್ಕೆ ಧಾವಿಸುವುದಾಗಿ ತಿಳಿಸಲಾಗಿದೆ~ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ. ಸಿಂಗ್ ತಿಳಿಸಿದ್ದಾರೆ.

ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಅಪಹರಣ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದರ ನಿಯಂತ್ರಣಕ್ಕೆ ಮತ್ತು ಇಂತಹ ಸನ್ನಿವೇಶ ನಿಭಾಯಿಸಲು ನಕ್ಸಲ್ ವಿರುದ್ಧ ಏಕರೂಪ ಕಾರ್ಯಾಚರಣೆ ಪದ್ಧತಿ (ಎಸ್ಒಪಿ) ತರಲು ಕೇಂದ್ರ ಸರ್ಕಾರ ಚಿಂತಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳ ಸಹಕಾರ ಕೋರಲು ಆಲೋಚಿಸಿದೆ.

ಪ್ರಧಾನಿಗೆ ಜಯಲಲಿತಾ ಪತ್ರ

(ಚೆನ್ನೈ ವರದಿ): ಅಲೆಕ್ಸ್ ಪಾಲ್ ಮೆನನ್ ಬಿಡುಗಡೆಗೆ ನೆರವು ನೀಡುವಂತೆ ತಮಿಳುನಾಡು ಸರ್ಕಾರವನ್ನು ಮೆನನ್ ಅವರ ಕುಟುಂಬದವರು ಕೋರಿದ್ದಾರೆ. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಜಯಲಲಿತಾ, ಪ್ರಧಾನಿ ಅವರಿಗೆ ಪತ್ರ ಬರೆದು ಸುಕ್ಮಾ ಜಿಲ್ಲಾಧಿಕಾರಿಗಳನ್ನು ನಕ್ಸಲರ ಹಿಡಿತದಿಂದ ಸುರಕ್ಷಿತವಾಗಿ ಶೀಘ್ರದಲ್ಲೇ ಬಿಡಿಸಿಕೊಂಡು ಬರುವಂತೆ ಒತ್ತಾಯಿಸಿದ್ದಾರೆ.

ಎಂಡಿಎಂಕೆ ಮುಖ್ಯಸ್ಥ ವೈಕೊ ಅಲೆಕ್ಸ್ ಪಾಲ್ ಅವರ ತಂದೆ ವರದಾಸ್ ಮತ್ತು ಕುಟುಂಬದ ಇತರರನ್ನು ಭೇಟಿ ಮಾಡಿ ಸಂತೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.