ಮೈಸೂರು: ಮೈಸೂರಿನ ಮಾನಸಗಂಗೋತ್ರಿ, ಹಾಸನದ ಹೇಮಗಂಗೋತ್ರಿ, ಮಂಡ್ಯ ಹಾಗೂ ಚಾಮರಾಜನಗರ ಸ್ನಾತಕೋತ್ತರ ಕೇಂದ್ರಗಳಲ್ಲಿ ಪ್ರವೇಶ ಪಡೆಯಲು ಇನ್ನು ಮುಂದೆ ಕಡ್ಡಾಯವಾಗಿ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯಬೇಕು. ಆ ಬಳಿಕವಷ್ಟೇ ಸೀಟು ಖಚಿತ!

ಹೌದು, ವಿಜ್ಞಾನ, ವಾಣಿಜ್ಯ ಮತ್ತು ಕಲಾ ನಿಕಾಯ ಸೇರಿದಂತೆ ಎಲ್ಲ ಕೋರ್ಸುಗಳಿಗೂ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಪ್ರವೇಶ ಸುಧಾರಣೆ, ನಿಯಂತ್ರಣ ಮತ್ತು ಅನುಷ್ಠಾನ ಸಮಿತಿ ಸೂಚಿಸಿದ್ದರಿಂದ ಮೈಸೂರು ವಿ.ವಿ ಈ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಜುಲೈ 17ರಿಂದ 23ರವರೆಗೆ ಪ್ರವೇಶ ಪರೀಕ್ಷೆ ಆಯೋಜಿಸಿದೆ. ಇದಕ್ಕಾಗಿಯೇ ಸ್ನಾತಕೋತ್ತರ ಪ್ರವೇಶ ಪರೀಕ್ಷಾ ಘಟಕ (ಪಿ.ಜಿ.ಇ.ಇ.ಸಿ) ಆರಂಭಿಸಲಾಗಿದ್ದು, ಪ್ರೊ.ಡಿ. ಚೆನ್ನೇಗೌಡ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.

ಈ ಮೊದಲು ಪತ್ರಿಕೋದ್ಯಮ, ಸಮಾಜಸೇವಾ ಕಾರ್ಯ (ಎಂಎಸ್ಡಬ್ಲ್ಯು) ಹಾಗೂ ವಿಜ್ಞಾನ ವಿಭಾಗದ ಕೆಲವು ಕೋರ್ಸುಗಳಿಗೆ ಮಾತ್ರ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿತ್ತು. ಈ ವರ್ಷದಿಂದ ಎಲ್ಲ 71 ಕೋರ್ಸುಗಳಿಗೂ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಒಂದಕ್ಕಿಂತ ಹೆಚ್ಚು ವಿಭಾಗಗಳಿಗೆ ಪ್ರವೇಶ ಬಯಸಿದಲ್ಲಿ ಎಲ್ಲ ವಿಭಾಗಗಳಿಗೂ ಪ್ರತ್ಯೇಕವಾಗಿ ಪರೀಕ್ಷೆ ಬರೆಯಬೇಕು.

ಪಠ್ಯಕ್ರಮ ಏನು?: ಮೈಸೂರು ವಿ.ವಿ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ 2010-13ನೇ ಸಾಲಿನಲ್ಲಿ ಅಧ್ಯಯನ ಮಾಡಿದ ಪಠ್ಯಕ್ರಮದ ಆಧಾರದ ಮೇಲೆ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.

ಮೂರು ವರ್ಷಗಳ ಪದವಿಯ ಪಠ್ಯಕ್ರಮವನ್ನು 10 ಘಟಕಗಳನ್ನಾಗಿ (ಯೂನಿಟ್) ವಿಂಗಡಿಸಲಾಗುತ್ತದೆ. 50 ಅಂಕಗಳ ಬಹುಆಯ್ಕೆ ಪ್ರಶ್ನೆಗಳಿಗೆ (ಮಲ್ಟಿಪಲ್ ಚಾಯ್ಸ) ಪರೀಕ್ಷೆ ನಡೆಯಲಿದ್ದು, ಒಟ್ಟು 50 ಪ್ರಶ್ನೆಗಳು ಇರುತ್ತವೆ. ಇದಕ್ಕಾಗಿ ಒಂದು ಗಂಟೆ ಕಾಲಾವಕಾಶ ನಿಗದಿಪಡಿಸಲಾಗಿದೆ.
ಪರೀಕ್ಷೆ ಬರೆಯುವ ಅಭ್ಯರ್ಥಿಗಳು `ಹಣಕಾಸು ಅಧಿಕಾರಿಗಳು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು' ಇವರ ಹೆಸರಿನಲ್ಲಿ ರೂ. 100 ಡಿ.ಡಿ ಪಡೆಯಬೇಕು.

ವಿ.ವಿಯ ಅಂತರ್ಜಾಲ ತಾಣದಲ್ಲಿ ಲಭ್ಯವಿರುವ ಅರ್ಜಿಯನ್ನು ಭರ್ತಿ ಮಾಡಿ, `ಸಂಚಾಲಕರು, ಸ್ನಾತಕೋತ್ತರ ಪ್ರವೇಶ ಪರೀಕ್ಷಾ ಕೇಂದ್ರ, ಪರೀಕ್ಷಾ ಭವನ, ಕ್ರಾಫರ್ಡ್ ಹಾಲ್ ಹಿಂಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-05' ಇಲ್ಲಿಗೆ ಜುಲೈ 1ರ ಒಳಗೆ ತಲುಪುವಂತೆ ಸಲ್ಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.