ಬುಧವಾರ, ಮೇ 12, 2021
26 °C

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ: ತಾಲ್ಲೂಕು ಕನ್ನಡ ಸಾಹಿತ್ಯ ಭವನ ನಿರ್ಮಾಣ ಕುರಿತಂತೆ ಈಗಾಗಲೇ ಸುಮಾರು 2.5ಕೋಟಿ ರೂಪಾಯಿಯ ಕ್ರಿಯಾ ಯೋಜನೆಯನ್ನು ರೂಪಿಸಲಾ ಗಿದ್ದು, ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ಮತ್ತಿತರ ಜನಪ್ರತಿನಿಧಿಗಳು ಮುಂದಿನ ವರ್ಷದಲ್ಲಿ ಬ ಸಾಹಿತ್ಯ ಭವನವನ್ನು ಲೋಕಾರ್ಪಣೆಗೊಳಿ ಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮಳನದ ಸರ್ವಾಧ್ಯಕ್ಷ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಕಾಲೇಜು ಮೈದಾನದ ಅನ್ನದಾನೀಶ್ವರ ಮಹಾಮಂಟಪದಲ್ಲಿ ಭಾನುವಾರ ರಾತ್ರಿ ಏರ್ಪಡಿಸಿದ್ದ ಜಿಲ್ಲಾ ಐದನೇಯ ಕನ್ನಡ ಸಾಹಿತ್ಯ ಸಮ್ಮಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.ಕಳೆದ ಎರಡು ದಿನಗಳ ಕಾಲ ಪಟ್ಟಣದಲ್ಲಿ ಜರುಗಿದ ಸಾಹಿತ್ಯ ಸಮ್ಮಳನ ತುಂಬಾ ಅದ್ಧೂರಿಯಿಂದ ಜರುಗಿದ್ದು, ಸಮ್ಮಳನದಲ್ಲಿ ಏರ್ಪಡಿಸಿದ್ದ ಎಲ್ಲ ಏಳು ಗೋಷ್ಠಿಗಳು ಜನಸಾಮಾನ್ಯರ ಮನ ಮುಟ್ಟುವಂತಿದ್ದವು. ಸಮ್ಮಳನದಲ್ಲಿ ಏರ್ಪಡಿಸಲಾಗಿದ್ದ ಕಪೋತಗಿರಿಯ ಐಸಿರಿ ಸೇರಿದಂತೆ ಹಲವು ಗೋಷ್ಠಿಗಳು ಜನರನ್ನು ಎಚ್ಚರಿಸುವಂತಿದ್ದವು ಎಂದು ಅವರು ಹರ್ಷವ್ಯಕ್ತಪಡಿಸಿದರು.ವಿದೇಶಿ ಭಾಷಾ ವ್ಯಾಮೋಹವನ್ನು ನಮ್ಮ ಪಾಲಕರು ಕಡಿಮೆ ಮಾಡಿಕೊಳ್ಳಬೇಕು. ತುಂಬಾ ಪ್ರಾಚೀನ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡಬೇಕು. ಇಂಗ್ಲಿಷ್ ಭಾಷೆಯಿಂದ ಮಾತ್ರ ಬದುಕು ಕಟ್ಟಿಕೊಳ್ಳಲು ಸಾದ್ಯ ಎನ್ನುವ ಹುಸಿ ನಂಬಿಕೆಯಿಂದ ಪಾಲಕರು ದೂರವಿರಬೇಕು ಎಂದು ಬೂದೀಶ್ವರ ಸ್ವಾಮೀಜಿ ಸಲಹೆ ನೀಡಿದರು. ಗುರುಪಾದ ಸ್ವಾಮೀಜಿ ಉಪಸ್ಥಿತರಿದ್ದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಶಿವಪ್ಪ ಕುರಿ ಮಾತನಾಡಿ, ಮುಂಡರಗಿ ತಾಲ್ಲೂಕಿನ ಸಮಸ್ತ ಕನ್ನಡಾಭಿಮಾನಿಗಳು ಹಾಗೂ ಜಿಲ್ಲೆಯ ಹಿರಿಕಿರಿಯ ಸ್ನೇಹಿತರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮಳನವನ್ನು ಯಶಸ್ವಿಗೊಳಿ ಸಲಾಗಿದ್ದು, ಸಮ್ಮಳನದ ಯಶಸ್ವಿಗೆ ಕಾರಣದಾರವರೆಲ್ಲರಿಗೂ ಧನ್ಯವಾದ ಗಳನ್ನು ಸಲ್ಲಿಸಿದರು.ಶಾಸಕ ರಾಮಕೃಷ್ಣ ದೊಡ್ಡಮನಿ, ಟಿ.ಈಶ್ವರ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮುಖಂಡರಾದ ಶಿವ ಕುಮಾರಗೌಡ ಪಾಟೀಲ, ಮಿಥುನ ಗೌಡ ಪಾಟೀಲ, ವಿ.ಎಲ್.ನಾಡಗೌಡ, ಶರಣು ಗೋಗೇರಿ, ಮಲ್ಲೇಶ,           ಡಾ.ಸಂಗಮೇಶ ತಮ್ಮನಗೌಡರ, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ, ಶಿರಹಟ್ಟಿ ತಾಲ್ಲೂಕು ಕ್ಷೇತ್ರಶಿಕ್ಷಣಾಧಿ ಕಾರಿ ಆರ್.ಎಸ್. ಬುರುಡಿ, ಬಿ.ಎಸ್. ಹಿರೇಮಠ ಮೊದಲಾದವರು ವೇದಿಕೆ ಮೇಲೆ ಹಾಜರಿದ್ದರು.ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಂ.ಜಿ.ಗಚ್ಚಣ್ಣವರ ಸ್ವಾಗತಿಸಿದರು. ಡಾ.ವಿ.ಬಿ.ತಂಗೋಡ ನಿರೂಪಿಸಿದರು. ಶರಣಪ್ಪ ಕಡ್ಡಿ ವಂದಿಸಿದರು.20 ರಂದು ವಿದ್ಯುತ್ ವ್ಯತ್ಯಯ

ಗದಗ: ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಇದೇ 20 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಉಪ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗು ತ್ತಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹಾಗೂ ಎಲಿಶಿರೂರ ಬಿಪಿಸಿಎಲ್ ಗಾಳಿ ಯಂತ್ರ ಘಟಕಕ್ಕೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.