ಹಾವೇರಿ: ಹೆಸರಿಗೆ 250 ಹಾಸಿಗೆಗಳ ಆಸ್ಪತ್ರೆ. ಅಲ್ಲಿ ಇರಬೇಕಾದ ವೈದ್ಯರು ಹಾಗೂ ಸಿಬ್ಬಂದಿ ಸಂಖ್ಯೆ 301, ನಿತ್ಯ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಒಂದು ಸಾವಿರಕ್ಕೂ ಹೆಚ್ಚು. ಆದರೆ, ಅಲ್ಲಿ ಕಾರ್ಯ ನಿರ್ವಹಿಸುವ ವೈದ್ಯರ ಸಂಖ್ಯೆ ಕೇವಲ 78 ಮಾತ್ರ. ಖಾಲಿ ಇರುವ ಹುದ್ದೆಗಳ ಸಂಖ್ಯೆ 223.

ಇದು ಜಿಲ್ಲಾ ಕೇಂದ್ರ ಹಾವೇರಿಯಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿನ ವೈದ್ಯರು, ರೋಗಿಗಳ ಅಂಕಿ ಸಂಖ್ಯೆ. ಸಿಬ್ಬಂದಿ ತೀವ್ರ ಸಮಸ್ಯೆಯಿಂದ ಬಳಲುತ್ತಿರುವ ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ. ಹೀಗಾಗಿ ರೋಗಿಗಳಿಗಿಂತ ಮುಖ್ಯವಾಗಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ನೀಡಬೇಕಾಗಿದೆ.

ಆಸ್ಪತ್ರೆಯಲ್ಲಿ ವೈದ್ಯರು, ಸ್ಟಾಫ್ ನರ್ಸ್, ಪ್ಯಾರಾಮೆಡಿಕಲ್ ಸಿಬ್ಬಂದಿ, ಕಚೇರಿ ಸಿಬ್ಬಂದಿ ಹಾಗೂ ಡಿ ದರ್ಜೆ ನೌಕರರ ಕೊರತೆ ಹೆಚ್ಚಾಗಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಬರುವ ರೋಗಿಗಳ ಆರೋಗ್ಯವಿರಲಿ, ಆಸ್ಪತ್ರೆ ಸ್ವಚ್ಛವಾಗಿಡಲು ಸಾಧ್ಯವಾಗುತ್ತಿಲ್ಲ.

ಜಿಲ್ಲಾಸ್ಪತ್ರೆಗೆ ಒಟ್ಟು ೬೦ ತಜ್ಞ ವೈದ್ಯರ ಹುದ್ದೆ ಮಂಜೂರಾತಿಯಿದೆ. ಆದರೆ ಸದ್ಯ ೧೭ ವೈದ್ಯರು ಮಾತ್ರ ಸೇವೆಗೆ ಲಭ್ಯವಿದ್ದಾರೆ. ೪೩ ವೈದ್ಯರ ಹುದ್ದೆ ಖಾಲಿಯಿವೆ. ಅದರಲ್ಲಿ ಮೆಡಿಕಲ್ ಸ್ಪೆಶಲಿಸ್ಟ್ ಮೂರು ಹುದ್ದೆಗಳಲ್ಲಿ ಎರಡು, ಶಸ್ತ್ರಚಿಕಿತ್ಸೆ ತಜ್ಞರ ಮೂರು ಹುದ್ದೆಗಳಲ್ಲಿ ಎರಡು ಹುದ್ದೆ ಖಾಲಿಯಿದೆ. ಹೆರಿಗೆ ವಿಭಾಗದಲ್ಲಿ ಆರು ತಜ್ಞರಲ್ಲಿ ಇಬ್ಬರು ಮಾತ್ರ ಇದ್ದಾರೆ. ಅರವಳಿಕೆ ನೀಡುವ ಆರು ಜನ ತಜ್ಞರ ಪೈಕಿ ಕೇವಲ ಒಬ್ಬರು ಮಾತ್ರ ಲಭ್ಯವಿದ್ದಾರೆ.

ಅವರು ರಜೆಗೆ ಹೋದ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಇದ್ದರೆ, ಜಿಲ್ಲಾ ಆಸ್ಪತ್ರೆ ವೈದ್ಯರು ಅನಿವಾರ್ಯವಾಗಿ ಖಾಸಗಿ ವೈದ್ಯರನ್ನು ಅವಲಂಬಿಸಬೇಕು. ಅಂದು ಯಾವುದೇ ಶಸ್ತ್ರಚಿಕಿತ್ಸೆ ಹಾಗೂ ಹೆರಿಗೆ ಮಾಡಿಸುವುದೇ ಮುಂದೂಡಬೇಕಾದ ಸ್ಥಿತಿಯಿದೆ.

ಜನರಲ್ ಡ್ಯೂಟಿಯ ೨೦ ವೈದ್ಯರಲ್ಲಿ ಎಲ್ಲ ಹುದ್ದೆಗಳು ಖಾಲಿಯಿದೆ. ಆಯುಷ್ ವಿಬಾಗದ ಎಲ್ಲ ನಾಲ್ಕು ಹುದ್ದೆ ಖಾಲಿಯಿದೆ. ಫೋರೆನ್ಸಿಕ್, ರೇಡಿಯಾಲಾಜಿಸ್ಟ್ ಸೇರಿದಂತೆ ಎಲ್ಲ ವಿಭಾಗದ ಹುದ್ದೆಗಳೂ ಇಲ್ಲಿ ಖಾಲಿಯೇ ಇವೆ.

ಜಿಲ್ಲಾಸ್ಪತ್ರೆಗೆ ಮಂಜೂರಾಗಿರುವ ಒಟ್ಟು ೨೦೭ ಪ್ಯಾರಾಮೆಡಿಕಲ್ ಸಿಬ್ಬಂದಿಯಲ್ಲಿ ಕೇವಲ ೭೨ ಜನರು ಇದ್ದಾರೆ. ೧೩೫ ಹುದ್ದೆಯ ಕೆಲಸವನ್ನು ಈ 72 ಜನರೇ ಮಾಡಬೇಕಿದೆ. ಅದರಂತೆ ೧೦೦ ಸ್ಟಾಫ್ ನರ್ಸ್ಗಳಲ್ಲಿ ಕೇವಲ ೨೫ ನರ್ಸ್ಗಳು ಮಾತ್ರ ಕೆಲಸ ಮಾಡುತ್ತಿದ್ದಾರೆ.

ಹೊರರೋಗಿಗಳ ವಿಭಾಗ, ಬ್ಲಡ್? ಬ್ಯಾಂಕ್ ಇತ್ಯಾದಿ ಆಸ್ಪತ್ರೆ ಕೆಲಸಗಾರರ ೩೦ ಹುದ್ದೆಗಳಲ್ಲಿ ೧೮ ಹುದ್ದೆ ಖಾಲಿ ಯಿವೆ. ೨೦ ಸ್ಯಾನಿಟರಿ ಕೆಲಸಗಾರರ ಹುದ್ದೆ ಖಾಲಿ ಇದೆ. ಸಮಾಲೋಚಕರ ಎರಡು ಹುದ್ದೆ ಖಾಲಿಯಿವೆ. ಲ್ಯಾಬೋರೇಟರಿ ಟೆಕ್ನೀಶಿಯನ್ ೧೨ ಹುದ್ದೆಗಳಲ್ಲಿ ೮ ಖಾಲಿಯಿವೆ. ಫಾರ್ಮಾಸಿಸ್ಟ್, ಫಿಸಿಯೋಥೆರಪಿಸ್ಟ್ ಹೀಗೆ ಪ್ರತಿಯೊಂದು ವಿಭಾಗಕ್ಕೂ ಹೋದರೂ ಸಿಬ್ಬಂದಿಯೇ ಇಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಜಿಲ್ಲಾ ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ ಹತ್ತು ಹಲವು ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕರು ಇದ್ದ ಸಿಬ್ಬಂದಿಯನ್ನು ಮನವೊಲಿಸಿ ಕೆಲಸ ತೆಗೆದುಕೊಳ್ಳುವುದು ಒಂದೆಡೆಯಾದರೆ, ರೋಗಿಗಳು ತಮ್ಮನ್ನು ಕಾಳಜಿ ಮಾಡಲು ಸಿಬ್ಬಂದಿಗೆ ಹಣ ನೀಡುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ಕಸ, ಔಷಧಿ ಬಾಟಲಿಗಳು ಬಿದ್ದು, ಇಡೀ ಆಸ್ಪತ್ರೆಯೇ ಕಸದ ತೊಟ್ಟೆಯಂತೆ ಗೋಚರಿಸುತ್ತಿದೆ.

ಇದ್ದುದರಲ್ಲಿ ಉತ್ತಮ ಸೇವೆ: ಆಸ್ಪತ್ರೆಯಲ್ಲಿ ವೈದ್ಯರು ಹುದ್ದೆ ಖಾಲಿ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಿಬ್ಬಂದಿ ಕೊರತೆ ಸಮರ್ಪಕ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಗೊತ್ತಿದೆ. ಅದೇ ಕಾರಣಕ್ಕೆ ಕೆಲವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ ಎಂದು ಹೇಳುತ್ತಾರೆ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಬಸವರಾಜ ಅಂಗಡಿ.

ಇರುವ ಸಿಬ್ಬಂದಿಯಿಂದಲೇ ಉತ್ತಮ ಸೇವೆ ನೀಡಲು ಶ್ರಮಿಸಲಾಗುತ್ತಿದೆ. ಖಾಲಿ ಇರುವು ಹುದ್ದೆಗಳ ನೇಮಕಾತಿಗೆ ಹಾಗೂ ಸಿಟಿ ಸ್ಕ್ಯಾನ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳುವ ಅವರು, ರೋಗಿಗಳು ಸಿಬ್ಬಂದಿಗೆ ಹಣ ನೀಡುತ್ತಿರುವ ಬಗ್ಗೆ ಯಾವುದೇ ದೂರು ಬಂದಿಲ್ಲ. ಹಾಗೇನಾದರೂ ಹಣ ವಸೂಲಿ ಮಾಡುವುದು ಕಂಡುಬಂದರೆ, ಸಂಬಂಧಿಸಿದ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಹೇಳುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.