ಭಾನುವಾರ, ಜನವರಿ 26, 2020
28 °C

ಜೇಟ್ಲಿ ವಿರುದ್ಧ ಬೇಡಿ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್‌ ಸಂಸ್ಥೆಗೆ (ಡಿಡಿಸಿಎ) ನಡೆಯಲಿರುವ ಚುನಾ ವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅರುಣ್‌ ಜೇಟ್ಲಿ ವಿರುದ್ಧ ಸ್ಪರ್ಧಿಸುವುದಾಗಿ ಭಾರತ ತಂಡದ ಮಾಜಿ ನಾಯಕ ಬಿಷನ್‌ ಸಿಂಗ್‌ ಬೇಡಿ ತಿಳಿಸಿದ್ದಾರೆ.ಡಿಸೆಂಬರ್‌ 30ರಂದು ಚುನಾವಣೆ ನಡೆಯಲಿದೆ. ಜೇಟ್ಲಿ ಸಂಸ್ಥೆಯ ಹಾಲಿ ಅಧ್ಯಕ್ಷ ಕೂಡ. ‘ಹೌದು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತೀರ್ಮಾನಿಸಿ ದ್ದೇನೆ. ಸಂಸ್ಥೆಯನ್ನು ಮುನ್ನಡೆಸುತ್ತಿ ರುವ ರೀತಿ ಸರಿಯಿಲ್ಲ. ಅದರ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಹಾಗಾಗಿ ಈ ನಿರ್ಧಾರ ತೆಗೆದು ಕೊಂಡಿದ್ದೇನೆ’ ಎಂದು ಬೇಡಿ ಹೇಳಿದ್ದಾರೆ.‘ಸಂಸ್ಥೆಯಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರದ ಬಗ್ಗೆ ನೀವು ಯಾರೂ ಪ್ರಶ್ನಿಸುವುದಿಲ್ಲವೇ? ಈಗಾಗಲೇ ಈ ಬಗ್ಗೆ  (ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ) ಎಸ್‌ಎಫ್‌ಐಒ ತನಿಖೆ ನಡೆಸುತ್ತಿದೆ. ಈ ಕಾರಣ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)