ಗುರುವಾರ , ಜೂನ್ 24, 2021
29 °C

ಟವರ್ ನಿರ್ಮಾಣಕ್ಕೆ ಐಗೂರು ಗ್ರಾಮಸ್ಥರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟವರ್ ನಿರ್ಮಾಣಕ್ಕೆ ಐಗೂರು ಗ್ರಾಮಸ್ಥರ ವಿರೋಧ

ಸೋಮವಾರಪೇಟೆ: ಐಗೂರು ಗ್ರಾಮ ಪಂಚಾಯಿತಿಯ ಅನುಮತಿ ಪಡೆಯದೇ ಬೆಂಗಳೂರಿನ ಕಂಪೆನಿಯೊಂದು ಐಗೂರು ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮುಂದಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಹಾಗೂ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಗಳ ಪದಾಧಿಕಾರಿಗಳು ಸೋಮವಾರ ಸಂಜೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.ಯಡವಾರೆ ಗ್ರಾಮದ ವಿಶ್ವನಾಥ್‌ರಾಜೇ ಅರಸ್ ಎನ್ನುವವರ ಜಾಗದಲ್ಲಿ ಬೆಂಗಳೂರಿನ ಭಕ್ತವತ್ಸಲ ಟವರ್ಸ್ ಲಿಮಿಟೆಡ್ ಸಂಸ್ಥೆಯವರು ಟವರ್ ನಿರ್ಮಾಣದ ಕಾಮಗಾರಿ ಪ್ರಾರಂಭಿಸಿದ್ದಾರೆ. ಕಳೆದ ವರ್ಷ ಗ್ರಾಮಸ್ಥರ ಪ್ರತಿಭಟನೆಯಿಂದ ಕಾಮಗಾರಿ ನಿಲ್ಲಿಸಲಾಗಿತ್ತು. ಈಗ ಗ್ರಾಮ ಪಂಚಾಯಿತಿ ಗಮನಕ್ಕೆ ತರದೆ, ಪಿಡಿಓ ಕಾಮಗಾರಿಗೆ ಅನುಮತಿ ನೀಡಿದ್ದಾರೆ ಎಂದು ಐಗೂರು ಗ್ರಾ.ಪಂ.ಅಧ್ಯಕ್ಷ ಬಿ.ಎಸ್.ಪ್ರಮೋದ್ ಆರೋಪಿಸಿದರು.ಯಡವಾರೆ ಶಾಲೆಯ ಪಕ್ಕದಲ್ಲೆ ಟವರ್ ನಿರ್ಮಾಣವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದು. ಈ ಕಾರಣದಿಂದ ಟವರ್ ನಿರ್ಮಾಣಕ್ಕೆ ಜನಪ್ರತಿನಿಧಿಗಳ ಗಮನಕ್ಕೆ ತರದೆ ಅಧಿಕಾರಿಗಳು ನೀಡಿರುವ ನಿರಾಕ್ಷೇಪಣ ಪತ್ರವನ್ನು ರದ್ದುಪಡಿಸಿ, ಕಾಮಗಾರಿಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.ಗ್ರಾಮಸ್ಥರ ವಿರೋಧದ ನಡುವೆ ಕಾಮಗಾರಿ ಮುಂದುವರಿಸಿದರೆ ಉಗ್ರ ಹೋರಾಟ ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ವಿಜಯ ಕುಮಾರ್, ಸದಸ್ಯರಾದ ಸಂತೋಷ್, ದಾಕ್ಷಾಯಣಿ, ದಿನೇಶ್, ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಗಳ ಪದಾಧಿಕಾರಿಗಳಾದ ಜಾಜಿ, ಕೆ.ಆರ್.ರತ್ನವತಿ, ಪೂರ್ಣಿಮ, ಕೆ.ಎಸ್.ಮೀನಾಕ್ಷಿ, ಗೀತಾ, ಪ್ರಮುಖರಾದ ಮಚ್ಚಂಡ ಅಶೋಕ್, ಎಲ್.ಎಂ.ಯತೀಶ್, ನಾರೂರು ಯತೀಶ್, ಡಿ.ಬಿ.ಕೃಷ್ಣಪ್ಪ, ಜಯಕುಮಾರ್ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.