ಗುರುವಾರ , ಜನವರಿ 30, 2020
20 °C

ಜೆಟ್ಟಿಂಗ್‌ ಯಂತ್ರಗಳ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಜಲ­ಮಂಡಳಿಯ 12 ಜೆಟ್ಟಿಂಗ್ ಮತ್ತು 2 ಸಕ್ಕಿಂಗ್ ಯಂತ್ರಗಳು ಇದೇ ಸೋಮವಾರ (ಡಿ. 16) ಈಶಾನ್ಯ-–3ರ ಉಪ ವಿಭಾಗದ ಆರ್.ಟಿ.ನಗರ, ಸಂಜಯನಗರ, ನ್ಯೂ ಬಿಇಎಲ್ ರಸ್ತೆ, ಆನಂದ ನಗರ, ಗಂಗಾ ನಗರ ಮತ್ತು  ನೈರುತ್ಯ–-4ರ ಉಪವಿಭಾಗ ಜೆ.ಪಿ.ನಗರ-–1, ಜಯನಗರ 4ನೇ ‘ಟಿ’ ಹಂತ,  ಜಯನಗರ 4ನೇ ಹಂತ,  ಹೊಂಬೇಗೌಡ ನಗರ ಉಪ ವಿಭಾಗ ವ್ಯಾಪ್ತಿಯ ಪ್ರದೇ ಶಗಳಲ್ಲಿ ಒಳಚರಂಡಿ ಮಾರ್ಗಗಳ ನಿರ್ವಹಣಾ ಕಾರ್ಯಾಚರಣೆ ನಡೆಸಲಿವೆ.ಈ ಪ್ರದೇಶಗಳ ಒಳಚರಂಡಿ ಮಾರ್ಗಗಳಲ್ಲಿ ಅಡಚಣೆಗಳಿದ್ದಲ್ಲಿ ಜೆಟ್ಟಿಂಗ್‌ ಯಂತ್ರಗಳ ಸೇವೆಗೆ  ಈಶಾನ್ಯ-–3ರ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌  ವೇಣುಗೋಪಾಲ್  (98454 44025) ಮತ್ತು ನೈರುತ್ಯ-–4ರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್  ರಾಜೀವ್  (99455 18971) ಅವರನ್ನು ಸಂಪರ್ಕಿಸಬಹುದು ಎಂದು ಜಲಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)