ನವದೆಹಲಿ (ಐಎಎನ್ಎಸ್): ಪಿತೃತ್ವ ಪರೀಕ್ಷೆಗೆ ಸಂಬಂಧಿಸಿದಂತೆ ಕಾಂಗ್ರೆಸ್ನ ಹಿರಿಯ ನಾಯಕ ಎನ್.ಡಿ.ತಿವಾರಿ ಅವರ ರಕ್ತದ ಮಾದರಿ ಸಂಗ್ರಹಿಸಲು ವೈದ್ಯರೊಬ್ಬರಿಗೆ ಸೂಚಿಸಬೇಕು ಎಂದು ದೆಹಲಿ ಹೈಕೋರ್ಟ್ ಸೋಮವಾರ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿಗೆ (ಸಿಎಂಒ) ನೋಟಿಸ್ ನೀಡಿದೆ.

ಜಂಟಿ ರಿಜಿಸ್ಟ್ರಾರ್ ದೀಪಕ್ ಗಾರ್ಗ್ ಅವರು ಸಿಎಂಒ ಅವರಿಂದ ಈ ಬಗ್ಗೆ ಮೇ 10ರೊಳಗೆ ಪ್ರತಿಕ್ರಿಯೆ ಬಯಸಿದ್ದಾರೆ.ತಿವಾರಿ ಮತ್ತು ಇತರರ ರಕ್ತದ ಮಾದರಿಯನ್ನು ಜೂನ್ 1ರಂದು ಸಂಗ್ರಹಿಸುವಂತೆ ನ್ಯಾಯಾಲಯ ಹೇಳಿದೆ.

ತಿವಾರಿ ಅವರು ತಮ್ಮ ತಂದೆ ಎಂದು ಹೇಳಿಕೊಂಡು ರೋಹಿತ್ ಶೇಖರ್ ಎಂಬುವವರು ದಾವೆ ಹೂಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್ಎ ಪರೀಕ್ಷೆಗೆ ಒಳಗಾಗುವಂತೆ ನ್ಯಾಯಾಲಯದ ಏಕ ಸದಸ್ಯ ಪೀಠವು 2010ರ ಡಿ. 23ರಂದು ತಿವಾರಿ ಅವರಿಗೆ ಸೂಚಿಸಿತ್ತು.

ಶೇಖರ್ ಅವರು ತಮ್ಮ ತಾಯಿ ಉಜ್ವಲಾ ಶರ್ಮಾ ಅವರೊಂದಿಗೆ ತಿವಾರಿ ಅವರಿಗೆ ಸಂಬಂಧವಿತ್ತು ಎಂದು ಆರೋಪಿಸಿದ್ದಾರೆ. ಅವಿಭಜಿತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯಾಗಿದ್ದ ತಿವಾರಿ ಇದನ್ನು ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.