ನವದೆಹಲಿ: ಮೊಬೈಲ್ನ `ಎರಡನೇ ತಲೆಮಾರಿನ ತರಂಗಾಂತರ~ (2ಜಿ) ಹಂಚಿಕೆ ಹಗರಣ ಕುರಿತ ವಿಚಾರಣೆಗೆ ಪ್ರಧಾನಿ ಮನಮೋಹನ್ಸಿಂಗ್, ಹಣಕಾಸು ಸಚಿವ ಚಿದಂಬರಂ ಅವರನ್ನು ಕರೆಸಬೇಕೆಂಬ ವಿಷಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದ ಹಿನ್ನೆಲೆಯಲ್ಲಿ, `ಸಂಸತ್ತಿನ ಜಂಟಿ ಸದನ ಸಮಿತಿ~ (ಜೆಪಿಸಿ) ಸಭೆಯನ್ನು ಬಿಜೆಪಿ ಸದಸ್ಯರು ಬಹಿಷ್ಕರಿಸಿದ ಪ್ರಸಂಗ ಬುಧವಾರ ನಡೆಯಿತು.

`ಇದು ಪ್ರಯೋಜನಕ್ಕೆ ಬಾರದ ಕಾಂಗರೂ ನ್ಯಾಯಾಲಯ~ ಎಂದು ಅನಂತರ ಬಿಜೆಪಿ ಸದಸ್ಯರು ಲೇವಡಿ ಮಾಡಿದರು. `2ಜಿ~ ಹಗರಣ ಕುರಿತು ವಿಚಾರಣೆ ನಡೆಸುತ್ತಿರುವ ಪಿ.ಸಿ. ಚಾಕೋ ನೇತೃತ್ವದ ಜಂಟಿ ಸದನ ಸಮಿತಿಗೆ ರಾಜೀನಾಮೆ ನೀಡುವ ಕುರಿತು ಪ್ರಮುಖ ವಿರೋಧ ಪಕ್ಷ ಬಿಜೆಪಿ ಪರಿಶೀಲಿಸುತ್ತಿದ್ದು, ಗುರುವಾರ ತನ್ನ ನಿಲುವನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.

ಜಂಟಿ ಸದನ ಸಮಿತಿ ಮುಂದೆ ಹೇಳಿಕೆ ನೀಡಲು ಯಾರ್ಯಾರನ್ನು ಕರೆಸಬೇಕೆಂಬ ಪಟ್ಟಿ ಅಂತಿಮಗೊಳಿಸುವ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಸಿಂಗ್ ಹಾಗೂ ಚಿದಂಬರಂ ಅವರಿಂದ ಹೇಳಿಕೆ ಪಡೆಯಬೇಕೆಂಬ ಬೇಡಿಕೆ ಇಟ್ಟರು. ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇರಿಂದಾಗಿ ಬಿಜೆಪಿ ಸದಸ್ಯರಾದ ಜಸ್ವಂತ್ಸಿಂಗ್, ಯಶವಂತ್ ಸಿನ್ಹಾ, ರವಿಶಂಕರ್ ಪ್ರಸಾದ್ ಹಾಗೂ ಧರ್ಮೇಂದ್ರ ಪ್ರಧಾನ್ ಸಭೆಯಿಂದ ಹೊರ ನಡೆದರು.

`ಕಾಂಗ್ರೆಸ್ ಸದಸ್ಯರು ಕೆಟ್ಟ ಭಾಷೆ ಪ್ರಯೋಗ ಮಾಡಿದ್ದರಿಂದ ಸಭೆ ಬಹಿಷ್ಕರಿಸಲಾಯಿತು~ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಆದರೆ, ಅನಂತರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಂಟಿ ಸದನ ಸಮಿತಿ ಅಧ್ಯಕ್ಷರಾದ ಕಾಂಗ್ರೆಸ್ ಮುಖಂಡ ಪಿ.ಸಿ.ಚಾಕೋ, ಬಿಜೆಪಿ ಸದಸ್ಯರ ಆರೋಪಗಳನ್ನು ನಿರಾಕರಿಸಿದರು. `ಯಾರೂ ಬಿಜೆಪಿ ಸದಸ್ಯರ ವಿರುದ್ಧ ಕೆಟ್ಟ ಭಾಷೆ ಬಳಸಲಿಲ್ಲ~ ಎಂದು ಸ್ಪಷ್ಟಪಡಿಸಿದರು.

`ಜಂಟಿ ಸದನ ಸಮಿತಿ ಮುಂದೆ ಸಾಕ್ಷ್ಯ ನುಡಿಯಲು ಯಾರ್ಯಾರನ್ನು ಕರೆಸಬೇಕೆಂಬ ವಿಷಯ ಎಂಟು ವಾರಗಳಿಂದ ನೆನೆಗುದಿಗೆ ಬಿದ್ದಿದೆ. ಈ ಪಟ್ಟಿಯನ್ನು ಅಂತಿಮಗೊಳಿಸಬೇಕೆಂದು ನಾವು ಒತ್ತಾಯ ಮಾಡಿದೆವು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ತಮ್ಮ ವಿರುದ್ಧ ಕೆಟ್ಟ ಭಾಷೆ ಬಳಸಿದರು~ ಎಂದು ಯಶವಂತ ಸಿನ್ಹಾ ದೂರಿದರು.

`ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಸದನ ಸಮಿತಿ ಮುಂದೆ ಕರೆಸಬೇಕೆಂದು ನೀವು ಒತ್ತಾಯ ಮಾಡುವುದಾದರೆ, ಹಿಂದಿನ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಪ್ರಧಾನಿ ಆಗಿದ್ದ ವಾಜಪೇಯಿ ಅವರನ್ನು ಕರೆಸಬೇಕಾಗುತ್ತದೆ~ ಎಂದು ಕಾಂಗ್ರೆಸ್ ಸದಸ್ಯರು ತಿರುಗೇಟು ಕೊಟ್ಟರು.

ಆದರೆ, ವಾಜಪೇಯಿ ಅನಾರೋಗ್ಯಕ್ಕೆ ಒಳಗಾಗಿದ್ದು ಅವರು ಸಮಿತಿ ಮುಂದೆ ಹಾಜರಾಗುವ ಪರಿಸ್ಥಿತಿಯಲ್ಲಿ ಇಲ್ಲ. ಎನ್ಡಿಎ ಆಡಳಿತದಲ್ಲಿ ಹಣಕಾಸು ಸಚಿವರಾಗಿದ್ದ ಜಸ್ವಂತ್ ಸಿಂಗ್ ಮತ್ತು ಯಶವಂತ ಸಿನ್ಹಾ ಇಬ್ಬರೂ ಈ ಸಮಿತಿ ಸದಸ್ಯರಾಗಿದ್ದಾರೆ.

ಚಾಕೋ ಮನವಿ: `ಬಿಜೆಪಿ ಸದಸ್ಯರು ಜಂಟಿ ಸದನ ಸಮಿತಿಗೆ ವಾಪಸ್ಸಾಗಿ ವಿಚಾರಣೆ ಪೂರ್ಣಗೊಳಿಸಲು ಸಹಕರಿಸಬೇಕೆಂದು~ ಅನಂತರ ಚಾಕೋ ಮನವಿ ಮಾಡಿದರು. `2ಜಿ ಹಗರಣದ ವಿಚಾರಣೆ ಒಳ್ಳೆಯ ದಿಕ್ಕಿನಲ್ಲಿ ಸಾಗಿದೆ. ಈ ಹಂತದಲ್ಲಿ ಸಮಿತಿ ತೊರೆಯಬಾರದು. ಈ ಸಮಿತಿ ಅತ್ಯುತ್ತಮ ವರದಿ ಸಲ್ಲಿಸುವ ವಿಶ್ವಾಸವಿದೆ~ ಎಂದರು. `ಬಿಜೆಪಿ ಸದಸ್ಯರು ರಾಜಕೀಯ ಕಾರ್ಯಸೂಚಿ ಮುಂದಿಟ್ಟುಕೊಂಡು ಜಂಟಿ ಸದನ ಸಮಿತಿ ಬಹಿಷ್ಕರಿಸಿದ್ದಾರೆ. ಇದು ಸರಿಯಲ್ಲ~ ಎಂದು ಆರೋಪ ಮಾಡಿದರು.

`ನಾಲ್ಕು ವರ್ಷಗಳ ಹಿಂದೆ `2ಜಿ~ ಹಗರಣ ನಡೆದಾಗ ಚಿದಂಬರಂ ಹಣಕಾಸು ಸಚಿವರಾಗಿದ್ದರು. ಅವರಿಗೆ ಆಗಿನ ದೂರಸಂಪರ್ಕ ಸಚಿವ ಅಗ್ಗದ ದರದಲ್ಲಿ ತರಂಗಾಂತರ ಮಾರಾಟ ಮಾಡಿದ ಬಗ್ಗೆ ಅರಿವಿತ್ತು. ಆದರೂ ತಡೆಯುವ ಪ್ರಯತ್ನ ಮಾಡಲಿಲ್ಲ~ ಎಂಬುದು ಬಿಜೆಪಿ ಆರೋಪ. ಇದೇ ಕಾರಣಕ್ಕೆ ಚಿದಂಬರಂ ರಾಜೀನಾಮೆ ನೀಡಬೇಕೆಂದು ಬಿಜೆಪಿ ಸದಸ್ಯರು ಸಂಸತ್ತಿನ ಉಭಯ ಸದನಗಳಲ್ಲೂ ಈ ಹಿಂದೆ ಗದ್ದಲ ಎಬ್ಬಿಸಿದ್ದರು.

ಅವಧಿ ವಿಸ್ತರಣೆ ಅರ್ಜಿ: 2 ಜಿ ತರಂಗಾಂತರಕ್ಕೆ ಸಂಬಂಧಿಸಿ ಹೊಸ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಲು ಈಗಾಗಲೇ ನೀಡಲಾಗಿರುವ ಆಗಸ್ಟ್ 31ರ ಗಡುವನ್ನು ಇನ್ನೂ ನಾಲ್ಕು ತಿಂಗಳು ವಿಸ್ತರಿಸಬೇಕೆನ್ನುವ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ.

ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ನೇತೃತ್ವದ ಪೀಠವು ಅರ್ಜಿಗೆ ಸಂಬಂಧಿಸಿದ ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿದೆ. ಹರಾಜು ಪ್ರಕ್ರಿಯೆ ಆರಂಭಿಸಲು ನವೆಂಬರ್ 12ರವರೆಗೆ ಕಾಲಾವಕಾಶ ಅಗತ್ಯವಿದೆಯಲ್ಲದೆ, ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿ ಪರವಾನಗಿಗಳನ್ನು ನೀಡಲು ಇನ್ನೂ 40 ದಿನಗಳ ಕಾಲಾವಧಿ ಅಗತ್ಯವಿದೆ ಎಂದು ದೂರಸಂಪರ್ಕ ಸಚಿವಾಲಯ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿತ್ತು.

ಆಗಸ್ಟ್ 7ರಂದು ನಡೆದ ದೂರಸಂಪರ್ಕ ಕುರಿತ ಉನ್ನತ ಅಧಿಕಾರದ ಸಚಿವರ ಸಮಿತಿ ಸಭೆಯಲ್ಲಿ ಕಾಲಾವಕಾಶ ವಿಸ್ತರಣೆ ಕೋರಿ ಅರ್ಜಿ ಸಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ಇದಕ್ಕೂ ಮುನ್ನ ಹೊಸ ಹರಾಜಿಗೆ 400 ದಿನಗಳ ಕಾಲಾವಧಿ ಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದ ಸುಪ್ರೀಂಕೋರ್ಟ್, ಅವಧಿಯನ್ನು ಜೂನ್ 2ರಿಂದ ಆಗಸ್ಟ್ 31ರವರೆಗೆ ವಿಸ್ತರಿಸಿತ್ತು. ಅಲ್ಲದೆ ಸದ್ಯ ಚಾಲ್ತಿಯಲ್ಲಿರುವ `2ಜಿ~ ಪರವಾನಗಿಗಳು ಸೆಪ್ಟೆಂಬರ್ 7ರವರೆಗೆ ಮುಂದುವರಿಯಲಿದೆ ಎಂದೂ ತಿಳಿಸಿತ್ತು. `2ಜಿ~ ತರಂಗಾಂತರಕ್ಕೆ ಸಂಬಂಧಿಸಿದ 122 ಪರವಾನಗಿಗಳನ್ನು ಫೆಬ್ರುವರಿ 2ರಂದು ರದ್ದುಪಡಿಸಿದ್ದ ಸುಪ್ರೀಂಕೋರ್ಟ್ ಜೂನ್ 2ರೊಳಗೆ ಹೊಸ ಹರಾಜು ನಡೆಸುವಂತೆ ಆದೇಶಿಸಿತ್ತು.

ಜಂಟಿ ಸದನ ಸಮಿತಿ
`2ಜಿ~ ಹಗರಣ ಕುರಿತು ವಿಚಾರಣೆ ನಡೆಸುತ್ತಿರುವ ಜಂಟಿ ಸದನ ಸಮಿತಿ ಲೋಕಸಭೆಯ 20 ಹಾಗೂ ರಾಜ್ಯಸಭೆಯ 10ಸೇರಿದಂತೆ ವಿವಿಧ ಪಕ್ಷಗಳ ಒಟ್ಟು 30 ಸದಸ್ಯರನ್ನು ಒಳಗೊಂಡಿದೆ. 1998ರಿಂದ 2009ರವರೆಗಿನ ದೂರಸಂಪರ್ಕ ನೀತಿಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ದೂರಸಂಪರ್ಕ ನೀತಿ ಹಾಗೂ ಪರವಾನಗಿ ಶುಲ್ಕ ಒಳಗೊಂಡಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಈ ಸಮಿತಿ ಶಿಫಾರಸುಗಳನ್ನು ಮಾಡಲಿದೆ.

ಪ್ರಮುಖ ಸಾಕ್ಷಿ ಹೇಳಿಕೆ
2ಜಿ ಪರವಾನಗಿ ಹಂಚಿಕೆ ನೀತಿಗೆ ಸಂಬಂಧಿಸಿದಂತೆ ಆಗಿನ ದೂರಸಂಪರ್ಕ ಸಚಿವ ಎ.ರಾಜಾ ಅವರು ಪ್ರಧಾನಿಯ ಜತೆ ನಡೆಸಿದ ಪತ್ರ ವ್ಯವಹಾರ ಹಾಗೂ ಇದಕ್ಕೆ ಸಂಬಂಧಿಸಿದ ವಿಷಯಗಳು ದೂರ ಸಂಪರ್ಕ ಇಲಾಖೆಯ ಕಡತಗಳಲ್ಲಿ ಕ್ರಮಬದ್ಧವಾಗಿಲ್ಲ ಮತ್ತು ಪರಿಶೀಲನೆಯಾಗಿಲ್ಲ ಎಂದು ಪ್ರಾಸಿಕ್ಯೂಷನ್ ಪ್ರಮುಖ ಸಾಕ್ಷಿ ಎ.ಕೆ.ಶ್ರೀವಾಸ್ತವ ಅವರು ಬುಧವಾರ ನ್ಯಾಯಾಲಯಕ್ಕೆ ತಿಳಿಸಿದರು.

ಕಾಂಗರೂ ಕೋರ್ಟ್
`ಅಣಕು ನ್ಯಾಯಾಲಯ~ ಎಂದೂ ಇದರರ್ಥ. ಇಲ್ಲಿ ಕಾನೂನು ಹಾಗೂ ನ್ಯಾಯದ ತತ್ವಗಳನ್ನು ಕಡೆಗಣಿಸಲಾಗುತ್ತದೆ.

ಕೆಲವೊಮ್ಮೆ ಈ ಪದವನ್ನು ನಕಾರಾತ್ಮಕ ಅರ್ಥವಿಲ್ಲದೆಯೂ ಬಳಸಲಾಗುತ್ತದೆ. ಉದಾಹರಣೆಗೆ ಬೇಸ್ಬಾಲ್ ಲೀಗ್ ತಂಡಗಳು ತಪ್ಪು ಮಾಡಿದ ಆಟಗಾರರನ್ನು ಶಿಕ್ಷಿಸಲೂ `ಕಾಂಗರೂ ಕೋರ್ಟ್~ ಹೊಂದಿರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.