ಜೂನ್ 4ರಿಂದ ಸ್ವಾಭಿಮಾನ ನಡಿಗೆ: ಪಾಟೀಲ

7

ಜೂನ್ 4ರಿಂದ ಸ್ವಾಭಿಮಾನ ನಡಿಗೆ: ಪಾಟೀಲ

Published:
Updated:

ವಿಜಾಪುರ: ಜೂನ್ 4ರಿಂದ ಜೂನ್ 6ರವರೆಗೆ ಎರಡು ದಿನ ಬಾಪೂಜಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಪಾದಯಾತ್ರೆ ಮೂಲಕ ವಿಜಾಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಗಳ ಜನಜಾಗೃತಿಗಾಗಿ ~ಸ್ವಾಭಿಮಾನ~ದ ನಡಿಗೆ ಹಮ್ಮಿಕೊಳ್ಳ ಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಈ ನಡಿಗೆ ಜೂನ್ 4ರಂದು ಬೆಳಿಗ್ಗೆ 8 ಗಂಟೆಯಿಂದ ಬಸವನ ಬಾಗೇವಾಡಿಯಿಂದ ಆರಂಭ ವಾಗಿ 6ರಂದು ಕೂಡಲಸಂಗಮದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.ಐತಿಹಾಸಿಕ ಹಾಗೂ ಸಾಂಸ್ಕೃತಿಕ ವಾಗಿ ನಾಡು ನುಡಿಗೆ ತನ್ನದೇ ಆದ ಮಹತ್ತರ ಕೊಡುಗೆಗಳನ್ನು ನೀಡಿದ ವಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳು ಇಂದು ಹತ್ತಾರು ಸಮಸ್ಯೆ ಗಳಿಂದ, ಹಲವಾರು ಅನುಮಾನ, ಆತಂಕಗಳಿಂದ ನಲುಗುತ್ತಿವೆ, ಕಾರ್ಮೋಡದ ಕರಿ ನೆರಳಲ್ಲಿ ಇಲ್ಲಿಯ ಜನ ಬದುಕುವಂತಾಗಿದೆ ಎಂದರು.ಅವಳಿ ಜಿಲ್ಲೆಗಳಲ್ಲಿ ಈಗ ಎದುರಾದ ಸಮಸ್ಯೆ ಮತ್ತು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಎರಡೂ ಜಿಲ್ಲೆಗಳ ನೆಲ, ಜಲ, ಪರಿಸರ ರಕ್ಷಣೆ ಹಾಗೂ ಅವಳಿ ಜಿಲ್ಲೆಗಳು ಅನೇಕ ನೀರಾವರಿ ಯೋಜನೆಗಳಿಂದ ವಂಚಿತ ಗೊಂಡಿವೆ. ಬಸವೇಶ್ವರ ಹುಟ್ಟಿದ ಮತ್ತು ಐಕ್ಯ ಸ್ಥಳದ ರಕ್ಷಣೆಗಾಗಿ ಎರಡು ದಿನಗಳ ಕಾಲ ಈ ~ಸ್ವಾಭಿಮಾನ ನಡೆ~ಯನ್ನು ಜಿಲ್ಲೆಯ ಜನರ ಜಾಗೃತಿಗಾಗಿ ರೂಪಿಸಲಾಗಿದೆ ಎಂದು ಪಾಟೀಲ ತಿಳಿಸಿದರು.ಅವಳಿ ಜಿಲ್ಲೆಗಳು ನೆಲೆ ಕಳೆದು ಕೊಳ್ಳುವ ಆತಂಕ ಎದುರಾಗಿದ್ದು, ಭೂಮಿ ಕಳೆದುಕೊಳ್ಳುವ ರೈತರಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಸ್ವಾಭಿಮಾನ ನಡೆಗೆ ಹಮ್ಮಿಕೊಳ್ಳ ಲಾಗಿದೆ. ಇದು ಪಕ್ಷಾತೀತವಾಗಿ, ಜಾತ್ಯತೀತವಾಗಿ, `ಮಹಾತ್ಮನ~ ಸದಾಶಯಗಳಿಗೆ ಪೂರಕವಾಗಿ ನಡೆ ಯುತ್ತಿದೆ ಎಂದು ಪಾಟೀಲ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry