ಮೈಸೂರು: ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರುವ ಶಿಕ್ಷೆಗೆ ಒಳಗಾದ ಕೈದಿಗಳಿಗೆ ಕುರಿ ಸಾಕಾಣಿಕೆ ತರಬೇತಿ ನೀಡಲು ಜೈಲು ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕೆಂದೇ 20 ಬಂಡೂರು ತಳಿ ಕುರಿಗಳನ್ನು ತರಲಾಗಿದೆ.

ಶಿಕ್ಷೆಗೆ ಗುರಿಯಾಗಿರುವ ಕೈದಿಗಳು ಶಿಕ್ಷೆಯ ಅವಧಿ ಪೂರ್ಣಗೊಂಡ ಬಳಿಕ ಸ್ವಂತ ಉದ್ಯೋಗ ಆರಂಭಿಸಿ, ನಿಗದಿತ ಆದಾಯದೊಂದಿಗೆ ನೆಮ್ಮದಿಯ ಜೀವನ ನಡೆಸಲಿ ಎಂಬ ಉದ್ದೇಶದಿಂದ ಈ ಯೋಜನೆ ಆರಂಭಗೊಂಡಿದೆ. ಬೆಂಗಳೂರು ಸಮೀಪದ ದೇವನಹಳ್ಳಿ ಬಯಲು ಕಾರಾಗೃಹದಿಂದ 20 ಬಂಡೂರು ಕುರಿಗಳನ್ನು ಇಲ್ಲಿಗೆ ತರಲಾಗಿದೆ. ಕುರಿ ಸಾಕಾಣಿಕೆಯಿಂದ ಆಗುವ ಲಾಭ, ವರ್ಷಕ್ಕೆ ಎಷ್ಟು ಹಣ ಸಂಪಾದಿಸಬಹುದು, ಅವುಗಳಿಗೆ ಕಾಯಿಲೆ ಬಂದರೆ ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕು? ಎನ್ನುವ ಬಗ್ಗೆ ಕೈದಿಗಳಿಗೆ ಮಾಹಿತಿ ನೀಡಲಾಗುತ್ತಿದೆ.

ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ನಾಗಶೆಟ್ಟಿ ಕುರಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಾರಾಗೃಹದ ವಿಶಾಲ ಆವರಣದಲ್ಲೇ ಅವುಗಳನ್ನು ಮೇಯಿಸುತ್ತಿದ್ದಾರೆ. ಕುರಿಗಳ ಹಿಕ್ಕೆಯನ್ನು ತರಕಾರಿ ತೋಟಕ್ಕೆ ಬಳಸಲಾಗುತ್ತಿದೆ. ಮೂಲತಃ ಹಾಸನ ಜಿಲ್ಲೆಯ ನಾಗಶೆಟ್ಟಿಗೆ ಈ ಮೊದಲೇ ಕುರಿ ಸಾಕಾಣಿಕೆ ಅನುಭವ ಇದೆ. ದಿನವಿಡೀ ಉತ್ಸಾಹದಿಂದಲೇ ಕುರಿ ಕಾಯುವಲ್ಲಿ ನಿರತರಾಗಿದ್ದಾರೆ.

`ಬಂಡೂರು ತಳಿ ಕುರಿಗಳು ಬಹಳ ಸಾಧು ಸ್ವಭಾವದ ಪ್ರಾಣಿಗಳು. ಮುಖ ಮೇಲೆ ಎತ್ತುವುದೇ ಇಲ್ಲ. ನಾಯಿ ಬೊಗಳಿದರೆ ಮಾತ್ರ ಅವು ಮುಖ ಮೇಲೆತ್ತುತ್ತವೆ. ಇಲ್ಲವಾದರೆ ತಮ್ಮ ಪಾಡಿಗೆ ತಾವು ಹುಲ್ಲು ಮೇಯುತ್ತವೆ. ಬಂಡೂರು ಕುರಿಯ ಮಾಂಸ ಬಲು ರುಚಿ. ಅಲ್ಲದೆ ಕಡಿಮೆ ಖರ್ಚು, ಕಡಿಮೆ ಕಾಲಾವಧಿಯಲ್ಲಿ ಹೆಚ್ಚು ಉತ್ಪಾದನೆ ಮಾಡಬಹುದು. ಎಲ್ಲ ವಾತಾವರಣಕ್ಕೂ ಈ ತಳಿ ಹೊಂದಿಕೊಳ್ಳುತ್ತವೆ~ ಎಂದು ಹೇಳುತ್ತಲೇ ನಾಗಶೆಟ್ಟಿ ಕುರಿ ಕಾಯುವಲ್ಲಿ ಮಗ್ನರಾದರು.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕಾರಾಗೃಹ ಮುಖ್ಯ ಅಧೀಕ್ಷಕ ಪಿ.ಎನ್.ಜಯಸಿಂಹ, `ಕೈದಿಗಳ ಮನಪರಿವರ್ತನೆ ಉದ್ದೇಶದಿಂದ ಕರ್ನಾಟಕ ಕಾರಾಗೃಹಗಳ ಮಹಾ ನಿರೀಕ್ಷಕ ಕೆ.ವಿ.ಗಗನದೀಪ್ ಈ ಮೊದಲು ಹಂದಿ ಸಾಕಾಣಿಕೆ, ಬೇಕರಿ ಆರಂಭಕ್ಕೆ ಮುನ್ನುಡಿ ಬರೆದಿದ್ದರು. ಈಗ ಕುರಿಗಳ ಸಾಕಾಣಿಕೆ ಬಗ್ಗೆ ತರಬೇತಿ ನೀಡಲು ಮುಂದಾಗಿದ್ದಾರೆ. ಮೈಸೂರು ಕಾರಾಗೃಹದಲ್ಲಿ ಶೇ 80ರಷ್ಟು ಕೈದಿಗಳು ಗ್ರಾಮೀಣ ಭಾಗದವರೇ ಇರುವುದರಿಂದ ಕುರಿ ಸಾಕಾಣಿಕೆ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಬದುಕಿನ ಬಂಡಿ ಸಾಗಿಸಲು ಕುರಿ ಸಾಕಾಣಿಕೆ ಅವರ ನೆರವಿಗೆ ಬರಲಿದೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.