ರತ್ನಾಕರವರ್ಣಿ ವೇದಿಕೆ, ವಿದ್ಯಾಗಿರಿ (ಮೂಡುಬಿದಿರೆ): `ವಿಷಯ ಗ್ರಹಣಕ್ಕಾಗಿ ಇಂಗ್ಲಿಷ್ ಓದಿದರೂ ಸ್ವಂತ ವಿಚಾರ ಮಾಡಲು ಮಾತೃಭಾಷೆಯೇ ಬೇಕು. ನಮ್ಮ ಭಾಷೆಯಲ್ಲೇ ಪ್ರೌಢಿಮೆ ಸಾಧಿಸಿ ನಮ್ಮಲ್ಲಿರುವ ಜ್ಞಾನ ಅಭಿವ್ಯಕ್ತಿಪಡಿಸಿದ್ದೇ ಆದರೆ ಕನ್ನಡವೂ ವಿಶ್ವಭಾಷೆಯಾಗುವುದು ನಿಶ್ಚಿತ~ ಎಂದು ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅಭಿಪ್ರಾಯಪಟ್ಟರು.

ಶುಕ್ರವಾರ ಇಲ್ಲಿ ಆರಂಭವಾದ 9ನೇ ವರ್ಷದ ಕನ್ನಡ ನಾಡು, ನುಡಿಯ ರಾಷ್ಟ್ರೀಯ ಸಮ್ಮೇಳನ `ಆಳ್ವಾಸ್ ನುಡಿಸಿರಿ~ ಉದ್ಘಾಟಿಸಿ ಅವರು ಮಾತನಾಡಿದರು. ಯೂರೋಪ್ನ ಇತರ ಎಲ್ಲ ಭಾಷೆಗಳಿಗೂ ಗಡಿ ಇದೆ. ಆದರೂ ಅಲ್ಲಿನ ಪ್ರತಿಭಾವಂತರು ತಮ್ಮ ಸಾಧನೆಗಳ ಮೂಲಕ ಜಗತ್ತಿಗೆ ಪರಿಚಿತರಾಗಿದ್ದಾರೆ. ಇಂತಹ ಸಾಧನೆ ತೋರುವುದು ಕನ್ನಡಕ್ಕೂ ಅಸಾಧ್ಯವೇನಲ್ಲ ಎಂದರು.

ನಮ್ಮಲ್ಲಿನ ಪ್ರತಿಭೆಗಳೂ ಮಾತೃಭಾಷೆಯಲ್ಲೇ ತಮ್ಮ ಜ್ಞಾನವನ್ನು ವ್ಯಕ್ತಪಡಿಸುವಂತಾದರೆ ಪ್ರತಿಭೆಗಳ ಜತೆಗೆ ಕನ್ನಡವೂ ಬೆಳೆಯುತ್ತದೆ, ವಿಶ್ವಭಾಷೆಯಾಗುತ್ತದೆ~ ಎಂದು ವಿಶ್ಲೇಷಿಸಿದರು.

`ಅಲ್ಲಮನ ವಚನಗಳನ್ನು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವಾಗ ಅದರ ಆಶಯಗಳೆಲ್ಲ ಆಧುನಿಕ ಕಾಲಕ್ಕೆ ತಕ್ಕಂತೆಯೇ ಇವೆ ಎಂದು ಅಲ್ಲಿನ ವಿದ್ಯಾರ್ಥಿಗಳು ಹೇಳುತ್ತಾರೆ. ಪಂಪ, ಕುಮಾರವ್ಯಾಸ ಅವರೆಲ್ಲರೂ ಪಾಶ್ಚಿಮಾತ್ಯ ದೇಶಗಳ ಅದೆಷ್ಟೋ ಚಿಂತಕರು ನಡೆಸಿದ ಚಿಂತನೆಗಿಂತ ಕಡಿಮೆ ಇಲ್ಲದಂತೆ ಚಿಂತನೆ ನಡೆಸಿ ಕೃತಿಯಲ್ಲಿ ಮೂಡಿಸಿದವರು. ತ್ಯಾಗ, ಭೋಗ ವಿಚಾರದಲ್ಲಿ ರತ್ನಾಕರವರ್ಣಿ ಹೇಳಿದ್ದನ್ನೇ ಕವಿ ಏಟ್ಸ್ ಹೇಳಿದ. ಕನ್ನಡದ ಸತ್ವವೇ ನಮಗೆ ಗೊತ್ತಿಲ್ಲ, ಅದನ್ನು ಪ್ರಕಟಪಡಿಸುವ ಕೆಲಸ ನಡೆಯಬೇಕು~ ಎಂದು ಅನಂತಮೂರ್ತಿ ಅವರು ನುಡಿದರು.

`ಸಿರಿ~ವಂತರು: ತಮಿಳುನಾಡು, ಆಂಧ್ರ ಹಾಗೂ ಹಿಂದಿ ಭಾಷಾ ಪ್ರಾಂತ್ಯಗಳಲ್ಲಿ ಇರುವಂತಹ ಶ್ರಿಮಂತರು ಕನ್ನಡದಲ್ಲೂ ಇದ್ದಾರೆ. ಆದರೆ ಕನ್ನಡದ ಕೆಲಸಕ್ಕೆ ಅವರು ಕಾಸು ಬಿಚ್ಚುವವರಲ್ಲ. ಡಾ.ಮೋಹನ್ ಆಳ್ವ ಅವರು ಶ್ರೀಮಂತರಲ್ಲದಿರಬಹುದು. ಆದರೆ ಅವರು `ಸಿರಿ~ವಂತರು. ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಅವರು ಹಾಕಿಕೊಟ್ಟ ಮಾರ್ಗ ಅನುಕರಣೀಯ. ಕನ್ನಡ ಉಳಿಯುವುದು, ಬೆಳೆಯುವುದು ಇಂತಹವರಿಂದ~ ಎಂದು ಅವರು ಶ್ಲಾಘಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿದರು.

ಪ್ರೊ. ಜಿ. ವಿ ಸನ್ಮಾನ: ವಿದ್ವಾಂಸ, ನಿಘಂಟು ತಜ್ಞ ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆ ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರದೊಂದಿಗೆ ವಿಶೇಷ ಗೌರವ ಸಮರ್ಪಿಸಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಜಿ.ವಿ.ಅವರನ್ನು ಸನ್ಮಾನಿಸಿದರು.

ಡಾ.ಮೋಹನ್ ಆಳ್ವ ಅವರು ಮಾತನಾಡಿ, ಮುಂದಿನ ವರ್ಷದ ನುಡಿಸಿರಿಯನ್ನು ವಿಶ್ವನುಡಿಸಿರಿಯಾಗಿ ನಡೆಸಲು ನಡೆಸಿರುವ ಸಿದ್ಧತೆಗಳನ್ನು ಸಭೆಯ ಮುಂದಿಟ್ಟರು.

ನುಡಿಸಿರಿ ರಂಗು
ಸಮಯಕ್ಕೆ ಸರಿಯಾಗಿ ಬೆಳಿಗ್ಗೆ 9 ಗಂಟೆಗೆ ವಿದ್ಯಾಗಿರಿಯಲ್ಲಿ ಕರಾವಳಿಯ ಬೆಡಗು, ಬಿನ್ನಾಣ ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳ ಜಾನಪದ ಕಲಾ ತಂಡಗಳ ಬೈಭವದೊಂದಿಗೆ ಮೆರವಣಿಗೆ ಆರಂಭವಾಯಿತು. ಸಭಾಂಗಣದ ಮಧ್ಯಭಾಗದಿಂದ ಬಂದ ತಂಡಗಳು ವೇದಿಕೆಯ ಮೇಲೇರಿ ಸಂಕ್ಷಿಪ್ತ ಪ್ರದರ್ಶನ ನೀಡಿ ನಿರ್ಗಮಿಸಿದವು. ಕೊನೆಯಲ್ಲಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಲಾದ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರನ್ನು ವೇದಿಕೆಗೆ ಕರೆತಂದಾಗ ಹರ್ಷೋದ್ಘಾರ ಮೊಳಗಿತು.

ಚಳವಳಿ ಅನಿವಾರ್ಯ
ಕನ್ನಡ ನಾಡು, ನುಡಿ ಉಳಿಸುವಲ್ಲಿ ಚಳವಳಿಗಳು ಬಹಳ ಮುಖ್ಯ ಪಾತ್ರ ವಹಿಸಿವೆ. ವಲಸೆ ಬಂದ ಅನ್ಯ ಭಾಷಿಕರು ನಮ್ಮಲ್ಲಿನ ಪರಿಸ್ಥಿತಿಗೆ ಒಗ್ಗಿಕೊಳ್ಳದೆ ಹೋದರೆ ಅವರನ್ನು ಚಳವಳಿಗಳ ಮೂಲಕ ಸರಿದಾರಿಗೆ ತರುವ ಮತ್ತು ನಮ್ಮ ಹಿತವನ್ನು ಕಾಯ್ದುಕೊಳ್ಳುವ ಅಗತ್ಯ ಇದೆ ಎಂದು ಆಳ್ವಾಸ್ ನುಡಿಸಿರಿ 2012ರ ಸರ್ವಾಧ್ಯಕ್ಷ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.